ಗಾನ ಗಾಂಧಾರಿಯ `ಬದುಕಿನ ಹಾಡು'
ಪ್ರಖ್ಯಾತ ಹಿಂದುಸ್ತಾನಿ ಸಂಗೀತ ವಿದುಷಿ ಗಂಗೂಬಾಯಿ ಹಾನಗಲ್ ಅವರ ಅತ್ಮಕಥೆ`ನನ್ನ ಬದುಕಿನ ಹಾಡು'ಪುಸ್ತಕವನ್ನು ಇತ್ತೀಚೆಗೆ ಓದಿದೆ. ಎನ್ಕೆ ಅವರು ಸೊಗಸಾಗಿ ನಿರೂಪಿಸಿರುವ ಈ ಪುಟ್ಟ ಪುಸ್ತಕ ಹಲವಾರು ಹೃದಯಸ್ಪರ್ಶಿ ವಿವರಗಳಿಂದ ಕೂಡಿದೆ ಅವುಗಳಲ್ಲೊಂದು ಹೀಗೆ...
ಹೆಚ್,ಎಮ್ .ವಿ ಮ್ಯೂಸಿಕ್ ಕಂಪನಿಯವರು ಗಂಗೂಬಾಯಿಯವರ ಗಾನ ಮುದ್ರಿಕೆಯನ್ನು ಹೊರ ತಂದಾಗ ಇವರು ಹುಬ್ಬಳ್ಳಿಯವರಿರಬೇಕು ಎಂದುಕೊಂಡು ಮುದ್ರಿಕೆಗಳ ಮೇಲೆ`ಗಂಗೂಬಾಯಿ ಹುಬಳೀಕರ್' ಅಂತ ಮುದ್ರಿಸಿದ್ದರು.ಅದನ್ನು ನೋಡಿ ಗಂಗೂ ಬಾಯಿಯವರ ಸೋದರಮಾವ `ಹಾನಗಲ್ ಬಿಟ್ಟು ಹುಬಳೀಹರ್ ಅಂತಾ ಬದಲಿಸಿದ್ದೀಕೆ? ನಾವು ಹಾನಗಲ್ ದವರು ಎಂಬ ಅಭಿಮಾನ ಬ್ಯಾಡೇನು?' ಅಂತಾ ತಮ್ಮೂರಿನ ಮೇಲಿನ ಪ್ರೀತಿಯಿಂದ ಆಕ್ಷೇಪಿಸಿದರಂತೆ. ಅದಕ್ಕೆ ಮುಂದಿನ ಬಾರಿ ಧ್ವನಿ ಮುದ್ರಿಸಲು ಮುಂಬೈಗೆ ಹೋದಾಗ ಗಂಗೂಬಾಯಿಯವರು`ಹುಬಳೀಕರ್ ಬ್ಯಾಡಾ' ಅಂತ ಹೇಳಿದರು ಈಗ ಹೆಸರು ಬದಲಿಸಿದರೆ ವ್ಯಾಪಾರಕ್ಕೆಲ್ಲಿ ಅಡ್ಡಿಯಾಗುತ್ತೋ ಎಂದು ಬದಲಿಸುವುದಾದರೆ ಹೆಸರನ್ನೂ ಬೇರೆ ಇಡೋಣಾ ಅಂತ ಹೆಚ್.ಎಮ್.ವಿ ಕಂಪನಿಯವರು ಗಂಗೂಬಾಯಿಯವರ ಜನ್ಮನಾಮವಾದ `ಗಾಂಧಾರಿ' ಎಂಬುದನ್ನು ಅನುಸರಿಸಿ `ಗಾಂಧಾರಿ ಹಾನಗಲ್' ಎಂದು ಬದಲಿಸಿ ಬಿಟ್ಟರು!
ಮುಂದಿನ ಹಲವಾರು ವರ್ಷಗಳು ಸಂಗೀತ ಗಂಗೆಯನ್ನು ಹರಿಸಲಿದ್ದ ಅವರಿಗೆ`ಗಂಗೂಬಾಯಿ ಹಾನಗಲ್' ಎಂದು ಅಧಿಕೃತವಾಗಿ ಘೋಷಿಸಿದ್ದು ಆಲ್ ಇಂಡಿಯಾ ರೇಡಿಯೋ! ಏ.ಐ.ಆರ್ ಪ್ರಥಮ ಬಾರಿಗೆ` ಗಂಗೂ ಬಾಯಿ ಹಾನಗಲ್' ಎಂದು ಘೋಷಿಸಿದ ಕಾರ್ಯಕ್ರಮದಲ್ಲಿ ಗಂಗೂಬಾಯಿಯವರು ಅವರ ಗುರುಗಳಿಂದ ಕಲಿತ `ಮಿಯಾ ಕಿ ಮಲ್ಹಾರ್' ರಾಗವನ್ನು ಅದ್ಬುತವಾಗಿ ಹಾಡಿ ಬಹಳ ಜನಪ್ರಿಯರಾಗಿ ಹೋಗಿದ್ದರಿಂದ ಮುಂದೆ ಅದೇ ಹೆಸರೇ ಅವರಿಗೆ ಖಾಯಂ ಆಯಿತು.

2 Comments:
ಗಾನ ಗಾಂಧಾರಿ ಅಂತ ಓದಿಕೊಂಡು ಗಂಗೂಬಾಯಿ ಕುರುಡರಾದರೇನೋ ಎಂದು ಮುಂದೆ ಓದಿದ ನನಗೆ ಆಶ್ಚರ್ಯಕಾದಿತ್ತು. ಚಿತ್ರವನ್ನು ಸ್ಕ್ಯಾನ್ ಮಾಡಿ ಹಾಕಿದ್ದಕ್ಕೆ ಧನ್ಯವಾದಗಳು, ಹೀಗೇ ಬರೀತಾ ಇರಿ.
ಕಾಳೂ ಅವರಿಗೆ,
ಸ್ವಾಗತ ಮತ್ತು ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದ
ಆಗಾಗ ನನ್ನ ಈ ದುರ್ಗಕ್ಕೆ ಬರುತ್ತಾ ಇರಿ
Post a Comment
Subscribe to Post Comments [Atom]
<< Home