Wednesday, April 18, 2007

ಹೂವೂ ಚೆಲುವೆಲ್ಲಾ ನಂದೆಂದಿತು...


ಚೆರ್ರಿ ಬ್ಲಾಸಮ್ ಅಥವಾ ಚೆರ್ರಿ ಹೂಗಳು ನೋಡಲು ಬಹು ಸುಂದರ. ಬ್ಯಾಲೆ ನರ್ತಕಿಯೊಬ್ಬಳ ನವಿರಾದ ಲಂಗದಂತೆ,ನಸು ನಾಚಿದ ತರುಣಿಯ ಕೆಂಪಾದ ಕೆನ್ನೆಯಂತೆ,ಜಗತ್ತಿನ ಉತ್ಸಾಹವನ್ನೆಲ್ಲಾ ತನ್ನಲ್ಲಿ ತುಂಬಿಕೊಂಡು ನಗುವ ಮಗುವಿನ ಮುದ್ದು ತುಟಿಯಂತೆ ...ನೂರು ಭಾವಗಳನ್ನು ನೋಡುಗನ ಮನದಲ್ಲಿ ತುಂಬಿ ತುಳುಕಿಸುತ್ತವೆ
************
ಚೆರ್ರಿ ಬ್ಲಾಸಮ್ ಗಳಿಗೆ ಜಪಾನಿನ ಸಂಸ್ಕೃತಿಯಲ್ಲಿ ಮಹತ್ವದ ಸ್ಥಾನವಿದೆ.ನಮ್ಮಲ್ಲಿ ಮಾವಿಗೆ ಇದ್ದಂತೆ
ಸಕೂರ ಎಂದು ಕರೆಯಲ್ಪಡುವ ಚೆರ್ರಿ ಮರಗಳಲ್ಲಿ ಜಪಾನೀಯರ ಪ್ರಕಾರ ಸುಗ್ಗಿ ದೇವತೆಗಳು ವಾಸಿಸುತ್ತಾರಂತೆ.
ಎತ್ತರದ ಪರ್ವತ ಪ್ರದೇಶಗಳಲ್ಲಿನ ಚೆರ್ರಿ ಮರಗಳಲ್ಲಿ ವಾಸಿಸುವ ಸುಗ್ಗಿ ದೇವತೆಗಳು ಭತ್ತದ ಹೊಲಗಳಿಗೆ ಇಳಿದು ಬಂದು
ಒಳ್ಳೆಯ ಫಸಲು ಬರಲೆಂದು ಹರಸುವರಂತೆ.
ವಸಂತದಲ್ಲಿ ಚೆರ್ರಿ ಮರಗಳು ಹೂಗಳಿಂದ ತುಂಬಿ ತುಳುಕಿದರೆ ಈ ವರ್ಷ ದೇವತೆಗಳು ಪ್ರಸನ್ನರಾಗಿ ಭತ್ತದ ಹೊಲಗಳನ್ನು ಹರಸಿದ್ದಾರೆಎಂದು ಜಪಾನೀಯರು ನಂಬುತ್ತಾರೆ
***************
ಚೆರ್ರಿ ಬ್ಲಾಸಮ್ ವ್ಯೂಯಿಂಗ್ ಅಂದರೆ ಚೆರ್ರಿ ಹೂಗಳನ್ನು ದರ್ಶಿಸುವುದು ಜಪಾನೀಯರ ಪುರಾತನ ಆಹ್ಲಾದಕರ ಸಂಪ್ರದಾಯ ೮೧೨ ಎ.ಡಿ ಯಷ್ಟು ಹಿಂದೆ ಪ್ರಾರಂಭವಾದ ಈ ಸಂಪ್ರದಾಯಕ್ಕೆ`ಹನೋಮಿ' ಅಂತ ಕರೆಯುತ್ತಾರೆ.ಚೆರ್ರಿ ಬ್ಲಾಸಮ್ ಗಳನ್ನು ನೋಡಲು ಬಂಧು-ಮಿತ್ರರನ್ನು ಔತಣಕ್ಕಾಗಿ ಅಹ್ವಾನಿಸುವುದು ಜಪಾನೀಯರ ವಸಂತ ಸಂಭ್ರಮಗಳಲ್ಲಿ ಮುಖ್ಯವಾದುದು
**********
ಚೆರ್ರಿ ಬ್ಲಾಸಮ್ ಗಳ ಚೆಲುವಿಗೆ ಮನಸೋತ ಜಪಾನೀ ಕವಿಗಳು ಈ ಸೊಬಗಿನ ಗಣಿಯ ಬಗ್ಗೆ ದಣಿವರಿಯದೆ ಸಾವಿರಾರು ಪದ್ಯಗಳನ್ನು ಕಟ್ಟಿ ಹಾಡಿದ್ದಾರೆ`ಸಕೂರ ಪದ್ಯ'ಗಳೆಂದೇ ಹೆಸರಾದ ಈ ಚೆರ್ರಿ ಹೂಗಳ ಕುರಿತಾದ ಪದ್ಯಗಳಲ್ಲಿ ಪ್ರೇಯಸಿಯ ನೆನಪಿನಂಥಾ ವಿಷಯಗಳಿಂದಾ ಹಿಡಿದು ಮಾನವಜೀವನದ ಕ್ಷಣಿಕತೆಯನ್ನು ಸಾರುವ ಪದ್ಯಗಳವರೆಗೂ ಏನೆಲ್ಲಾ ವೈವಿಧ್ಯಗಳಿವೆ ನೋಡಿ...
Trembling flower on a delicate branch.
Leaf tickling petal.
Brief breeze,
brief love.
-Genevieve Barr
**************
Looking at the Mountain Sakura in mist
I miss a person who looks at the Sakura
- Kino Tsurayuki
*****************
If there were no cherry blossoms in the world,
My mind would be peaceful.
- Fujiwara Norihira
****************
Trembling flower
Leaf tickling petal
My silent smile
-Genevieve Barr
*****************
Shining spring day
Falling cherry blossoms with my calm mind
- Kino Tomonari
*******************
Wishing to die under cherry blossoms in spring
Cherry blossom season in full moon time
- Saigyo
*******************
Sleeping under the trees on Yoshino mountain
The spring breeze wearing Cherry blossom petals
- Saigyo
*********************
ಚೆರ್ರಿಬ್ಲಾಸಮ್ ಜಪಾನೀ ಮನದಲ್ಲಿ ಅಚ್ಚಳಿಯದೇ ಕೂತಿರುವ ಪ್ರತಿಮೆ.
ಚೆಲುವು,ಆಧ್ಯಾತ್ಮ,ಪರಿಶುದ್ದತೆಗಳ ಸಂಗಮ .
ನಿರಂತರ ಹುಡುಕಾಟದ ಮನಸ್ಥಿತಿ ಬಿಂಬಿಸುವ ಸಮರ್ಥ ಸಂಕೇತ
ಜಪಾನೀಯರೇ ಕೆಲವೊಮ್ಮೆ ತಮಾಶೆಯಾಗಿ ಹೇಳುವಂತೆ ನೀವು ಜಗತ್ತಿನ ಯಾವ ವಸ್ತು/ವಿಷಯದ ಬಗ್ಗೆ ಮಾತಾಡಬೇಕೆಂದರೂ `ಇಟ್ಸ್ ಲೈಕ್ ಚೆರ್ರಿ ಬ್ಲಾಸಮ್....' ಅಂತ ಶುರು ಮಾಡಬಹುದು!

