.......?
ಮೂರು ದಿನದಿಂದ ಅದೇ ಕನಸು
ಕಥೆಯೊಂದರ ಮಗು
ಕಾಲು ಕೇಳಿದ ಹಾಗೆ
ಎಂದೋ ಬರೆದ
ಕಥೆಯ ಬದಲಿಸುವುದು ಹೇಗೆ?
ಅದೂ ಪ್ರಕಟವಾಗಿ ವರ್ಷವೇ
ಸಂದಿರುವಾಗ
ಮತ್ತೆ ಮತ್ತೆ ಕಾಡುವ ಬೇಡುವ
ಆ ಕಡುಕಪ್ಪು ಆಲೆಯ
ದುಂಡು ಕಣ್ಣುಗಳನ್ನು
ಎದುರಿಸುವುದು ಹೇಗೆ
ಮತ್ತೆ
ಇವತ್ತು ರಾತ್ರಿ ಕನಸಿನಲ್ಲಿ...
ಮಗುವೇ
ನನ್ನ ಕ್ಷಮಿಸಿಬಿಡು ಕಂದ
ಊನವಾಗಿಸಿದ್ದಕ್ಕೆ
ನಿನ್ನ ಕಾಲುಗಳ,ನಿನ್ನ ಕನಸುಗಳ
ಕಥೆಯ ಅಗತ್ಯಕೆಂದೇ
ಹಾಗೆ ಬರೆದೆನೋ ಅಪ್ಪಾ
ನಿನ್ನ ಮೇಲೆ ದ್ವೇಷ ಸಾಧಿಸಿದ
ಕಟುಕಿ ಅಲ್ಲವೋ
ಕೈ ಮುಗಿದು ಬೇಡುವೆನು
ಇವತ್ತು ಕನಸಿಗೆ ಬರಬೇಡವೋ...
1 Comments:
ಕಾಡುವ ಪ್ರತಿಯೊಂದು ಕನಸಿಗೂ
ಹಾಡುವ ಮುಖವಿದೆಯಂತೆ
ದನಿಯ ಜಾಡು ಹಿಡಿದರೆ
ಕತೆಯು ಕವಿಯುವುದಂತೆ
ಕಾಡುವ ಕನಸಿನ ಮಗುವಿನ ಮನಸಿನ ಹಾಡು ಏನಿದ್ದೀತು?
ಏನೇನೋ ಊಹಿಸಿದ ಎದೆಯಿಂದ ಭಾರದ ಉಸಿರೆದ್ದಿತು.
Post a Comment
Subscribe to Post Comments [Atom]
<< Home