Friday, April 17, 2009

ಬಂದಂತೆ ಮರು ವಸಂತ

ಬಂದಂತೆ ಮರು ವಸಂತ
ನೀ ಬಂದೆ ಬಾಳಿಗೆ
ಅನುರಾಗ, ಆಮೋದ
ಎದೆಯಲ್ಲಿ ತುಂಬಿದೆ

ಕೈ ಸೋಕಿ, ನಿನ್ನ ಬಿಸಿ ತಾಕಿ,
ಚಿಮ್ಮಿದೆ ಹೊಸ ಚಿಗುರು;
ನಗೆಯಂತೆ, ನಿನ್ನ ಬಗೆಯಂತೆ
ಅರಳಿದೆ ಹೂವುಗಳು;
ನಿನ್ನ ಪ್ರೀತಿಯ ಪ್ರಖರತೆಗೆ
ಮಾಗಿಯ ಮಂಜು ತೆರೆ
ಕರಗಿ, ಸೊರಗಿ, ಮರೆಯಾಗಲು
ಜಗವೇ ಝಗಝಗಿಸಿದೆ.

ಕಂದಿದ್ದ ಕಣ್ಣಿಗೆ ಹೊಸ ಹೊಳಪು
ನೀ ತಂದೆ ಹೊಸ ನೋಟವ,
ಎಂದೆಂದೂ ಜೋಡಿ ನಾನೆಂದು
ನೀಡಿದೆ ಒಡನಾಟವ;
ನಿನ್ನ ಒಲವೆಂಬ ಸಂಜೀವಿನಿ
ಹೊಸ ಶಕ್ತಿ ತೋಳಿಗೆ,
ಧೃತಿಯ ತಂದಿಹುದು ಹೆಜ್ಜೆಗೆ,
ಭರವಸೆಯ ಬದುಕಿಗೆ.

- ಬಿ ಆರ್ ಲಕ್ಷ್ಮಣರಾವ್.

ಚಿತ್ರದ ಬಗ್ಗೆ-ಸಿಯರಾ ರೋಡ್ ನಲ್ಲಿನ ಐರಿಸ್ ಫಾರ್ಮ್ ನಲ್ಲಿ ಅರಳಿದ್ದ ಐರಿಸ್ ಹೂಗಳು

ವಸಂತ ಹಬ್ಬ-4

Labels:

2 Comments:

Blogger ಭಾರ್ಗವಿ said...

ವಸಂತ ಹಬ್ಬ ಚೆನ್ನಾಗಿದೆ.
ಚಂದದ ಹೂಗಳ ಫೋಟೋಗಳಂತೂ ಕಣ್ಣಿಗೆ ಹಬ್ಬ.

2:33 PM  
Blogger mala rao said...

ಭಾರ್ಗವಿಯವರೇ,
ದುರ್ಗಕ್ಕೆ ಸ್ವಾಗತ ಮತ್ತು ಪ್ರತಿಕ್ರಿಯೆಗೆ ಧನ್ಯವಾದ
ಆಗಾಗ ಬರುತ್ತಿರಿ

4:50 PM  

Post a Comment

Subscribe to Post Comments [Atom]

<< Home