ಕೋಡುಬಳೆ
ನಿನ್ನೆಯ ಪೋಸ್ಟ್ ನ ತಲೆಬರಹ ನೋಡಿ ಅರವಿಂದ ಆ ಹಾಡನ್ನು ಚಿಕ್ಕಂದಿನಲ್ಲಿ ತನ್ನ ಸ್ವಂತ ರೀತಿಯಲ್ಲಿ ಹಾಡುತ್ತಿದ್ದುದನ್ನು ನೆನಪಿಸಿಕೊಂಡ ಅದು ಹೀಗೆ...``ಆಡು ಬಾ ಕೋಡ್ ಬಳೇ...ನಲಿದಾಡು ಬಾರೆ ಚಕ್ಕುಲೀ...' ಆ ಹಾಡು ಕೇಳಿ ನನಗೆ ಬಾಯಲ್ಲಿ ನೀರೂರಿ ಬಿಟ್ಟಿತು! ಮನೆಯಲ್ಲಿದ್ದ ಕೋಡುಬಳೆ ಅಂಡ್ ಚಕ್ಕುಲಿಯ ಲಾಸ್ಟ್ ಕಂತು ತಟ್ಟೆಗೆ ಹಾಕಿಕೊಂಡು ನಾಲಿಗೆಯ ಮೇಲೆ ನಲಿದಾಡಿಸುತ್ತಾ ಇದನ್ನು ಬರೆಯುತ್ತಿದ್ದೇನೆ.ನಾನು ಕೆಳಗೆ ಕೊಡಲಿರುವುದು ಅಂತಿಂಥಾ ರೆಸಿಪಿ ಅಲ್ಲಾ...ನಮ್ಮಮ್ಮನ ಸೆವೆರಲ್ ಟೈಮ್ಸ್ `ಟ್ರೈಡ್ ಅಂಡ್ ಟೆಸ್ಟೆಡ್' ರೆಸಿಪಿ!
ಬಹಳಾ ಅಥೆಂಟಿಕ್ ರೆಸಿಪಿ ಇದು ಓದುವಂತವರಾಗಿ.....
ರುಚಿ ರುಚಿ ಕೋಡು ಬಳೆ
---------------
ಬೇಕಾದ ಸಾಮಾಗ್ರಿಗಳು-ಅಕ್ಕಿ ಹಿಟ್ಟು-4 ಕಪ್, ಸಣ್ಣ (ಚಿರೋಟಿ)ರವೆ-1 ಕಪ್, ವನಸ್ಪತಿ-3/4 ಕಪ್, 1/2 ಹೋಳು ತೆಂಗಿನಕಾಯಿ ತುರಿ, 20 ಒಣ ಮೆಣಸಿನ ಕಾಯಿ (ಬ್ಯಾಡಗಿ) ಕಡಲೇ ಕಾಳು ಗಾತ್ರದ ಇಂಗು, ರುಚಿಗೆ ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ-
ಅಕ್ಕಿ ಹಿಟ್ಟು, ಸಣ್ಣ ರವೆ ಎರಡನ್ನೂ ಜರಡಿಯಾಡಿ ವನಸ್ಪತಿ ಕರಗಿಸಿ ಅದಕ್ಕೆ ಹಾಕಿ ಕಲೆಸಿ 1ಘಂಟೆ ಕಾಲ ಮುಚ್ಚಿಡಿ.ತೆಂಗಿನತುರಿ,ಒಣ ಮೆಣಸಿನ ಕಾಯಿ ಮತ್ತು ಇಂಗನ್ನು ಮಿಕ್ಸಿಯಲ್ಲಿ ರುಬ್ಬಿ.ಈ ಮಿಶ್ರಣವನ್ನು ಹಿಟ್ಟಿಗೆ ಹಾಕಿ ಉಪ್ಪು ಸೇರಿಸಿ ಚೆನ್ನಾಗಿ ಕಲೆಸಿ.ಒಂದು ಅಥವಾ ಎರಡು ಒಬ್ಬೆಗಳಿಗಾಗುವಷ್ಟು ಹಿಟ್ಟಿಗೆ ಮಾತ್ರ ಸ್ವಲ್ಪವೇ ನೀರು ಹಾಕಿಕೊಂಡು ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ.ಎಲ್ಲಾ ಹಿಟ್ಟನ್ನೂ ಒಮ್ಮೆಗೇ ಕಲಸಿ ಇಡಬೇಡಿ.ಸ್ಟೀಲ್ ತಟ್ಟೆಯೊಂದನ್ನು ಬೋರಲು ಹಾಕಿ ಸ್ವಲ್ಪ ಎಣ್ಣಿ ಹಚ್ಚಿ ನಿಂಬೆ ಗಾತ್ರದ ಹಿಟ್ಟನ್ನು ಕೋಡುಬಳೆ ಆಕಾರದಲ್ಲಿ ಹೊಸೆಯಿರಿ.ಅಗಲ ತಳದ ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಕೋಡುಬಳೆಗಳನ್ನು ಕರೆಯಿರಿ.ಸಂಜೆ ಟೀ ಜೊತೆಗೆ ಮೆದ್ದರೆ ಆಹಾ! ಅಂತ ಸ್ವರ್ಗಕ್ಕೆ ಕಿಚ್ಚು ಹಚ್ಚುವಂತೆ ಇರುತ್ತೆ!
7 Comments:
ಚಿತ್ರ-ದುರ್ಗ ಅಂತ ಹೆಸರಿಟ್ಟಿದೀರಲ್ಲ? ಚಿತ್ರದುರ್ಗಕ್ಕೂ ನಿಮಗೂ ಏನಾದರೂ ಸಂಬಂಧ?
