Tuesday, March 17, 2009

ವಸಂತದ ಕಚಗುಳಿ


ವಸಂತದ ಹೂಗಳೆಲ್ಲಾ ಕಚಗುಳಿ
ಇಡುತ್ತಿರುವಾಗ ಬಂದ
ನೆನಪು ಯಾರದು?



ಅರೆ ತೆರೆದ ಕದವ
ಗಾಳಿ ತಳ್ಳಿದ ಜೋರಿಗೆ
ಎದೆ ಕದಕ್ಕೆ ಯಾವ ನೆನಪು?



ಆಕಾಶದ ಮೋಡಗಳ ಚೆತ್ತಾರದಿ
ಕಂಗಳು ಕಂಡ
ಮುಖ ಯಾರದು?



ಬೇಸಿಗೆಯ ದಿನದಲ್ಲಿ
ಬಿದ್ದ ಮಳೆ ಹನಿ
ತೋಯಿಸಿದ ನೆನಪದಾವುದು?

1 Comments:

Anonymous Anonymous said...

ಮಾಲಾ ಅವರೆ , ವ್ಹಾವ್,
ಹೂವು,ಕವನ,ಫೋಟೋ ಎಲ್ಲ ಸೂಪರ್, ಇದು ನಿಮ್ಮ ತೋಟದ ಹೂವಾ?
ಪಿ ಎಸ್ ಪಿ.

3:57 PM  

Post a Comment

Subscribe to Post Comments [Atom]

<< Home