Sunday, September 03, 2006

"ಲ್ಯಾಂಬೋರ್ಗಿನಿ.......!"

ಬೆಂಗಳೂರಿಂದ ಬೇ ಏರಿಯಾಕ್ಕೆ ಬಂದಿದ್ದ ನಮ್ಮ ಬಳಗದ ಹುಡುಗನೊಬ್ಬನನ್ನು ಸುತ್ತ-ಮುತ್ತಲಿನ ಜಾಗಗಳನ್ನು ತೋರಿಸುತ್ತಾ ಪೆಸಿಫಿಕ್ ಸಾಗರ ತೀರದ`ಕಾರ್ಮೆಲ್' ಎಂಬ ಜಾಗಕ್ಕೆ ಕರಕೊಂಡು ಹೋಗಿದ್ದೆವು. ನೀಲಿ ಸಾಗರದ ಹಿನ್ನಲೆಯಲ್ಲಿ ಯಾವುದೋ ಆಟೋ `ಮ್ಯಾಗ್ ಝೇನ್' ಗಾಗಿ `ಆಡ್ ಶೂಟಿಂಗ್' ನಡೀತಿತ್ತು. ಯಾರಾದರೂ ಸ್ಟಾರ್ ಕಾಣುತ್ತಾರಾ ಅಂತ ನಾವು ಇಣುಕಿದಾಗ ಕಂಡ `ಸ್ಟಾರ್' ಈ "ಲ್ಯಾಂಬೋರ್ಗಿನಿ!" ಇವಳನ್ನು ನೋಡಿ ನಮ್ಮ ಹುಡುಗ ಫುಲ್ ಫ್ಲ್ಯಾಟ್!
`ಇದೇನು ಒಳ್ಳೇ ನಂದಿನಿ...ಶಾಲಿನಿ...ಮಂದಾಕಿನಿ... ತರ ಇದೆಯಲ್ಲಾ ...' ಅಂತಾ ನಾನು ತಮಾಶೆ ಮಾಡಿದ್ದಕ್ಕೆ ಕಾರುಗಳ ಬಗೆಗಿನ ನನ್ನ ಅಜ್ಞಾನಕ್ಕೆ ಮರುಕ ಪಡುತ್ತಾ "ನಂದಿನಿ,ಶಾಲಿನಿ,ಕೊನೆಗೆ ಮಂದಾಕಿನಿ ಬೇಕಾದ್ರೂ ಸಿಗ್ಬಹುದೇನೋ...ಆದರೆ ಇಂಥಾ ಲ್ಯಾಂಬೋರ್ಗಿನಿ ಸಿಗುತ್ತಾಳಾ..."ಎನ್ನುವಂತೆ ನನ್ನ ಮುಖ ನೋಡಿದ, ಬಿ.ಇ.ಮುಗಿಸಿ ಇನ್ನೂ ಒಂದು ವರ್ಷವೂ ಆಗಿರದ ನಮ್ಮ ಬೆಂಗಳೂರಿಗ.`ಇದಕ್ಕೆ ಎಷ್ಟಾಗುತ್ತೇ...?'ಅಂತಾ ನಾನು ಮೆಲ್ಲಗಿನ ಧ್ವನಿಯಲ್ಲಿ ಅರವಿಂದನ್ನ ಕೇಳಿದೆ.`ಮಾಡೆಲ್ ಅನುಸರಿಸಿ $ 125,000 ರಿಂದ ಶುರುವಾಗಿ $375,000 ತನಕ ಆಗುತ್ತೆ ಅಂತ ಉತ್ತರ ಬಂತು!.45ರಿಂದ ಅರವಿಂದ ಹೇಳಿದ ಸಂಖ್ಯೆಯನ್ನು ಗುಣಿಸಲು ತಲೆಯಲ್ಲಿ ಓಪನ್ ಮಾಡಿದ್ದ `ವಿಂಡೋ'ನ್ನ ಶಟ್ಟಿಸಿ ನಾನು ತೆಪ್ಪಗಾದೆ.

0 Comments:

Post a Comment

Subscribe to Post Comments [Atom]

<< Home