ಹಾಡು ಬಾ ಕೋಗಿಲೇ ನಲಿದಾಡು ಬಾರೆ ನವಿಲೇ...

ನವಿಲುಗಳಲ್ಲಿ ಎರಡು ಜಾತಿಯವನ್ನು ಜೀವಶಾಸ್ತ್ರದ ವಿಜ್ಞಾನಿಗಳು ಗುರುತಿಸುತ್ತಾರೆ.ನೀಲಿ ಮೈಹೊಂದಿದ ಇಂಡಿಯನ್ ಪೀಕಾಕ್, ಹಸಿರಾದ ಬರ್ಮೀಸ್ ಪೀಕಾಕ್.ಆದರೆ ನವಿಲು ಅಂತಾ ಜಗತ್ತೆಲ್ಲಾ ಕರೆಯುವುದು ನಮ್ಮ ನವಿಲನ್ನೇ. ಈಗೇನೋ `ಕಾಂಗೋ ಪೀಕಾಕ್' ಎಂಬ ಮೂರನೇ ಜಾತಿಯನ್ನು ಆಫ್ರಿಕಾದಲ್ಲಿ ಗುರುತಿಸಿದ್ದಾರಂತೆ.
ತಮ್ಮ ಮತ್ತು ನವಿಲಿನ ಚಿಕ್ಕಂದಿನ ಒಡನಾಟವನ್ನು ನಮ್ಮ ಸುಪ್ರಸಿದ್ದ ಕಾದಂಬರಿಕಾರ ಆರ್.ಕೆ.ನಾರಾಯಣ್ ತಮ್ಮ ಆತ್ಮಕಥೆ `ಮೈ ಡೇಸ್'ನಲ್ಲಿ ತುಂಬಾ ಸ್ವಾರಸ್ಯಕರವಾಗಿ ವಿವರಿಸುತ್ತಾರೆ. ಅವರ ಅಮ್ಮನಿಗೆ ಅನಾರೋಗ್ಯವಾಗಿದ್ದರಿಂದ ಬಾಲಕ ನಾರಾಯಣ್ ಅಜ್ಜಿ ಮನೆಯಲ್ಲಿ ಬಾಲ್ಯ ಕಳೆಯಬೇಕಾಯಿತಂತೆ. ಚಿಕ್ಕ ಹುಡುಗನನ್ನು ತಾಯಿಯಿಂದ ಬಿಡಿಸಿ ಕರೆದುಕೊಂಡು ಬಂದಿದ್ದೇವೆ ಎಂಬ ಕನಿಕರಕ್ಕೋ ಏನೋ ಅವರ ಮಾವ ಅವರಿಗೆ ಆಡಲು ಒಂದು ನವಿಲು ಮತ್ತು ಒಂದು ಕೋತಿ ತಂದು ಕೊಟ್ಟಿದ್ದರಂತೆ.ಒಮ್ಮೆ ಬಾಲಕ ನಾರಾಯಣ್ ಬೀದಿಬಾಗಿಲಲ್ಲಿ ತಮ್ಮ ನವಿಲಿನೊಡನೆ ನಿಂತಿದ್ದಾಗ ನೆರೆಯ ಹುಡುಗನೊಬ್ಬ `ನನಗೊಂದು ಗರಿ ಕೊಡೋ' ಅಂತ ಕೇಳಿದನಂತೆ.ಇವರು `ನನ್ನ ಹತ್ರ ಹೇಗೂ ಇಡೀ ನವಿಲೇ ಇದ್ಯಲ್ಲಾ ಒಂದು ಗರಿ ಹೋದರೇನೀಗಾ 'ಅಂತ ದೊಡ್ಡ ದಾನಶೂರ ಕರ್ಣನ ಪೋಸು ಕೊಡುತ್ತಾ`ನಿಂಗೆ ಯಾವುದ್ ಬೇಕೋ ನೀನೇ ಕಿತ್ಕೋ'ಅಂತ ಹೇಳಿದರಂತೆ. ಆ ಹುಡುಗ ಗರಿಗೆ ಕೈ ಹಾಕಿದ್ದೇ ತಡ, ನವಿಲು ವಿಪರೀತ ಕೋಪ ಮಾಡಿಕೊಂಡು ಹುಡುಗನ ಕೈ ತೂತಾಗುವಂತೆ ಕುಕ್ಕಿಬಿಟ್ಟಿತಂತೆ. ಆಗ ನಾರಾಯಣ್ ಅವರ ಅಜ್ಜಿ ಓಡಿ ಬಂದು ಆ ಬಡಪಾಯಿ ಹುಡುಗನ ಕೈಗೆ ಪಟ್ಟಿ ಕಟ್ಟಿ ಆರೈಕೆ ಮಾಡಿದರಂತೆ.
3 Comments:
chennaagide
chennaagide
ಅನಾಮಿಸ ದ್ವಯರಿಗೆ, ವಂದನೆಗಳು
ಹೀಗೇ ದುರ್ಗಕ್ಕೆ ಆಗಾಗ ಬನ್ನಿ
Post a Comment
Subscribe to Post Comments [Atom]
<< Home