`ಕಿತ್ತಳೆ' ಎಂಬ ಪ್ರೇಮ ಸಂದೇಶ
Alicante
An orange upon the table
Your dress on the rug
And you in my bed
Sweet present of the present
Freshness of the night
Warmth of my life.
-A French Poem of Jacques Prevert(1900-1977)
*********************
ನನ್ನ ಸಂಗ್ರಹದಲ್ಲಿ ಈ ಪೋಸ್ಟ್ ನೊಂದಿಗೆ ಹಾಕಲು ಕಿತ್ತಳೆಯ ಚಿತ್ರ ಇರಲಿಲ್ಲ ಏನು ಮಾಡುವುದೆಂದು ಯೋಚಿಸಿದೆ
ನನ್ನ ಹಳೆ ಮನೆಯ ಮುಂದೊಂದು ಕಿತ್ತಳೆ ಮರ ಇರುವುದು ನೆನಪಾಯಿತು! ಹೇಗೂ ಕಿತ್ತಳೆ ಕಾಲ...ನೋಡೋಣಾ ಅನ್ನಿಸಿತು... ಸರಿ ಹೊರಟೆ
ಸೋ ರಾತ್ರಿ ಎಂಟು ಘಂಟೆಯಲ್ಲಿ ನಾನು ತೆಗೆದ ತಾಜಾ ತಾಜಾ ಚಿತ್ರ ಇಲ್ಲಿದೆ!
********************
ಕಿತ್ತಳೆಯ ಬಗ್ಗೆ, ಕಾವ್ಯದಲ್ಲಿ ಕಿತ್ತಳೆಯ ಸಾಂಕೇತಿಕ ಪ್ರಯೋಗದ ಬಗ್ಗೆ ಬಹಳಷ್ಟು ಹೇಳುವುದಿದೆ ಕಿತ್ತಳೆಯ ಬಗೆಗಿನ ಹಲವು ಸ್ವಾರಸ್ಯಕರವಾದ ದಂತಕಥೆಗಳಿವೆ ( ಈ ಎಲ್ಲ ಕಿತ್ತಳೆಪುರಾಣ ಇನ್ನೊಮ್ಮೆ ಬರೆಯುವೆ) ಕಿತ್ತಳೆ innocence,chastity,eternal love,marriage,fruitfulness ನ ಸಂಕೇತವೆಂದು ಪಾಶ್ಚಾತ್ಯರು ನಂಬುತ್ತಾರೆ.ಹಾಗಾಗಿ Orange Blossom ಅನ್ನು
Bridal costume ನಲ್ಲಿ ಸೇರಿಸುತ್ತಾರೆ .ನವವಧುವಿಗೆ ಕಿತ್ತಳೆ ಹೂ ಮುಡಿಸುವ ಬಗ್ಗೆ ನಮ್ಮ ಆಯುರ್ವೇದದಲ್ಲಿ ಕೂಡಾ ಹೇಳಲಾಗಿದೆ!
****************
ಕಿತ್ತಳೆ ಹಣ್ಣು ಅಂದಾಕ್ಷಣ ನನಗೆ ನೆನಪಾಗುವುದು ಪುಟ್ಟಣ್ಣನವರ ಶರಪಂಜರ ಸಿನಿಮಾ! ಶರಪಂಜರದ `ಸಂದೇಶಾ...' ಹಾಡಿನಲ್ಲಿ ನಟಿ ಕಲ್ಪನಾ ಬುಟ್ಟಿಗಟ್ಟಲೇ ಕಿತ್ತಳೆ ಹಣ್ಣುಗಳ ಹೊಳೆಯಲ್ಲಿ ಓಡುತ್ತಾ ಸಂತೋಷದಿಂದ ಹಾಡು ಹಾಡುತ್ತಿರುತ್ತಾಳೆ ಪುಟ್ಟಣ್ಣನವರು ಈ ಕಿತ್ತಳೆಯ ಮಳೆಯನ್ನೋ , ಹೊಳೆಯನ್ನೋ ಯಾವುದರ ಸಂಕೇತವಾಗಿ ಬಳಸಿದರೋ ಗೊತ್ತಿಲ್ಲ ಆದರೆ ಚಿಕ್ಕಂದಿನಲ್ಲಿ ಚಿತ್ರಮಂಜರಿಯಲ್ಲಿ ಈ ಹಾಡು ಬಂದಾಗಲೆಲ್ಲಾ ಮಕ್ಕಳಾದ ನಮಗೆ ಬಾಯಿ ನೀರೂರುತ್ತಿದ್ದದ್ದಂತೂ ನಿಜ
