ಕ್ಯಾಲಿಫೋರ್ನಿಯ ಪಾಪಿ california poppy
ಇದು ಕ್ಯಾಲಿಪೋರ್ನಿಯ ಪಾಪಿ (california poppy) ಕನ್ನಡದ ಪಾಪಿಯಲ್ಲ ಮತ್ತೆ! ನೀವು ಬೇಕಾದ್ರೆ` ಪೋಪಿ' ಅಂತ ಹೇಳಿಕೊಳ್ಳಿ.(ನಾನು ಹೇಳುವ ಹಾಗೆ!) ಈ`ಸುಂದ್ರಿ' ಕ್ಯಾಲಿಪೋರ್ನಿಯದ ರಾಜ್ಯಪುಷ್ಪ ಎಂದು ಘೋಷಿತವಾಗಿದ್ದು 1903 ರಲ್ಲಿ.ಗೋಲ್ಡನ್ ಸ್ಟೇಟ್ ಎಂದೇ ಕರೆಸಿಕೊಳ್ಳುವ ಕ್ಯಾಲಿಫೋರ್ನಿಯದ ಗೋಲ್ಡನ್ ಇಮೇಜ್ ಗೆ ಪೂರಕವಾಗಿ ಚಿನ್ನದ ಬಣ್ಣದ ಹೂ ಅರಳಿಸಿ ನಗುವ ಕಾರಣದಿಂದಾಗಿಯೇ ಇವಳು ತನ್ನ ಇತರ ಗೆಳತಿಯರನ್ನು ಹಿಂದೆ ಹಾಕಿ ಈ ಸ್ಥಾನ ಗಿಟ್ಟಿಸಿಕೊಂಡಳಂತೆ. ಪ್ರತಿ ವರ್ಶ ಏಪ್ರಿಲ್ 6 ರಂದು `ಕ್ಯಾಲಿಫೋರ್ನಿಯ ಪಾಪಿ ಡೇ' ಅಂತ ಆಚರಿಸುತ್ತಾರೆ. ಮಾದಕ ವಸ್ತುಗಳನ್ನು ಉತ್ಪಾದಿಸಲು ಮೂಲಸಾಮಗ್ರಿ ಒದಗಿಸಿ ಎಲ್ಲರಿಂದಲೂ ಬೈಸಿಕೊಳ್ಳುವ ನಿಜವಾದ` ಪಾಪಿ ' ಅರ್ಥಾತ್ ಗಸಗಸೆ ಗಿಡವೂ (Opium poppy=papaver somniferum ) ಕ್ಯಾಲಿಫೋರ್ನಿಯ ಪಾಪಿಯೂ (california poppy= Eschschotzia californica ) ಒಂದೇ ಕುಟುಂಬಕ್ಕೆ ಸೇರಿದವರು.ಆದರೆ ನಮ್ಮ ಈ ಪಾಪಿಯ ಮಾದಕತೆ ಅವಳ ಸೌಂದರ್ಯಕ್ಕಷ್ಟೇ ಸೀಮಿತವಾಗಿದೆ . ಪಾಪಿ ಹೂ ಸಾಮಾನ್ಯವಾಗಿ ಕಿತ್ತಳೆ ಬಣ್ಣದ್ದಾಗಿರುತ್ತೆ.ಅರಿಸಿನ ಹಳದಿಯದೂ, ತಿಳಿ ಕೆನೆ ಬಣ್ಣದ್ದೂ ಸ್ವಲ್ಪ ಅಪರೂಪ. ವಸಂತದಲ್ಲಿ ಈ `ಪಾಪಿ' ಗಳದ್ದೇ ಕಾರುಭಾರು ಇಲ್ಲಿನ ಬೆಟ್ಟ-ಗುಡ್ಡಗಳ ತುಂಬಾ......
1 Comments:
ನಾವೇನೋ ಕ್ಯಾಲಿಫೋರ್ನಿಯ ರಾಜ್ಯಕ್ಕೆ ಬಂದಿದೀವಿ. ಇನ್ನೂ ನಿಮ್ಮ ’ಪಾಪಿ’ ನ ನೋಡಿಲ್ಲ !
Post a Comment
Subscribe to Post Comments [Atom]
<< Home