ಕೋಡುಬಳೆ ಬಗ್ಗೆ ಬರೆದು ಆಸೆ ಹುಟ್ಟಿಸಿದ್ದೀರಿ. ಸದ್ಯದಲ್ಲೇ ನಮ್ಮ ಮನೆಯಲ್ಲೂ ಇದೆ ಕೋಡುಬಳೆ ಕಾರ್ಯಕ್ರಮ. ನಾನು ಇಷ್ಟು ದಿನ ಎಲ್ಲಾ ಹಿಟ್ಟನ್ನು ಒಟ್ಟಿಗೆ ಕಲೆಸಿಕೊಳ್ಳುತ್ತಿದ್ದೆ. ಈಗ ನೀವು ಕೊಟ್ಟಿರುವ ಟಿಪ್ಸ್ ಪ್ರಕಾರ ಸ್ವಲ್ಪ ಸ್ವಲ್ಪ ಕಲೆಸಿಕೊಳ್ತೀನಿ. ಇದರಿಂದ ಇರುವ ಇನ್ನೊಂದು ಪ್ರಯೋಜನವೆಂದರೆ - ಬೇಜಾರಾದರೆ ಅರ್ಧಕ್ಕೆ ನಿಲ್ಲಿಸಬಹುದು :)
test
ನಾನೊಂದು ಕಾಮೆಂಟ್ ಹಾಕಿದ್ದೆ. ಹೋಯಿತೋ ಇಲ್ಲವೋ ಗೊತ್ತಾಗಲಿಲ್ಲ..
ಶ್ರೀತ್ರಿ ಅವರಿಗೆ,
ಮೊದಲಿಗೆ ಸ್ವಾಗತ.ಕಮೆಂಟ್ ಬರೆದದ್ದಕ್ಕೆ ಥ್ಯಾಂಕ್ಸ್ ನಾನು
ಚಿತ್ರದುರ್ಗದಲ್ಲಿ ಕಳೆದ ಕೆಲ ವರ್ಶಗಳ ಸವಿನೆನಪಿಗಾಗಿ ಮತ್ತು
ನನ್ನ ಬ್ಲಾಗ್ ಮುಖ್ಯವಾಗಿ ಚಿತ್ರ ಗಳನ್ನೇ ಆಧರಿಸಿದ `ಚಿತ್ರಗಳ ಮನೆ'ಯಾದ್ದರಿಂದ ಚಿತ್ರ-ದುರ್ಗ ಅಂತ ಇಟ್ಟಿದ್ದು.
ನಿಮ್ಮ ಕೋಡುಬಳೆ ಕಾರ್ಯಕ್ರಮಕ್ಕೆ ಗುಡ್ ಲಕ್
ಈ ವಾರಾಂತ್ಯದಲ್ಲಿ ನಮ್ಮ ಮನೆಯಲ್ಲಿ ಕೋಡುಬಳೆ ಕಾರ್ಯಕ್ರಮ ಯಶಸ್ವಿಯಾಯಿತು. ಸದ್ಯಕ್ಕೇನೋ ಒಂದು ಡಬ್ಬದ ತುಂಬಾ ಇದೆ. ನಮ್ಮ ಮನೆಗೆ ಬಂದವರಿಗೆ (ಖಾಲಿ ಆಗಿರದಿದ್ದರೆ) ಲಭ್ಯವಿದೆ :-)
ಮುಂದಿನ ತಿಂಡಿ ಏನು ಮಾಡೋಣ?
ಕೋಡುಬಳೆ ಮತ್ತು ಚಕ್ಕುಲಿಗಳ ಚಿತ್ರವನ್ನು ಕಂಡು, ತಿನ್ನುವ ಮನಸ್ಸಾಗುತ್ತಿದೆ. ಬಹಳ ದಿನಗಳಿಂದ ಎಣ್ಣೆ ಪದಾರ್ಥ ತಿನ್ನಬಾರದೆಂದು ಸಂಕಲ್ಪಿಸಿದ್ದರೂ ಆಸೆ ಹುಟ್ಟಿಸಿದಿರಿ.
ಒಳ್ಳೆಯದಾಗಲಿ.
ಶ್ರೀತ್ರೀ ಅವರೇ,
ಕ್ಯಾಲಿಫೋರ್ನಿಯಾ ಕಡೆಗೂ ಒಂದ್ ನಾಕು ಕೋಡುಬಳೆ ಕಳಿಸಿ
ನಾನು ಯೋಚಿಸುತ್ತಿದ್ದೇನೆ ನೆಕ್ಸ್ಟ್ ಏನು ತಿಂಡಿ ಮಾದೋದು ಅಂತಾ....
ತವಿಶ್ರೀ ಅವರೇ
ನಾನೂ ಎಣ್ಣೆ ತಿಂಡಿ ತಿನ್ನಬಾರದೆಂದು `ಯಾವಾಗಲೂ'
ಸಂಕಲ್ಪಿಸುತ್ತಿರುತ್ತೇನೆ. ಸಿಗರೇಟ್ ಸೇದುವವರು ಅದನ್ನು
ಎಷ್ಟೊಂದು ಸಲ ಬಿಟ್ಟಿರುತ್ತಾರಲ್ಲಾ ಹಾಗೆ. ಆದರೇನು
ಮಾಡುವುದೂ....ಆಸೆ ಹುಟ್ಟಿಬಿಡುತ್ತದೆ ನನಗೂ...
(ವಿ.ಸೂ. ಯಾವಾಗಲೂ ಅಂದರೆ ಸದರಿ ತಿಂಡಿ ಎದುರಲ್ಲಿ ಇಲ್ಲದಿದ್ದಾಗ ಎಂದು ಅರ್ಥೈಸಿಕೊಳ್ಳಬೇಕು)
Post a Comment
Subscribe to Post Comments [Atom]
<< Home