Sunday, January 25, 2009

ಭರತ ಭೂಮಿ ನನ್ನ ತಾಯಿ ನನ್ನ ಪೊರೆವ ತೊಟ್ಟಿಲು...

ಪ್ರಯಾಗದಲ್ಲಿ ಗಂಗೆ


ಭರತ ಭೂಮಿ ನನ್ನ ತಾಯಿ
ನನ್ನ ಪೊರೆವ ತೊಟ್ಟಿಲು
ಜೀವನವನೆ ದೇವಿಗೆರೆವೆ
ಬಿಡುತೆ ಗುಡಿಯ ಕಟ್ಟಲು


ತುಹಿನ ಗಿರಿಯ ಸಿರಿಯ ಮುಡಿಯ
ಹಿರಿಯ ಕಡಲುಹೊಳೆಯ
ಪರಿಯಪೈರುಪಚ್ಚೆ ಹಸುರಿನೊಡೆಯ
ಜೀವನವನೆ ದೇವಿಗೆರೆವೆ


ಸಿಂಧು,ಯಮುನೆ,ದೇವಗಂಗೆ
ತಪತಿ ಕೃಷ್ಣೆ ಭದ್ರೆತುಂಗೆ
ಸರಯೂ ತೀರ್ಥ ಪುಣ್ಯರಂಗೆ
ಜೀವನವನೆ ದೇವಿಗೆರೆವೆ


ಮತದ ಬಿರುಕುಗಳನು ತೊರೆವೆ
ನುಡಿಗಳೊಡಕುಗಳನು ಮರೆವೆ
ತೊಟ್ಟ ತೊಡಕುಗಳನು ಬಿಡುವೆ
ಜೀವನವನೆ ದೇವಿಗೆರೆವೆ
-ಕುವೆಂಫು

0 Comments:

Post a Comment

Subscribe to Post Comments [Atom]

<< Home