Friday, May 16, 2008

ಡಿ.ವಿ.ಜಿ ಯವರ "ವನಸುಮ"

ಚಿತ್ರದುರ್ಗದ ಓದುಗರಾದ ರಾಧಿಕಾ ಡಿ.ವಿ.ಜಿಯವರ ವನಸುಮ ಕವನದ ಪೂರ್ಣಪಾಠ ದೊರಕಿಸಿ ಕೊಟ್ಟಿದ್ದಾರೆ
ಧನ್ಯವಾದ ರಾಧಿಕ
ವನಸುಮದೊಳೆನ್ನ ಜೀವನವು ವಿಕಸಿಸುವಂತೆ
ಮನವನನುಗೊಳಿಸು ಗುರುವೇ
ಜನಕೆ ಸಂತಸವೀವ ಘನನು ನಾನೆಂದೆಂಬ
ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ಬಿಡದೆ
ಕಾನನದಿ ಮಲ್ಲಿಗೆಯು ಮೌನದಿಂಬಿರಿದು ನಿಜ
ಸುರಭವ ಸೂಸಿ ನಲವಿಂ
ತಾನೆಲೆಯ ಪಿಂತಿರ್ದು ದೀನತೆಯ ತೋರಿ
ಅಭಿಮಾನವನು ತೊರೆದು ಕೃತ ಕೃತ್ಯತೆಯ ಪಡೆವಂತೆ
ಉಪಕಾರಿ ನಾನು ಎನ್ನುಪಕೃತಿಯು ಜಗಕೆಂಬ
ವಿಪರೀತ ಮತಿಯನಳಿದೂ
ವಿಪುಲಾಶ್ರಯವನೀವ ಸುಫಲ ಸುಮಭರಿತ
ಪಾದಪದಂತೆ ನೈಜಮಾ ದೊಳ್ಪಿನಲಿ ಬಾಳ್ವವೊಲು
***********
ಡಿ.ವಿ.ಜಿ (1889-1975)ಎಂದೇ ಹೆಸರಾದ ಡಿ.ವಿ.ಗುಂಡಪ್ಪನವರು ಕನ್ನಡ ಸರಸ್ವತಿ ಮುಡಿದ ಸಿರಿದಾವರೆಗಳಲ್ಲೊಬ್ಬರು.ಅವರ ಮಂಕುತಿಮ್ಮನ ಕಗ್ಗ ಅಪಾರ ಜನಮನ್ನಣೆ ಪಡೆದ ಕೃತಿ .ಅವರ ಸಾಹಿತ್ಯ ಕೃಷಿ ಸಂಖ್ಯೆಯಿಂದಲೂ ಮೌಲ್ಯದಿಂದಲೂ ಅಮಿತವಾದುದು.ಅವರ ಸಮಗ್ರಸಾಹಿತ್ಯವು ಐನೂರು ಪುಟಗಳ ಹದಿನೈದು ಸಂಪುಟಗಳಾಗುತ್ತವೆಯೆಂದರೆ...ಊಹಿಸಿಕೊಳ್ಳಿ...
ಕನ್ನಡದ ಹಿರಿಯ ಲೇಖಕರಾಗಿದ್ದ ಡಿವಿಜಿ ಹೃದಯ ಶ್ರೀಮಂತಿಕೆಯಲ್ಲೂ ಹಿರಿತನ ತೋರಿ ಕಿರಿಯರನ್ನು ಹರಸಿದವರು ಅವರು ಮುನ್ನುಡಿ ಬರೆದು ಹರಸಿದ ಹಲವು ಲೇಖಕರು ನಂತರದ ದಿನದಳಲ್ಲಿ ಕನ್ನಡದಲ್ಲಿ ಹೆಸರು ಮಾಡಿದರು
ಅವರು ಬರೆದ ಮುನ್ನುಡಿಗಳನ್ನೇ ಎರಡು ಸಂಪುಟಗಳಾಗಿ ಪ್ರಕಟಿಸಲಾಯಿತು ಎಂದರೆ ಅವುಗಳ ಸಂಖ್ಯೆ ಮತ್ತು ಮೌಲ್ಯ ಎಷ್ಟಿರಬಹುದು..? ನಿಮ್ಮಊಹೆಗೇ ಬಿಡುತ್ತೇನೆ
ಡಿವಿಜಿ ಅವರ ಈ ಎರಡೂ ಪುಸ್ತಕಗಳನ್ನು ನನ್ನ ತಂದೆ ಒಮ್ಮೆ ಮನೆಗೆ ತಂದಿದ್ದರು ಅವುಗಳಲ್ಲಿ ಓದಿದ ಕೆಲವು ವಾಖ್ಯಗಳು ಇಂದಿಗೂ ನನ್ನ ನೆನಪಲ್ಲಿ ಉಳಿದಿವೆ
"ಸರೋಜ ಹಾಲು ಕಾಯಿಸುತ್ತಿದ್ದಳು...ಯಾರೋ ನಿಂಬೆಹಣ್ಣು ಸಿಡಿಸಿಬಿಟ್ಟರು. ಒಡೆದು ಹೋದ ಹಾಲಿಗಾಗಿ ಅವಳು ಅಳುತ್ತಾ ಕೂರಲಿಲ್ಲ ಮೊಸರು ಮಾಡಿ ಎಲ್ಲರಿಗೂ ಬಡಿಸಿದಳು..."
ಕಾದಂಬರಿಯೊಂದಕ್ಕೆ ಮುನ್ನುಡಿ ಬರೆಯುತ್ತಾ ಡಿ.ವಿ.ಜಿ ಹೇಳಿದ ಮಾತುಗಳಿವು
ಆ ಕಾದಂಬರಿಯ ಹೆಸರೇನೋ ಅದನ್ನು ಬರೆದವರು ಯಾರೋ ಯಾವುದೂ ನೆನಪಿಲ್ಲ
ಮುಂದೆ ಬಹುಷಃ ಅದು ಆರತಿ ಅಭಿನಯದ ಚಲನಚಿತ್ರವಾಯಿತೆಂದು ಅನ್ನಿಸುತ್ತಿದೆ....

