ಮೊದಲ ಟುಲಿಪ್
ನನ್ನ ಅಂಗಳದಲ್ಲಿ ಈ ವರ್ಷದ ಮೊದಲ ಟುಲಿಪ್ ಅರಳಿದೆ
ನಿಮಗೆ ಸಾಂಪ್ರದಾಯಕ ಟುಲಿಪ್ ನಂತೆ ಇದು ಕಾಣಿಸದು
ನಮ್ಮ ಮನದಲ್ಲಿ ಸಾಮಾನ್ಯವಾಗಿ ಇರುವ ಟುಲಿಪ್ ಚಿತ್ರ ಸಿಂಗಲ್ ಟುಲಿಪ್ ನದ್ದು
ಒಂದೇ ಸುತ್ತಿನ ಆರು ದಳಗಳ ಟುಲಿಪ್ ಅದು
ನಮ್ಮನೆಯಲ್ಲಿ ಅರಳಿರುವ ಈ ಟುಲಿಪ್ ಡಬಲ್ ಟುಲಿಪ್
ಇದು ದೊಡ್ಡ ಗುಲಾಬಿಯಂತೆಯೋ ,ದಾಸವಾಳದಂತೆಯೋ ಕಾಣುತ್ತದೆ
ಟುಲಿಪ್ ಗಳಲ್ಲಿ ಅರ್ಲಿ,ಮಿಡ್ ಮತ್ತು ಲೇಟ್ ಎಂಬ ಮೂರು ಮುಖ್ಯ ಕೆಟಗರಿಗಳು.
ವಸಂತದಲ್ಲಿ ಆಯಾ ಟುಲಿಪ್ ಹೂ ಬಿಡುವ ಕಾಲವನ್ನು ಈ ತಲೆಬರಹಗಳು ಸೂಚಿಸುತ್ತವೆ
ಮಿಡ್ ಹೂ ಬಿಡಲು ಇನ್ನೂ ಒಂದು ತಿಂಗಳಾದರೂ ಬೇಕು
ಲೇಟ್ ಈಗಷ್ಟೇ ಬಾಲ್ಯಾವಸ್ತೆಯಲ್ಲಿದೆ!
ನಮ್ಮಲ್ಲಿ ಈಗಷ್ಟೇ ವಸಂತ ಮೊದಲ ಹೆಜ್ಜೆ ಇಟ್ಟಿದ್ದಾನೆ
ಅವನ ಸ್ವಾಗತಕ್ಕೆ ಅರಳಿರುವ ಅರ್ಲಿ ಟುಲಿಪ್ ಇದು...
9 Comments:
enri tulipnalli kannada bhavaTene kaNata ide....modalu tulifge kannada kalisibiTra???
This comment has been removed by the author.
ನಿಮ್ಮ ಬ್ಲಾಗ್-ಗೆ ಹಾಜರಿ ಹಾಕದೆ ತುಂಬ ದಿನ ಆಯ್ತು. ಅಂದಹಾಗೆ, ಈ ಚಿತ್ರಗಳನ್ನ ಎಲ್ಲಿಂದ ಎಗರಿಸ್ಕೊಂಡು ಬರ್ತೀರಾ?:-D
ಚಿಕ್ಕ ಚಿಕ್ಕ ಸಾಲುಗಳ ಈ ಬರಹ ನೋಡಿ, ನಿಮ್ಮದೇ ಕವನ ಇವತ್ತು ಅಂತ ಅಂದ್ಕೊಂಡೆ ಮೊದ್ಲು:-)
ನೀವು ಕವನ ಬರೆಯಲ್ವ? ಪ್ರೇಮ ಕವನನೆ ಬರೀರಿ. ಒಂದು ಕೈ ನೋಡಿಯೇ ಬಿಡಿ, ಏನಾಗುತ್ತೆ ಅಂತ. ಹೆಚ್ಚುಕಡಿಮೆ ಆದ್ರೆ ನಾನಿದ್ದೇನೆ, ಹೆದ್ರಬೇಡಿ:-)
This comment has been removed by the author.
ನಿನ್ನ ಹೂಗಳಿಗೆ ಎರಡು ಹನಿಗಳು:
http://suptadeepti.blogspot.com/
ಮುಂದೇನು? ನೋಡಬೇಕು.
