ದುರ್ಗದಲ್ಲಿ ಇಂದಿನಿಂದ ವಸಂತಹಬ್ಬ
ವಸಂತ ತನ್ನ ಮಾಯಾಜಾಲ ಮತ್ತೆ ಬೀಸಿದ್ದಾನೆ ಎಲ್ಲರ ಮನದಲ್ಲೂ ಹುರುಪು ತುಂಬುವ ಮಾಯಾವಿ ಅವನು!
ಬನ್ನಿ ಇನ್ನು ಕೆಲವು ದಿನ ವಸಂತನ ಸೊಬಗಿನಲ್ಲಿ ಮುಳುಗೇಳೋಣ...
ವಸಂತ ಬಂದ ಋತುಗಳ ರಾಜ ತಾ ಬಂದ
ಚಿಗುರನು ತಂದ ಹೆಣ್ಗಳ ಕುಣಿಸುತ ನಿಂದ
ಚಳಿಯನು ಕೊಂದ ಹಕ್ಕಿಗಳುಲಿಯಗಳೇ ಚಂದ
ಕೂವೂ ಜಗ್ ಜಗ್ ಪುವ್ವೀ ಟೂವಿಟ್ಟವೂ...
ಕುರಿ ನೆಗೆದಾಟ ಕುರುಬರ ಕೊಳಲಿನೂದಾಟ
ಇನಿಯರ ಬೇಟ ಬನದಲಿ ಬೆಳದಿಂಗಳೂಟ
ಹೊಸ ಹೊಸ ನೋಟ , ಹಕ್ಕಿಗೆ ನಲಿವಿನ ಪಾಠ
ಕೂವೂ ಜಗ್ ಜಗ್ ಪುವ್ವೀ ಟೂವಿಟ್ಟವೂ...
ಮಾವಿನ ಸೊಂಪು ಮಲ್ಲಿಗೆ ಬಯಲೆಲ್ಲ ಕಂಪು
ಗಾಳಿಯ ತಂಪು ಜನಗಳ ಜಾತ್ರೆಯ ಗುಂಪು
ಕಿವಿಗಳಿಗಿಂಪು ಹಕ್ಕಿಗಳುಲುಹಿನ ಪೆಂಪು
ಕೂವೂ ಜಗ್ ಜಗ್ ಪುವ್ವೀ ಟೂವಿಟ್ಟವೂ...
ಬಂದ ವಸಂತ -ನಮ್ಮಾ ರಾಜ ವಸಂತ...
-ಬಿ.ಎಂ.ಶ್ರೀ
ಚಿತ್ರದ ಬಗ್ಗೆ-
ಕಳೆದ ವಾರ ನಾವು ಭೇಟಿ ನೀಡಿದ ಸ್ಟಾಕ್ಟನ್ ನಗರದ ಬಳಿಯ ' ಡ್ಯಾಫೋಡಿಲ್ ಹಿಲ್' ಎಂಬ ಜಾಗದಲ್ಲಿ ತೆಗೆದ ಬಂಗಾರದ
ಡ್ಯಾಫೋಡಿಲ್ ಗಳು
ವಸಂತ ಹಬ್ಬ-1
Labels: ವಸಂತ ಹಬ್ಬ
2 Comments:
ಮಾಲಾ ಅವರೇ,
ಚಂದದ ಬ್ಲಾಗ್ ನಿಮ್ಮದು. ಎಲ್ಲ ಪೋಸ್ಟುಗಳು ಇಷ್ಟ ಆದವು.
ಬಿ.ಎಂ.ಶ್ರೀ ಅವರ ವಸಂತ ದ ಪದ್ಯ ಹಳೆಯ ನೆನಪನ್ನು ಮರುಕಳಿಸಿತು...!
ಅಭಿನಂದನೆಗಳು
ವಸಂತದ ಶುಭಾಶಯಗಳು ಕೂಡ..!
-ಪ್ರಶಾಂತ್ ಭಟ್
ಪಾಚು ಅವರೇ,
ದುರ್ಗಕ್ಕೆ ಸ್ವಾಗತ
ಮತ್ತು ಪ್ರತಿಕ್ರಿಯೆಗಾಗಿ ಧನ್ಯವಾದ
ಹೀಗೇ ಬರುತ್ತಿರಿ
Post a Comment
Subscribe to Post Comments [Atom]
<< Home