Saturday, January 03, 2009

ಹ್ಯಾಪಿಬರ್ತ್ ಡೇ ಶೈಲಿ...


ಪ್ರತಿ ಜನವರಿ ನಾಲ್ಕಕ್ಕೆ ಶೈಲಿ ನೆನಪಾಗುತ್ತಾಳೆ ಏಕೆಂದರೆ ಇವತ್ತು ಶೈಲಿ ಹುಟ್ಟು ಹಬ್ಬ
******************
ಶೈಲಿ ನನ್ನ ಅಂದ್ರೆ ನಾವು ಮೂರು ಜನ ಅಕ್ಕ ತಂಗಿಯರ ಬಾಲ್ಯ ಸ್ನೇಹಿತೆ
ನಮ್ಮೆಲ್ಲರ ಬಾಲ್ಯದ ಬಹುತೇಕ ನೆನಪುಗಳಲ್ಲಿ ಶೈಲಿ ಇದ್ದಾಳೆ
ಆದರೆ ಈಗ ಶೈಲಿ ಎಲ್ಲಿದಾಳೆ ಅಂತ ನಮಗ್ಯಾರಿಗೂ ಗೊತ್ತಿಲ್ಲ

ನನ್ನ ಈ ಬಾಲ್ಯ ಸಖಿ ಕಾಲದ ಅಲೆಯಲ್ಲಿ ಎಲ್ಲೋ ತೇಲಿಹೋಗಿ ಬಿಟ್ಟಿದ್ದಾಳೆ

ಹಣೆಯ ಮೇಲೊಂದು ಪುಟ್ಟ ಮಚ್ಚೆ ಇದ್ದ ಸುಂದರ ನಗುವಿನ ಶೈಲಿ ಜೊತೆ
ಮಾತಾಡಬೇಕು ಅಂತ ತುಂಬಾ ಅನ್ನಿಸುತ್ತೆ

ನಿಮಗ್ಯಾರಾದ್ರೂ ಸ್ನೇಹಿತೆ ಚಿತ್ರದುರ್ಗದವಳಿದ್ದಾಳಾ?ಮತ್ತು ಅವಳ ಅಪ್ಪ ಅಮ್ಮ ಸಂತೆಬೆನ್ನೂರಿನವರಾ?

ಅವಳು ಇಂಜಿನಿಯರಾ ಮತ್ತು ಅವಳಿಗೆ ಅನ್ನಿ, ರಾಜಿ ಎಂಬ ತಂಗಿಯರೂ ಕಾಶಿ ಎಂಬ ತಮ್ಮನೂ ಇದ್ದಾರಾ?
ನಿಮ್ಮ ಆ ಸ್ನೇಹಿತೆಯ ಬಗ್ಗೆ ನನಗೆ ತಿಳಿಸುತ್ತೀರಾ...ಪ್ಲೀಸ್.....

ದೀಪಾವಳಿಯಲ್ಲಿ ಒಟ್ಟಿಗೆ ಪಟಾಕಿ ಹೊಡೆಯುತ್ತಿದ್ದುದರಿಂದ ಹಿಡಿದು ಮಂಡಿ ತರಚಿಕೊಂಡಿದ್ದನ್ನು, ಗಿಣ್ಣು ತಿನ್ನುತ್ತಿದ್ದದನ್ನೂ, ಮಲ್ಲೆ ಹೂಬಿಡಿಸುತ್ತಿದ್ದುದನ್ನೂ,ಚೌಕಾಬಾರ ಕುಂಟಪಿಲ್ಲೆ ಆಡುತ್ತಿದ್ದುದನ್ನೂ ಹುರಳಿ ಹಪ್ಪಳ ಕದಿಯುತ್ತಿದ್ದುದನ್ನೂ
ಇನ್ನು ಏನೇನೋ ತರಲೆ ಮಾಡುತ್ತಿದುದನೆಲ್ಲಾ ನೆನಪಿಸಿಕೊಳ್ಳಬೇಕಿದೆ ನನಗೆ....

1 Comments:

Blogger ಶಾಂತಲಾ ಭಂಡಿ (ಸನ್ನಿಧಿ) said...

ಮಾಲಾ...
ಭಾವುಕರಾಗಿ ಬರೆದಿದ್ದೀರಿ. ನನಗೆ ಅವರ ಪರಿಚಯವಿದ್ದಿದ್ರೆ ಈಗಲೇ ಹೋಗಿ ಕರಕೊಂಡು ಬರ್ತಾ ಇದ್ದೆ.

12:10 PM  

Post a Comment

Subscribe to Post Comments [Atom]

<< Home