Saturday, October 14, 2006

ನಗೂ... ಎಂದಿದೇ ಮಂಜಿನಾ ಬಿಂದೂ...

`ನಗೂ ಎಂದಿದೆ ಮಂಜಿನಾ ಬಿಂದು...
ನಲೀ ಎಂದಿದೇ ಗಾಳಿ ಇಂದು...'
ಜಾನಕಿಯವರು ಹಾಡಿರುವ ಪಲ್ಲವಿ ಅನುಪಲ್ಲವಿ ಚಿತ್ರದ ಸುಂದರ ಹಾಡು.ಸುಪ್ರಸಿದ್ದ ನಿರ್ದೇಶಕ ಮಣಿರತ್ನಂ ಅವರ ಮೊದಲ ಚಿತ್ರ ಇದು.ಈ ಚಿತ್ರಕ್ಕೆ ಆಗ (1983ರಲ್ಲಿ) ಮೂರನೇ ಅತ್ಯುತ್ತಮ ಚಿತ್ರ ಎಂದು ಕರ್ನಾಟಕ ರಾಜ್ಯ ಪ್ರಶಸ್ತಿ ಕೂಡಾ ಬಂದಿತ್ತು ಎಂದು ಎಲ್ಲೋ ಓದಿದ ನೆನಪು R.N.ಜಯಗೋಪಾಲ್ ಬರೆದಿರುವ ಸುಂದರ ಗೀತೆಗಳಿಗೆ ಇಳೆಯರಾಜಾ ಅತ್ಯುತ್ತಮ ಸಂಗೀತ ನೀಡಿದ್ದಾರೆ ಬಾಲುಮಹೇಂದ್ರ ಅವರ ಕಣ್ ಸೆಳೆವ ಸಿನಿಮ್ಯಾಟೋಗ್ರಫಿ ಚಿತ್ರದ ಪ್ಲಸ್ ಪಾಯಿಂಟ್

ಹಮಾರೆ ತುಮಾರೆ (ಒಂದು ಸಣ್ಣ ಪಾತ್ರ),ವೋ ಸಾತ್ ದಿನ ಎಂಬ ಎರಡೇ ಎರಡು
ಹಿಂದಿ ಚಿತ್ರಗಳನ್ನೂ,ಒಂದು ತೆಲುಗು ಚಿತ್ರವನ್ನೂ ಮಾಡಿ ಸುಮ್ಮನೆ ಕೂತಿದ್ದ ಅನಿಲ್ ಕಪೂರ್ ಗೆ ನಿಜವಾದ ಬ್ರೇಕ್ ಕೊಟ್ಟಿದ್ದು ಪಲ್ಲವಿಅನುಪಲ್ಲವಿ.ನಂತರ ಅನಿಲ್ `ಮೇರಿ ಜಂಗ್'`ಕರ್ಮ'ದಂತಾ ಹಿಟ್ ಚಿತ್ರಗಳಲ್ಲಿ ನಟಿಸಿ ಹಿಂದಿಯಲ್ಲಿ ಬೆಳೆದರೂ ತಾವು ನಟಿಸಿದ ಈ ಕನ್ನಡ ಚಿತ್ರವನ್ನು ಮರೆಯಲಿಲ್ಲ
ಈಗ ಮಣಿರತ್ನಂ ಪ್ರಸಿದ್ದ ನಿರ್ದೇಶಕರಾಗಿರುವುದರಿಂದ ಅನಿಲ್ `ಪಲ್ಲವಿ ಅನುಪಲ್ಲವಿ'ಯನ್ನು ನೆನಪಿಸಿಕೊಳ್ಳುತ್ತಾರೆ ಅಂತ ಕೊಂಕು ತೆಗೆಯಬಹುದಾದರೂ ರಾಷ್ಟ್ರೀಯ ವಾಹಿನಿಯ ಸಂದರ್ಶನವೊಂದರಲ್ಲಿ ಹಿಂದಿ ನಟನೊಬ್ಬ "ಕನ್ನಡದ" ಚಿತ್ರವನ್ನು ನೆನಪಿಸಿ ಕೊಂಡಿದ್ದಕ್ಕೆ ನನಗಂತೂ ಖುಶಿಯಾಗಿತ್ತು. ತಾರೆ ಲಕ್ಷ್ಮೀ ಚಿತ್ರದ ನಾಯಕಿಯಾಗಿದ್ದರೆ ಹಿಂದಿಯ ಕಿರಣ್ ವ್ಯಾಲರಿ ಎರಡನೇ ನಾಯಕಿ.ಈ ಕಿರಣ್ ಕಮಲಹಾಸನ್ ರೊಂದಿಗೆ ಸಾಗರ್ ನಲ್ಲಿ ಕುಣಿದಿರುವ ಅದೇ `ಓ ಮಾರಿಯಾ...'

