ಏಕೆ ಅರ್ಥ ಬಾಳಿಗೆ
ಏಕೆ ಅರ್ಥ ನಾಳೆಗೆ
ಅರ್ಥವೊಂದು ಯಾಕೆ ಬೇಕು
ಅರಳಿ ನಗಲು ಹೂವಿಗೇ
ಕಳೆದು ಹೋದ ನೆನ್ನೆಗೆ
ಕಂಡುಮರೆವ ನಾಳೆಗೆ
ಬರೆದುದೆಲ್ಲಾ ಅಳಿಸಿ ಹೋಗಿ
ಬಿಡುವ ಖಾಲಿ ಹಾಳೆಗೆ
ನೋಟ ನೆಡಲಿ ಆಟದಿ
ಗೆಲುವ ಆಸೆ ಮನದಲೀ
ಸೋತರೇನು ಆಟ ತಾನೇ
ಎನುವ ಜಾಣ್ಮೆ ಕಾಯಲೀ
ನಗುತ ಬಾಳು ಜೀವವೇ
ಮಾವುಬೇವು ಧಾಳಿಗೇ
ನಗುತ ಬಾಳು ಜೀವವೇ
ಹುಳಿಬೆರೆಸದೆ ಹಾಲಿಗೇ
-ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟ
5 Comments:
ಚಂದದ ಕವನ.
"ನೋಟ ನೆಡಲಿ ಆಟದಿ ...... ಎನುವ ಜಾಣ್ಮೆ ಕಾಯಲಿ" ಸಾಲುಗಳು ತುಂಬ ಹಿಡಿಸಿದವು, ಅರ್ಥಪೂರ್ಣವಾಗಿವೆ. ನಮ್ಮ ಹಮ್ಮನ್ನು ಬದಿಯಲ್ಲಿರಿಸಲು ಒಂದುಪಾಯದಂತೆ.
ಮಾಲಾ, ಈ ಹಾಡನ್ನು ಆಕಾಶವಾಣಿಯಲ್ಲಿ (ಬೆಂಗಳೂರು)ಹೇಳಿಕೊಡ್ತಾ ಇದ್ರು ಅಲ್ವಾ? ತಿಂಗಳಿಗೊಂದು ಹೊಸ ಹಾಡು ಕಲಿಸುವ ಕಾರ್ಯಕ್ರಮ. ಹೆಸರು ನೆನಪಾಗ್ತಾ ಇಲ್ಲ. ನೀವೂ ನನ್ನಂತೆಯೇ ಆಕಾಶವಾಣಿಯ ಮುದ್ದಿನ ಗಿಣಿ ಅಂತ ಗೊತ್ತಾಯಿತು :)
vaMdanegaLu jyOthi
adE kaaraNakkaagi nanagU I kavana iShta
ಆ. ವಾ. ಮು .ಗಿ(ಶ್ರೀ ತ್ರೀ)
ಬೆಂಗಳೂರು ಆಕಾಶ ವಾಣಿಯಲ್ಲಿ ತಿಂಗಳಿಗೊಂದು ಹಾಡು ಕಲಿಸುವ ಮೂರ್ನಾಲ್ಕು ಕಾರ್ಯಕ್ರಮ ಬರುತ್ತಿತ್ತು. ನೀವು ಯಾವ ಕಾರ್ಯಕ್ರಮ ಕೇಳುತ್ತಿದ್ದದ್ದು?
ಬುಧವಾರ ಸಂಜೆಯ `ಬಾಲಗೋಪಾಲ'
ಗುರುವಾರ ಬೆಳಗ್ಗೆ `ಝೇಂಕಾರ'
ಶನಿವಾರ ಮಧ್ನಾನ್ಹದ `ಬಾಲ ಜಗತ್'
ಈ ಮೂರೂ ಮಕ್ಕಳಿಗಾಗಿ
ಇದಲ್ಲದೆ ಭಾನುವಾರ ಬೆಳಗ್ಗೆ ಎಂಟೂ ಇಪ್ಪತ್ತಕ್ಕೆ(ದೆಹಲಿಯ ಇಂಗ್ಲಿಷ್ ವಾರ್ತೆಯ ನಂತರ)'ನವಸುಮ' ಎಂಬ ಹತ್ತು ನಿಮಿಷದ ಕಾರ್ಯಕ್ರಮ ಬರುತ್ತಿತ್ತು. ಅದು ಐದು ನಿಮಿಶ ಹೊಸ ಕವನವೊಂದರ ವಾಚನ, ಉಳಿದೈದು ನಿಮಿಷ ಅದರ ಗಾಯನ ಇಷ್ಟೇ... ಹೇಳಿ ಕೊಡುತ್ತಿರಲಿಲ್ಲ ಕೆಲವು ಬಾರಿ ವಾಚನವನ್ನು ಸ್ವತಃ ಕವಿಯಿಂದಲೇ ಮಾಡಿಸುತ್ತಿದ್ದರು
ಹೀಗೆ ನವಸುಮದಲ್ಲಿ ಪ್ರಸಾರವಾಗಿದ್ದು ಭಟ್ಟರ ಈ `ಏಕೆ ಅರ್ಥ ಬಾಳಿಗೆ...ಬಹುಶಃ ಇಂದು ವಿಶ್ವನಾಥ್ ಹಾಡಿದ್ದಿರಬೇಕು
-ಇನ್ನೊಂದು ಆ. ವಾ. ಮು .ಗಿ
too good a poem. so meaningful
I guess I should start tuning to akashvani
Post a Comment
Subscribe to Post Comments [Atom]
<< Home