Tuesday, May 06, 2008

ವನಸುಮ

The Violet
Down in a green and shady bed
A modest violet grew;
Its stalk was bent, it hung its head,
As if to hide from view.
And yet it was a lovely flower,
Its colors bright and fair!
It might have graced a rosy bower,
Instead of hiding there.
Yet there it was content to bloom,
In modest tints arrayed;
And there diffused its sweet perfume,
Within the silent shade.
Then let me to the valley go,
This pretty flower to see,
That I may also learn to grow
In sweet humility.
-
*******************
Jane Taylor (1783-1824) ಜೇನ್ ಟೇಲರ್ ತನ್ನ ಸೋದರಿಯಂತೇ ಹಲವು ಚೆಲುವಾದ ಪದ್ಯಗಳನ್ನು ಬರೆದಿದ್ದಾಳೆ
Apple tree, The Spider ಇವು ಇವಳ ಕೆಲವು ಜನಪ್ರಿಯ ಪದ್ಯಗಳು ಸರಳತೆ ಜೇನ್ ಳ ಪದ್ಯಗಳ ಎದ್ದು ಕಾಣುವ ಗುಣ
ಪ್ರಕೃತಿಯ ಸೊಬಗಿನ ವರ್ಣನೆಯಂತೆ ಕಾಣುವ ಈ ಪದ್ಯದಲ್ಲಿ ಅಂತರ ಗಂಗೆಯಂತೆ ಹರಿದಿರುವ ನೀತಿ ...ಅದು ಜೇನ್ ಳ
ವೈಶಿಷ್ಯ.
ನನಗೆ ಈ ಪದ್ಯ ಓದಿದಾಗಲೆಲ್ಲಾ ನಮ್ಮ ಡಿವಿಜಿ ಯವರ ವನಸುಮದೊಳೆನ್ನ ಜೀವನವು ಪದ್ಯ ನೆನಪಾಗುತ್ತದೆ
ವನಸುಮದೊಳೆನ್ನ ಜೀವನವು ವಿಕಸಿಸುವಂತೆ
ಮನವನನು ಗೊಳಿಸು ಗುರುವೇ ಹೇ ದೇವ
ಕಾನನದಿ ಮಲ್ಲಿಗೆಯು ಮೌನದಿಂ
ಬಿರಿದು ನಿಜ ಸೌರಭವ ಸೂಸಿ...
ಮುಂದಕ್ಕೆ ನೆನಪಾಗುತ್ತಿಲ್ಲಾ.....

4 Comments:

Anonymous Anonymous said...

ವನಸುಮದೊಳೆನ್ನ ಜೀವನವು ವಿಕಸಿಸುವಂತೆ
ಮನವನನುಗೊಳಿಸು ಗುರುವೇ
ಜನಕೆ ಸಂತಸವೀವ ಘನನು ನಾನೆಂದೆಂಬ
ಎಣಿಕೆ ತೋರದೆ ಜಗದ ಪೊಗಳಿಕೆಗೆ ಬಾಯ್ಬಿಡದೆ

ಕಾನನದಿ ಮಲ್ಲಿಗೆಯು ಮೌನದಿಂಬಿರಿದು ನಿಜ
ಸುರಭವ ಸೂಸಿ ನಲವಿಂ
ತಾನೆಲೆಯ ಪಿಂತಿರ್ದು ದೀನತೆಯ ತೋರಿ
ಅಭಿಮಾನವನು ತೊರೆದು ಕೃತ ಕೃತ್ಯತೆಯ ಪಡೆವಂತೆ

ಉಪಕಾರಿ ನಾನು ಎನ್ನುಪಕೃತಿಯು ಜಗಕೆಂಬ
ವಿಪರೀತ ಮತಿಯನಳಿದೂ
ವಿಪುಲಾಶ್ರಯವನೀವ ಸುಫಲ ಸುಮಭರಿತ
ಪಾದಪದಂತೆ ನೈಜಮಾ ದೊಳ್ಪಿನಲಿ ಬಾಳ್ವವೊಲು

This is the full text of the famous poem by DVG and made popular by the great director Late H K Narayana

2:30 AM  
Blogger ಸುಪ್ತದೀಪ್ತಿ suptadeepti said...

ಧನ್ಯವಾದಗಳು ರಾಧಿಕಾ. ನಾನೂ ಇದನ್ನು ಹುಡುಕುತ್ತಿದ್ದೆ. ಇಲ್ಲೇ ಸಿಕ್ಕಿತು ನಿಮ್ಮ ಕೃಪೆಯಿಂದ.

6:09 PM  
Blogger ತೇಜಸ್ವಿನಿ ಹೆಗಡೆ said...

ನಮಸ್ಕಾರ,

ವನಸುಮವು.. ಕವನವನ್ನು ಓದುವಾಗಲೆಲ್ಲಾ.. ನನಗೆ ದಿನಕರ ದೇಸಾಯಿಯವರ "ನನ್ನ ದೇಹದ ಬೂದಿ ಗಾಳಿಯಲಿ ತೂರಿ ಬಿಡಿ.." ಕವನವು ನೆನೆಪಾಗಿತ್ತದೆ. ಇದೂ ಅದೇ ಅರ್ಥವನ್ನು ಸ್ಫುರಿಸುವಂತಹ ಸುಂದರ ಕವನ. ಬ್ಲಾಗ್ ಬರಹಗಳು ಇಷ್ಟವಾದವು.

7:11 AM  
Blogger mala rao said...

ರಾಧಿಕಾ ಕವನಕ್ಕಾಗಿ ತುಂಬಾ ವಂದನೆಗಳು ಮುಖಪುಟದಲ್ಲಿ ಹಾಕುತ್ತೇನೆ

ಸುಪ್ತದೀಪ್ತಿ,ತೇಜಸ್ವಿನಿ ಅವರಿಗೆ ಕಮೆಂಟ್ಸ್ ಗಾ ಗಿ ಧನ್ಯವಾದಗಳು

3:30 PM  

Post a Comment

Subscribe to Post Comments [Atom]

<< Home