ವ್ಯಾಲೆಂಟೇನ್ ಭೂತ..!
ಇವತ್ತು ಬೆಳಗ್ಗೆ ಗಡಿಬಿಡಿಯಲ್ಲೇ (ಲೇಟಾಗಿ )ಎದ್ದಿದ್ದು
ಹತ್ತಕ್ಕೆ ನಿಮ್ಮನೆ ಹತ್ರ ಬರುತ್ತೇವೆಂದು ಸ್ನೇಹಿತರಿಗೆ ಹೇಳಿಬಿಟ್ಟಿದ್ದರಿಂದ ಇನ್ನಷ್ಟು ಗಡಿಬಿಡಿ.
ನನ್ನ ಸುಪುತ್ರನು ಪೋಕರಿ ವಿದ್ಯೆಯಲ್ಲಿ ಪಿ.ಹೆಚ್.ಡಿ ಮಾಡುವ ಹಂತಕ್ಕೆ ಬಂದಿರುವುದರಿಂದ ಮತ್ತಷ್ಟು ಗಡಿಬಿಡಿ
ಎರಡು ಒಲೆಯಲ್ಲಿಟ್ಟಿದ್ದ ಅಡುಗೆ ನೋಡಿಕೊಳ್ಳುತ್ತಾ ,ಮಗುವನ್ನು ರೆಡಿಮಾಡುತ್ತಾ
ನಾನು ಜಡೆ ಹಾಕಿಕೊಳ್ಳುತ್ತಿರುವಾಗ "ಓ ಇವತ್ತು ವ್ಯಾಲೆಂಟೇನ್ಸ್ ಡೇ'ಅಲ್ವಾ
ಅಂತ ದಿಢೀರನೆ ನನ್ನ ಮಂದ ಬುದ್ದಿಗೆ ಹೊಳೆದು ಬಿಟ್ಟಿತು.
ಇವನಿಗೆ ವಿಶ್ ಮಾಡೋಣಾ ಅಂತ ರೂಮಿಗೆ ಹೋಗಿ ರೆಡಿಯಾಗುತ್ತಿದ್ದ
ಇವನಿಗೆ ತುಂಬಾ ಪ್ರೀತಿಯಿಂದ ಮುತ್ತಿಟ್ಟು ವಿಷ್ ಮಾಡಿದೆ.
ಅದಕ್ಕವನು ಕಣ್ ಕಣ್ಣು ಬಿಟ್ಟ
ನನಗೆ ಅರ್ಥವಾಗಲಿಲ್ಲ ಅವನ ಮುಖವನ್ನೇ ದಿಟ್ಟಿಸಿದೆ
ಯಾಕೆ ನಿನಗೆ ಹ್ಯಾಗೆ ಕಾಣ್ತಿದೀನಿ ನಾನು...? ಅಂತ ಕೇಳಿದ
ಆಂ... ಅಂದೆ
ನಿನಗೆ ಮೈ ಸರಿಯಾಗಿದೆಯಾ.." ಅಂತ ತುಂಬಾ ಅಸ್ಥೆಯಿಂದ ವಿಚಾರಿಸಿದ
ಯಾಕೆ..? ಕೇಳಿದೆ
"ಮತ್ತೆ ನನಗೆ ಹ್ಯಾಪಿ ಹ್ಯಾಲೋವೀನ್ ಅಂತ ವಿಷ್ ಮಾಡಿದೆಯಲ್ಲಾ ಅದಕ್ಕೆ...
ನಾನೇನಾದರೂ ಕಾಸ್ಟ್ಯೂಮ್ ಹಾಕಿಕೊಳ್ಳದೇನೇ ಭೂತದ ತರ ಕಾಣ್ತಿದೀನಾ..."ಅಂದ
ಹೌದಾ... ನಾನು ಹಾಗೆ ವಿಷ್ ಮಾಡೆದೆನಾ...? ನಾನೇನಂದು ಕೊಂಡೆ ಅಂದ್ರೇ..." ವಾಕ್ಯ ಮುಂದುವರೆಸಲಾಗಲಿಲ್ಲ...
"......................."
ಎರಡು ನಿಮಿಷದ ನಂತರ ನಾವಿಬ್ಬರೂ ಜೋರಾಗಿ ನಕ್ಕು ಬಿಟ್ಟೆವು
7 Comments:
"ಗಡಿಬಿಡಿ ಗುಂಡ(ಮ್ಮ)" ಪದವಿ ಬೇರೆಯೊಬ್ಬರಿಗೆ ಕಾದಿರಿಸಲಾಗಿತ್ತು. ಅದಕ್ಕೂ ಕಣ್ಣು ಹಾಕಿದ್ಡೀಯಾ, ಹೇಗೆ?