4 Comments:

Blogger ಸುಪ್ತದೀಪ್ತಿ suptadeepti said...

ಚೆರಿ ಬ್ಲಾಸಮ್ ಜಪಾನೀಯರಿಗೆ "ಸ್ಪೆಶಲ್" ಅಂತ ಗೊತ್ತಿತ್ತು, ಇಷ್ಟೂ ಸ್ಪೆಶಲ್ ಅನ್ನುವ ಕಲ್ಪನೆ ಇರಲಿಲ್ಲ. ಜ್ಞಾನದ ಒಂದೊಂದೇ ಕಣಗಳು ತೆರೆದುಕೊಳ್ಳುತ್ತವೆ ದುರ್ಗದಲ್ಲಿ. ಧನ್ಯವಾದಗಳು.

2:45 PM  
Blogger ರಾಮಪ್ರಿಯ said...

ನಮಸ್ಕಾರ -
ಚೆರ್ರಿ ಹೂಗಳು ನೋಡಲು ಖಂಡಿತಾ ನೋಡಲು ಬಲು ಸುಂದರ. ನಮ್ಮ ಮನೆಯ ಹತ್ತಿರ ವಾಷಿಂಗ್ಟನ್ ಡಿ.ಸಿ.ಯಲ್ಲಿರುವ ಟೈಡಲ್ ಬೇಸಿನ್ ಸುತ್ತ ಇರುವ ತರಾವರಿಯ ಚೆರ್ರಿ ಹೂಗಳ ಮರಗಳು ಮತ್ತು ಅದರ ಸುತ್ತಮುತ್ತಲಿರುವ ಕಟ್ಟಡಗಳು(ವಾಷಿಂಗ್ಟನ್ ಮಾನ್ಯುಮೆಂಟ್, ಜೆಫರ್‍ಸನ್ ಮೆಮೋರಿಯಲ್ ...) ಏಪ್ರಿಲ್ ತಿಂಗಳಲ್ಲಿ ಬಲು ಸುಂದರವಾಗಿ ಕಾಣುತ್ತವೆ.

ನಾನು ತೆಗೆದ ಚೆರ್ರಿ ಹೂಗಳ ಕೆಲವು ಚಿತ್ರಗಳು ಇಲ್ಲಿ ನೋಡಬಹುದು.

4:10 PM  
Blogger Holalkere rangarao laxmivenkatesh said...

your flower show is bombATAgide !
kannaD dOnalvA ?
mattEn hELli hELi ?

6:25 PM  
Blogger Shiv said...

ಮಾಲಾ ಅವರೇ,

ಬ್ಯಾಲೆ ನರ್ತಕಿಯ ನವಿರಾದ ಲಂಗದಂತೆ..
ಸುಂದರವಾಗಿದೆ ಉಪಮೆ

ಅಂದಾಗೆ ಈ ಚೆರ್ರಿ ಗಿಡನೂ ನಿಮ್ಮ ಮನೆ ಅಂಗಳದಲ್ಲಿ ಇದೆಯೇ?

9:55 PM  

Post a Comment

Subscribe to Post Comments [Atom]

<< Home