***************
ನಾಳೆ (Feb 21)ಬೆಳಗ್ಗೆ 7.30 (PST) Sanfrancisco ಪ್ರದೇಶ ದಲ್ಲಿರುವ Stanford KZSU 90.1 ರೇಡಿಯೋ ಚಾನಲ್ ನಲ್ಲಿ ಪುಟ್ಟಣ್ಣ ಕಣಗಾಲ್ ಅವರ ಹಾಡುಗಳಿಂದ ಕೂಡಿದ ಕಾರ್ಯಕ್ರಮವಿದೆ (http://www.itsdiff.com/ ನಲ್ಲಿ ಕೂಡಾ ಇದು ಲಭ್ಯ) ಅದು ಯಶಸ್ವಿ ಯಾಗಲೀ ಅಂತ ಹಾರೈಸುತ್ತಾ ಇವತ್ತಿನ ಪೋಸ್ಟ್ ಅನ್ನು ಪುಟ್ಟಣ್ಣನವರ ಚಿತ್ರಗಳ ಮಧುರ ಹಾಡುಗಳ ನೆನಪಿಗೆ ಅರ್ಪಿಸುತ್ತಿರುವೆ

8 Comments:
ರಾತ್ರೆ ಎಂಟರ ಕತ್ತಲಲ್ಲೂ ತಾಜಾ ಕಿತ್ತಳೆ ಸೆರೆ ಹಿಡಿಯಲು ಸಿಕ್ಕಿತಲ್ಲ, ನಮ್ಮ ಪುಣ್ಯವೋ, ನಿನ್ನದೋ? ಸಂದೇಶಕ್ಕೆ ಧನ್ಯವಾದಗಳು.
ಕಿತ್ತಳೆ ಮತ್ತು ಪ್ರೇಮ...ಗೊತ್ತಿರಲಿಲ್ಲ:-)
ನೀವು ರಾತ್ರಿ ಎಂಟೂವರೆಗೆ ತೆಗೆದ ಫೋಟೊಗೆ ನನ್ನ ಮಧ್ಯರಾತ್ರಿಯ comment. ಹಿಂದಿನ ಸೀಟಿನಲ್ಲಿದ್ದೇನೆ. ಗಾಬರಿ ಪಡಬೇಡಿ. ರೈಟ್ ಪೋಯ:-))
ಛೋಟಾ ನಾಗಪುರದ ರಸಭರಿತ ಕಿತ್ತಳೆಯ ಚಿತ್ರ ಇದ್ದ ಹಾಗಿದೆ. ಈ ಸೂತ್ರವನ್ನು ಸಚಿತ್ರ ನೋಡಿ ಓದಿದಾಗ ಕಿತ್ತಳೆ ಸವಿದ ಅನುಭವವಾಗುತ್ತಿದೆ. ರುಚಿ ತೋರಿಸಿದ್ದಕ್ಕೆ ವಂದನೆಗಳು
Freshness of the night ಅನ್ನು ನೀವು literal ಆಗಿ ತಗೊಂಡು ರಾರಿ ೮ ಗಂಟೆಗೆ ಪೋಟೋ ತೆಗೆದಿದ್ದಾ !
ಸುಂದರ ನವಿರು ಬೆಚ್ಚಗಿನ ಕವನ
ಜ್ಯೋತೀ
ಇಬ್ಬರದ್ದೂ ಅಲ್ಲ ಕಿತ್ತಳೇ ದೂ!
ಭಾಗವತರೇ,
ಹಿಂದಿನ ಸೀಟಿಂದ ಜಾರಿ ಬೀಳಬೇಡಿ ಮತ್ತೆ!
ಶ್ರೀನಿವಾಸರೇ
ಇದು ಸನ್ನಿವೇಲ್ ಕಿತ್ತಳೆ ಅಂದಹಾಗೆ ಸಾಂಟಾ ಕ್ಲಾರಾ ಕಣಿವೆಯ
ಹಣ್ಣುಗಳು ಒಂದು ಕಾಲದಲ್ಲಿ ಅಮೇರಿಕಾದ್ಯಂತ ಪ್ರಸಿದ್ದಿ ಪಡೆದಿದ್ದವಂತೆ ಇತ್ತೀಚಿನ ವರ್ಷಗಳಲ್ಲಿ ಇದು ಹಣ್ಣಿನ ಕಣಿವೆ ಹೆಸರು ಕಳೆದುಕೊಂಡು ಸಿಲಿಕಾನ್ ಕಣಿವೆ ಆಗಿಬಿಟ್ಟಿದೆ!
ಶಿವು ಅವರೇ
ಧನ್ಯವಾದಗಳು
Post a Comment
Subscribe to Post Comments [Atom]
<< Home