Thursday, September 07, 2006

Twee ಲ್ಯಾಂಡ್ ನ "Twee Twee"

ಮೊನ್ನೆ ಫಾರ್ಮರ್ಸ್ ಮಾರ್ಕೆಟ್ ಎಂದು ಕರೆಸಿ ಕೊಳ್ಳುವ ಸಂತೆಗೆ ತರಕಾರಿ ತರಲು ಹೋಗಿದ್ದೆ ತರಕಾರಿ ಕೊಂಡು ಮನೆಕಡೆ ಹೊರಟಾಗ ಕಂಡಿದ್ದು ಈ Twee Twee. ಸುತ್ತಾ ಮಕ್ಕಳನ್ನು ಕೂರಿಸಿ ಕೊಂಡು Twee Twee ಭಾಷೆಯಲ್ಲಿ ಮಾತಾಡುತ್ತಾ ಬೆಲೂನ್ ಗೊಂಬೆಗಳನ್ನು ಮಾಡಿ ಮಾರುತ್ತಿದ್ದ ಗೊಂಬೆ ಕೊಂಡ ಮಕ್ಕಳಿಗೂ, ಕೊಳ್ಳದ ಮಕ್ಕಳಿಗೂ ಒಂದೇ ರೀತಿಯಲ್ಲಿ ಕಿಚಾಯಿಸಿ ನಗಿಸುತ್ತಿದ್ದ. ಇನ್ ಫ್ಯಾಕ್ಟ್ ತರಕಾರಿ ಕೊಳ್ಳಲು ಬಂದವರು ತಮ್ಮ ಮಕ್ಕಳನ್ನು ಅವನ ಹತ್ರ ಬಿಟ್ಟು ತಾವು ಆರಾಮವಾಗಿ ಶಾಪಿಂಗ್ ಮುಗಿಸಿ ಬರುವವರೆಗೆ ಅವನು ಫ್ರೀ ಬೇಬಿ ಸಿಟಿಂಗ್ ಮಾಡಿತ್ತಿದ್ದನೆನ್ನ ಬಹುದು.(ಇಲ್ಲಿ ಬೇಬಿಯನ್ನು ಸಿಟ್ ಮಾಡಲು ಗಂಟೆ ಲೆಕ್ಕದಲ್ಲಿ ದುಡ್ಡು ದೋಚುತ್ತಾರೆ!)
ನಾನೂ ಹತ್ತು ನಿಮಿಷ ನಿಂತು ಅವನ` ಷೋ' ನೋಡಿ ಒಂದು ಫೋಟೋ ತೆಗೆದುಕೊಳ್ಳಲೇ ಎಂದು ಕೇಳಿದಾಗ ನನ್ನ ಕ್ಯಾಮೆರಾ ಕಿತ್ತುಕೊಂಡು ತನ್ನ Twee Twee ಭಾಷೆಯಲ್ಲಿ ಥ್ಯಾಂಕ್ಸ್ ಹೇಳಿಬಿಟ್ಟ! ನಾನು ಸಪ್ಪೆ ಮೂತಿ ಮಾಡಿಕೊಂಡಂತೆ ನಟಿಸಿದಾಗ ನನಗೆ ನನ್ನ ಕ್ಯಾಮರವನ್ನೂ ,ನನ್ನ ಕ್ಯಾಮರಾಕ್ಕೆ ಈ ಪೋಸನ್ನೂ ಕೊಟ್ಟ.

2 Comments:

Anonymous Anonymous said...

good

10:27 PM  
Blogger mala rao said...

ಅನಾನಿಮಸರೆ,
ನಿಮ್ಮ ಕಮೆಂಟ್ ಗಾಗಿ ವಂದನೆಗಳು
ಆಗಾಗ ಇಲ್ಲಿಗೆ ಬನ್ನಿ

10:46 PM  

Post a Comment

Subscribe to Post Comments [Atom]

<< Home