2001ರಲ್ಲಿ ನಾವು ಲಂಡನ್ ನಿಂದ ಬಾಂಬೆಗೆ ಹೋಗುವಾಗ ಅನಿಲ್ ಕಪೂರ್ ನಾವಿದ್ದ ವಿಮಾನದಲ್ಲೇ ಪಯಣಿಸಿದರು.ಕಡು ನೀಲಿ ಜೀನ್ಸ್ ಮತ್ತು ಡೆನಿಮ್ ಜ್ಯಾಕೆಟ್ ನಲ್ಲಿ ಸೊಗಸಾಗಿ ಕಾಣುತ್ತಿದ್ದ ಅನಿಲ್ ಕಪೂರ್ ತಾನು`ಸ್ಟಾರ್ 'ಎಂಬ ಬಿಂಕವೇನೂ ತೋರದೆ ನಸು ನಗುತ್ತಾ ಎಲ್ಲರನ್ನೂ ಮಾತಾಡಿಸುತ್ತಿದ್ದರು ನನ್ನ ಹತ್ರ ಆಗ ಕ್ಯಾಮರಾ ಇರಲಿಲ್ಲವಾದ್ದರಿಂದ ಅವರ ಫೋಟೋ ತೆಗೆಯಲು ಆಗಲಿಲ್ಲ ಮತ್ತು ನಾನು`ಪಲ್ಲವಿ ಅನುಪಲ್ಲವಿ 'ನೋಡಿರಲಿಲ್ಲವಾದ್ದರಿಂದ ಅದರ ಬಗ್ಗೆ ಅವರೊಡನೆ ಮಾತಾಡಲಾಗಲಿಲ್ಲ!

ಬಾಂಬೆ ಏರ್ ಪೋರ್ಟ್ ನಲ್ಲಿ ನಾವುಗಳು ಮಿಸ್ಸಿಂಗ್ ಆದ ನಮ್ಮ ಸೂಟ್ ಕೇಸ್ ಗೋಸ್ಕರ ಪರದಾಡುತ್ತಿರುವಾಗ ಅನಿಲ್ ಕಪೂರ್ ತಮ್ಮ ಡ್ರೈವರ್ ನೊಂದಿಗೆ ನಗುತ್ತಾ ಹರಟುತ್ತಾ ಹೋಗುತ್ತಿದ್ದದು ಕಾಣಿಸಿತು.ಮತ್ತರ್ಧ ಘಂಟೆಯಲ್ಲಿ `ಮುಂದಿನವಾರ ಬನ್ನೀ' ಅಂತ ಹೇಳಿಸಿಕೊಂಡು ಮುಖ ಸಪ್ಪೆ
ಮಾಡಿಕೊಂಡು ಮಾತುಂಗಾಕ್ಕೆ ಹೋಗುವಾಗ `ಈ ಸಾರಿ ಪಲ್ಲವಿ ಅನುಪಲ್ಲವಿ ನೋಡ್ ಬೇಕು'ಅಂತ ನಾವಿಬ್ಬರೂ ಆಡಿಕೊಂಡ ಮಾತಿಗೆ ಐದು ವರ್ಷಗಳಾದರೂ ಅದ್ಯಾಕೋ ಇನ್ನೂ `ಪಲ್ಲವಿ ಅನುಪಲ್ಲವಿ 'ಯನ್ನು ನೋಡಲು ಆಗಿಯೇ ಇಲ್ಲ....

3 Comments:

Anonymous Anonymous said...

pallavi anu pallavi ge nanu hudakata iddu baaLa dina ayitu..sikre khaNdita oMdu copy kaLasi....

6:20 PM  
Anonymous Anonymous said...

This comment has been removed by a blog administrator.

10:41 AM  
Blogger Satish said...

ನಾನು ಈ ಸಿನಿಮಾವನ್ನು ನೋಡಿ ಎಷ್ಟೋ ವರ್ಷಗಳಾದವು, ಚೆನ್ನಾಗಿದೆ - ನೋಡುವಂತದ್ದೇ. ಆದರೆ, ನಟ-ನಟಿ, ನಿರ್ದೇಶಕರ ಇಮೇಜುಗಳು ನಮ್ಮ ಮನದಲ್ಲಿ ಚಿತ್ರದ ಬಗ್ಗೆ ಮತ್ತೇನನ್ನೋ ನಿರೀಕ್ಷಿಸುವಂತೆ ಮಾಡೋದರಿಂದ ಸ್ವಲ್ಪ ಸಪ್ಪೆ ಎನ್ನಿಸಬಹುದು, ಆದರೂ ಹಲವಾರು ಪ್ರಥಮಗಳ ಇದೊಂದು ಒಳ್ಳೆಯ ಪ್ರಯತ್ನ.

ದಯವಿಟ್ಟು ಈ ಸಿನಿಮಾದ ಪ್ರತಿಯನ್ನು ಕೊಂಡುಕೊಳ್ಳೋದರ ಮೂಲಕ ನಮ್ಮ ಸಿನಿಮಾಗಳನ್ನು ಪೋಷಿಸಿ, ಅದರ ಬದಲು ದಯವಿಟ್ಟು ನೀವು-ನೀವೇ ಕಾಪಿ ಮಾಡಿ ಪ್ರತಿಗಳನ್ನು ಹಂಚಿಕೊಳ್ಳಬೇಡಿ. ನಿಮ್ಮಂತಹವರಿಗೆ ಐದು ಡಾಲರುಗಳು ಮಹಾ ಏನಲ್ಲ.

12:33 AM  

Post a Comment

Subscribe to Post Comments [Atom]

<< Home