ನೀನು ‘ಹ್ಯಾಲೋವೀನ್’ ಅಂತ ಹೇಳಿದ್ರೂ, ಅದು ‘ವ್ಯಾಲಂಟೈನ್ಸ್ ಡೇ’ ವಿಶ್ಶೇ ಅಂತ ಖಾತ್ರಿಯಾಯ್ತು ಬಿಡು. ಸಿಕ್ಕಾಪಟ್ಟೆ ಪ್ರೀತೀಲಿ ಮುಳುಗಿರುವಾಗ ಹೀಗೆ ಮಾತಲ್ಲಿ ಗಡಿಬಿಡಿ ಆಗೋದು, ಮಾತೇ ಮರೆತು ಹೋಗೋದು ತುಂಬಾ ಸಾಮಾನ್ಯ ಅಲ್ವ? ಅಂದ್ಹಾಗೆ, ಹ್ಯಾಪಿ...ಅದೆಂಥದೋ ಡೇ ಕಣೆ.
~ಮೀರ.
ಬಹುಷಃ ನಿಮ್ಮ phd ಸುಪುತ್ರನ ಆಗಮನದ ನಂತರ ವ್ಯಾಲಿಂಟಿನ್ ಹ್ಯಾಲೋವಿನ್ ಇಂಡಿಪೆಂಡೆಸ್ ಡೇ ಎಲ್ಲಾ ಒಂದೇ ಅನಿಸಲ್ಲಿಕ್ಕೆ ಶುರುವಾಗಿರಬಹುದೇ !
@ಜ್ಯೋತಿ,
ಎರಡೂ coast ಗಳಿಗೂ ಒಬ್ಬೊಬ್ಬರು ಇರಬೇಕಲ್ಲ..
ಮತ್ತೇ...ಇಲ್ಲದಿದ್ದರೆ west coast ಗೆ ಬೇಜಾರಾಗುತ್ತೆ ಅಂತಾ...
@ಮೀರಾ,
"ಸಿಕ್ಕಾಪಟ್ಟೆ ಪ್ರೀತೀಲಿ ಮುಳುಗಿರುವಾಗ... "
ಹಾಗಂದ್ರೆ ಏನೋ ಗೊತ್ತಾಗಲಿಲ್ಲವಲ್ಲಾ...!
@ಶಿವು,
ಸದ್ಯ ಡೇ ಮತ್ತು ನೈಟ್ ಗಳ ವ್ಯತ್ಯಾಸ ಗೊತ್ತಾಗುತ್ತಿದೆಯಲ್ಲಾ
ನಮ್ಮ ಪುಣ್ಯ!
ಮಾಲಾ,
ಇದೇನು ವ್ಯಾಲೆಂಟೈನ್ ಭೂತ ಹೊಸದಾಗಿದೆ ಅಂತ ಹೆದರುತ್ತಲೇ ಬಂದೆ, ಹ್ಹ ಹ್ಹ ಹ .ತುಂಬಾ ಚೆನ್ನಾಗಿದೆ.
ಪಿ ಎಸ್ ಪಿ.
ಹಹ! ಪಾಪ ಅರವಿಂದ್! ನನಗೇನೂ ಹೊಸದು ಅನ್ನಿಸಲಿಲ್ಲ ಇದು :) ಮದುವೆ ಶುಭಾಶಯ ಕೋರುವ ಬದಲು, ಹುಟ್ಟು ಹಬ್ಬದ ಶುಭಾಶಯ ಕೋರಿರುವುದು ...ಅಥವಾ ಉಲ್ಟಾ ಆಗಿರುವುದು ಅದೆಷ್ಟು ಸಲವೋ. ಒಟ್ಟಿನಲ್ಲಿ ಶುಭಾಶಯವೊಂದೇ ನಿಜ. ಕಾರಣ ಯಾವುದಾದರೆ ಏನಂತೆ ಅಲ್ವಾ?
@ಪಿ.ಎಸ್.ಪಿ
ಇನ್ನು ಹೆದ್ರೆಕೆ ಇಲ್ಲಾ ತಾನೇ..?
@
ಶ್ರೀತ್ರೀ,ನೀವೂ ನನ್ನ ಜಾತೀನೇ ಆದ್ದರಿಂದ ನಿಮಗೆ ಹೊಸದು ಅನ್ನಿಸಲು ಸಾಧ್ಯವೇ ಇಲ್ಲಬಿಡಿ!ನೀವು ಇವನಿಗೆ ಒಂದೇ ಪಾಪ ಹೇಳಿದ್ದೀರಾ..ನಾನು ನಿಮ್ಮವರಿಗೆ ಎಷ್ಟು ಪಾಪ ಹೇಳಲಿ ಅಂತ ಇನ್ನೂ ಯೋಚಿಸುತ್ತಿದ್ದೇನೆ!
Post a Comment
Subscribe to Post Comments [Atom]
<< Home