Friday, September 08, 2006

ರುಕಿ...ರುಕ್ಕು...ರುಕ್ಕಮ್ಮಾ.....

ಇವಳು ನಮ್ಮಮನೆಯ ಅಕ್ವೇರಿಯಂನ ರಾಣಿ ರುಕ್ಕು.ರುಕಿ ತನ್ನ ಮುದ್ದಾದ ಬೀಸಣಿಗಯ ಬಾಲವನ್ನು ಅತ್ತಿತ್ತ ವಯ್ಯಾರದಿಂದ ಬಳುಕಿಸುತ್ತಾ ಓಡಾಡುವುದನ್ನು ನೋಡುತ್ತಿದ್ದರೆ ಹೊತ್ತು ಹೋಗುವುದೇ ಗೊತ್ತಾಗುವುದಿಲ್ಲ.
ಇವಳಿಗೆ `ರುಕ್ಕು'ಹೆಸರಿಟ್ಟದ್ದು ಹೇಗೆಂದರೇ.....
ಗೋಲ್ಡ್ ಫಿಶ್ ಗಳಲ್ಲಿ Ryukin ಎಂದು ಕರೆಯುವ ವರ್ಗಕ್ಕೆ ಸೇರಿದ ಇವಳಿಗೆ ಶಾರ್ಟ್ ಅಂಡ್ ಸ್ವೀಟ್ ಆಗಿ `ರುಕಿ 'ಅಂತ ನಾವು ಕರೆಯುವುದು ಇವಕ್ಕೆ ಜಪಾನೀಸ್ ಫ್ಯಾನ್ ಟೇಲ್ ಎಂದೂ ಕರೆಯುತ್ತಾರೆ.ವೆಡಿಂಗ್ ವೇಲ್ ನಂತೆ ಉದ್ದ ಬಾಲ ಇರುವುದರಿಂದ ಇವಕ್ಕೆ `ವೇಲ್ ಟೇಲ್ 'ಎಂಬ ಹೆಸರೂ ಇದೆ.ಇವು ಅಕ್ವೇರಿಯಂಗೆ ಬಹು ಸುಲಭವಾಗಿ ಹೊಂದಿಕೊಳ್ಳುತ್ತವೆ. ಸೋ ಹೊಸದಾಗಿ ಮೀನು ಸಾಕುವವರು Ryukin ನ ಆಯ್ದುಕೊಳ್ಳಬಹುದು.Ryukin ಗಳು ಈಜುವುದರಲ್ಲಿ ಬಲು ಗಟ್ಟಿಗರು.ನಮ್ಮ ರುಕ್ಕಮ್ಮನ ಈ ಫೋಟೋ ತೆಗೆಯಲು ನಾನು ಹರಸಾಹಸ ಪಡಬೇಕಾಯಿತು ಆದರೆ ಅವಳ ಸೌಂದರ್ಯದ ಫಿಫ್ಟಿ ಪರ್ಸೆಂಟೂ ಈ ಫೋಟೊ ತೋರುವುದಿಲ್ಲಾ ಎಂಬ ಅತೃಪ್ತಿ ನನಗೆ.
`ದಮ್ಮರೆ ದಮ್ಮಮ್ಮ...ನಾನ್ ಡಿಸ್ಕೋ ರುಕ್ಕಮ್ಮ...ಥಕ್ಕ ಥಕಧಿಮಿ ಥಕ್ಕ ಥಕದಿಮಿ ಕುಣಿಸೋ ಪ್ರಿಯತಮ...' ಎಂದು ಹಾಡಲು ನಮ್ಮ ರುಕ್ಕಮ್ಮನಿಗೆ ಪ್ರಿಯತಮನೇ ಇಲ್ಲ. ಸದ್ಯದಲ್ಲೇ ತರೋಣಾ ಅಂತ ಯೋಚಿಸುತ್ತಿದ್ದೇನೆ.ನಿಮಗೆ ಯಾರಾದರೂ ಒಳ್ಳೇ ಹುಡುಗ ಗೊತ್ತಾ?

2 Comments:

Blogger Satish said...

ಮಾಲಾ ಮೆಡಮ್,

ನಮ್ಮನ್ಯಾಗ ಇಂಥವು ಎರಡು ಇದಾವು, ಅದರ ಜಾತಿ Oranda...ನಮ್ ಹುಡುಗ್ರು ಬಾಲಾ ಇನ್ನೂ ಉದ್ದುಕ್ ಚೆಂದ್ ಐತ್ರಿ, ಅಂದ್ರ ಅದರ ದೇಹಕ್ಕಿಂತ ಬಾಲಾನೇ ಉದ್ದ ಅನ್ನಂಗೆ. ಇವನ್ನ ಇಟಗೊಂಡು ಈಗ ಸುಮಾರು ಹತ್ತತ್ರ ಎರಡ್ ವರ್ಷಾ ಆತು, ಒಂಥರಾ ಮನೇ ಮಂದಿ ಇದ್ದಂಗ...ಆದ್ರ ನಾವ್ ಹೆಸ್ರು-ಗಿಸ್ರು ಇಟ್ಟಿಲ್ರಿ, ಎಲ್ಲಾರ ಸತ್ ಹೋದ್ರ ಬೇಸ್ರ ಆಗ್ದಿರಲಿ ಅಂತ.

10:39 AM  
Blogger mala rao said...

ಕಾಳೂ ಅವರೆ'
ನಿಮ್ಮನೆನಲ್ಲಿ ಒರಾಂಡ ಗೋತ್ರದ ಹುಡುಗ್ರು ಇರೋದು ನಿಮ್ಮ ಪತ್ರದಿಂದ ವಿಶದವಾಯಿತು.ಫೋಟೋ,ಜಾತಕ ಸ್ವಲ್ಪ ಕಳುಸ್ತೀರಾ....

11:59 AM  

Post a Comment

Subscribe to Post Comments [Atom]

<< Home