ಹಸುರಿನ ಮಡಿಲು ಏನೆಂಥ ಒಡಲು
ಹಸುರಿನ ಮಡಿಲು ಏನೆಂಥ ಒಡಲು
ನಿನ್ನ ಆಸರೆಯೇ ಮುದವಿಟ್ಟ ಗುಡಿಯು
ಓ ನಮ್ಮ ತಾಯಿ... ಗಿಡಬಳ್ಳಿಯಾಗಿ
ನೆಲದ ಹಾಸಾಗಿ ತಲೆಮೇಲೆ ತೂಗಿ
ನೀನೇನೆ ನಮ್ಮ ಆಹಾರವಮ್ಮ
ಅಪ್ಪಿಡುವೆ ನಿನ್ನ ಅಪ್ಪಿಕೋ ಬಾಮ್ಮ
ಓ ನೀನೆ ಮಾಯಿ... ಹೂಗೊಂಚಲಾಗಿ
ಮಧುವಾಗಿ ಚೆಲುವಾಗಿ ಸವಿಜೇನು ತೂಗಿ
ನೀನೇನೆ ನಮ್ಮ ಒಲವಿಂಚಿಯಮ್ಮ
ಅಪ್ಪಿಡುವೆ ನಿನ್ನ ಅಪ್ಪಿಕೋ ಬಾಮ್ಮ
ಹೇ ಮಹಾ ಮಾಯಿ...ಹಸುರಾದ ಬಾಯಿ
ಚಿಗುರಿಡುವ ಸೊನೆಗರೆವ ಹೂಹಣ್ಣು ಕಾಯಿ
ನೀನೇನೆ ನಮ್ಮ ಗುರಿ ತೋರಿಸಮ್ಮ
ಅಪ್ಪಿಡುವೆ ನಿನ್ನ ಅಪ್ಪಿಕೋ ಬಾಮ್ಮ
- ವೇಣುಗೋಪಾಲ ಸೊರಬ
********
ವೇಣುಗೋಪಾಲ ಸೊರಬ(1937-)ಕನ್ನಡದ ಪ್ರಮುಖ ಕವಿ ಬೆಂಗಳೂರು ಜಿಲ್ಲೆಯ ದೇವನಹಳ್ಳಿಯವರು
ಮುಸುಕು-ನಸುಕು ,ಜೀವ-ಜೀವಂತ ,ಗರಿ ಮುರಿದ ಹಕ್ಕಿಗಳು ಇವರ ಕೆಲವು ಕವನ ಸಂಕಲನಗಳು
ಸೊರಬ ಅವರ ಗರಿ ಮುರಿದ ಹಕ್ಕಿಗಳು”(1974) ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಬಂದಿದೆ
3 Comments:
ಮಾಲಾ...
ಒಂದೊಳ್ಳೆಯ ಕವನ ಹಾಗೂ ಸುಂದರಸೊಬಗಿನ ಬನದಬಣ್ಣವನ್ನು ಹಂಚಿಕೊಂಡಿದಕ್ಕೆ ಧನ್ಯವಾದಗಳು.
ನಿಸರ್ಗ ರಮಣೀಯ ಸುಂದರ ಚಿತ್ರ - ಅದಕ್ಕೆ ತಕ್ಕುದಾದ ಕವನ ಹೊಂದಿಸಿದ್ದಕ್ಕೆ ವಂದನೆಗಳು
Namaskar nimmelarigu,
Nanna hesaru Lingaraju.N, chitradurgada challakere inda, chitradurga blog nodi bahala sontasha ayitu, nanage kannada nudi baruthe, aadare ille kannadadali hege bariyudu anta mail madi( lingaraju.nhr2007@yahoo.co.in) nimma sandeshkkagi kayutha iruthhene
inti nimmaya kanada premi,
Post a Comment
Subscribe to Post Comments [Atom]
<< Home