(ಹೆಸರು-ವಿಳಾಸದಲ್ಲಿ ಅಕ್ಷರ ಬದಲಾವಣೆ ಆಗಿದೆ, ಗುರುತಿರಿಸಿಕೋ. ಧನ್ಯವಾದಗಳು)
ಮಹಂತೇಶ್,
ಟುಲಿಪ್ ನಲ್ಲೂ ಕನ್ನಡ ಬಾವುಟ ಕಾಣುವ ನಿಮ್ಮ ಕನ್ನಡಪ್ರೀತಿಗೆ ಜಯವಿರಲಿ
ಭಾಗವತರೇ,
ಚಿತ್ರ-ದುರ್ಗ ದ ಎಲ್ಲಾ ಚಿತ್ರಗಳೂ ನಾನೇ ತೆಗೆದಿದ್ದು
ನನ್ನ ಚಿತ್ರಗಳನ್ನು ಮಾತ್ರ ಹಾಕಬೇಕೆಂಬುದು ನಾನು ಹಾಕಿಕೊಂಡಿರುವ ನಿಯಮ
ಈ ಟುಲಿಪ್ ನಾನೇ ಬೆಳೆಸಿದ್ದು ಕೂಡಾ....
ಕ್ಯಾಲಿಫೋರ್ನಿಯ ಬೇ ಏರಿಯಾಕ್ಕೆ ಬಂದರೆ ನೀವು ನಮ್ಮ
ಅಂಗಳದ ಟುಲಿಪ್ ಕಣ್ಣಾರೆ ಕಂಡು ಆನಂದ ಪಡಬಹುದು....
ನನಗೆ ಕವನ ಬರಿಯಿರೆಂದು ಪ್ರೋತ್ಸಾಹಿಸಿದ್ದಕ್ಕೆ ಥ್ಯಾಂಕ್ಸ್
ಹಿಂದೆ ಕೆಲವು ಕವನಗಳನ್ನು ಬರೆದಿದ್ದೆ ಇತ್ತೀಚೆಗೆ ಬರೆದಿಲ್ಲ
ಕವನ ಬರೆಯುವುದಕ್ಕಿಂಥಾ ಬೇರೆಯವರು ಬರೆದಿದ್ದನ್ನು ಓದುವುದು ಸುಲಭ!
ಮತ್ತು ನಾನು ಅದನ್ನೇ ಮಾಡುತ್ತಿರುವುದು!
ನಾನು ಬರೆದ ಕವನ ಓದಿ ನಿಮಗೆ `ಹೆಚ್ಚೋ ಕಡಿಮೆಯೋ' ಆಗಿ ನೀವು ಜಗಲಿಯಿಂದಿಳಿದು ಓಟ ಕಿತ್ತರೆ ಭಾಗವತಿಕೆ ಮಾಡುವವರು ಯಾರು? ಅಂತ ಭಯವಾಗುತ್ತಿದೆ!
ಜ್ಯೋತಿ
ನೋಟ್ ಮಾಡಿಕೊಂಡೆ
ಹೊಸ ಅಪ್ ಡೇಟ್ ಗಳು ಬೇಗ ಬರಲಿ...
ಮಾಲಾ ಅವರೇ,
ಮೊದಲ ಟುಲಿಪ್ನ ಆನಂದದಲ್ಲಿ ನಾನು ಭಾಗಿ !
ನೋಡಿದ ಕೂಡಲೇ ಕನ್ನಡದ ಬಾವುಟ ನೆನಪಾದದ್ದು ನಿಜ.ಇದು ಎರಡು ಸುತ್ತಿನ ಕೋಟೆ ತರ ಇದೆ.
ಬೇ ಎರಿಯಾದಲಿ ಎಲ್ಲಿ ಟುಲಿಪ್ಗಳು ಕಾಣೋತ್ತೋ ..
ಎಲ್ಲಿ ಬಾಳಕದ ಮೆಣಸಿನಕಾಯಿ ವಾಸನೆ ಬರುತ್ತೋ..
ಅಲ್ಲಿ ಮಾಲಾ ಅವರು ಇರಬಹುದು ಅಂತಾ ಖಾತ್ರಿ ಆಗುತ್ತೆ !
Post a Comment
Subscribe to Post Comments [Atom]
<< Home