4 Comments:

Anonymous Anonymous said...

Beautiful picture! I just love them. Do you take the photos yourself? What camera do you use?
I have not been a reader of poetry. But through your blog I'm getting to read good poetry. Thanks Mala :)

9:03 PM  
Blogger mala rao said...

ಮೆಚ್ಚುಗೆಗಾಗಿ ಥ್ಯಾಂಕ್ಸ್ ರಾಧಿಕ
ಚಿತ್ರದುರ್ಗದ ಎಲ್ಲಾ ಫೋಟೋಗಳನ್ನೂ ನಾನೇ ತೆಗೆದಿರುವುದು
ನಾನು ತೆಗೆದ ಫೋಟೋಗಳನ್ನು ಮಾತ್ರ ಇಲ್ಲಿ ಹಾಕಬೇಕೆಂದು ನನಗೆ ನಾನೇ ಹಾಕಿಕೊಂಡಿರುವ ನಿಯಮ
ನನ್ನದು ತೀರಾ ಸಾಧಾರಣ ಕ್ಯಾಮರ
ಸುಮಾರು ಐದು ವರ್ಷಗಳ ಹಿಂದೆ ಕೊಂಡಿದ್ದು
ಕ್ಯಾನನ್ ನಾಲ್ಕು ಮೆಗ ಪಿಕ್ಸಲ್ ದು
ಈಗಂತೂ ತುಂಬಾ ಓಳ್ಳೊಳ್ಳೆ ಕ್ಯಾಮರಾಗಳು ಬಂದಿವೆ
ತಾಂತ್ರಿಕತೆಗಿಂತ ಚಿತ್ರ ತೆಗೆಯುವವರ ಕಣ್ಣು ಒಳ್ಳೇ ಚಿತ್ರ ತೆಗೆಯುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ ಅಂತ ನನಗನ್ನಿಸುತ್ತೆ ಸೋ ನಾನು ಕ್ಯಾಮರ ಬದಲಿಸಲು ಹೋಗಿಲ್ಲ!

6:36 PM  
Anonymous Anonymous said...

You're right! Photography kale nimge siddhiside. good luck.

5:14 AM  
Anonymous Anonymous said...

Malaa,neevu camera badalisada karaNa nijavagi oppuvanthahudu.neevu haakikonDa niyama mechchide,beautiful pictures, adakke honduvanthaha saalugaLu, nimma blog full noDalu aagilla.so bandaga aadashTu Ododu:)
ishTu chennada blog koTTiddakke dhanyavaadagaLu.
PSP

1:15 PM  

Post a Comment

Subscribe to Post Comments [Atom]

<< Home