ಮೊದಲ ಮಳೆ
ಇಲ್ಲಿನವರು ಇದಕ್ಕೆ ಮುಂಗಾರು ಅಂತಾರೋ,ಹಿಂಗಾರು ಅಂತಾರೋ ಅಥ್ವಾ ಸುಮ್ನೆ `ರೇನ್' ಅಂದು ಬಿಟ್ಟು ಸುಮ್ಮನಾಗುತ್ತಾರೋ ಗೊತ್ತಿಲ್ಲ ನನಗೆ. ಭಾನುವಾರ ನಿಧಾನವಾಗಿ ಬೇ ಏರಿಯಾದ ಬಾನಿನಲ್ಲಿ ಮೋಡಗಳು ಒಟ್ಟಾಗುತ್ತಿದ್ದರೆ ನನಗೆ ಆತಂಕವೂ ಜಾಸ್ತಿಯಾಗುತ್ತಿತ್ತು.ಈ ಸೀಸನ್ನಿನ ಮೊದಲ ಮಳೆ `ಬರ್ಲಾ...ಬರ್ಲಾ' ಅಂತ ಕೇಳುತ್ತಿದ್ದರೆ `ರೇನ್ ರೇನ್ ಗೋ ಅವೇ... ಕಮ್ ಅಗೈನ್ ಅನದರ್ ಡೇ..' ಅಂತ ಮಕ್ಕಳ ರೈಮ್ಸ್ ಹೇಳುವ ಮನಸ್ಸಾಗುತ್ತಿತ್ತು. ನಾನೇನೂ `ಲಿಟ್ಲ್' ಆಗೂ ಇಲ್ಲ.ಮತ್ತು ಆಡಬೇಕಾಗೂ ಇರಲಿಲ್ಲ ಮತ್ತೇನು ಇವಳ ತಕರಾರು? ಅಂದಿರಾ...
ಮಧ್ಯಾನ್ಹ ಅ.ರಾ.ಮಿತ್ರ ಅವರಿಗೂ ಸಂಜೆ ಶೆರಿಲ್ ಕ್ರೋ ಗೂ ಅಪಾಯಿಂಟ್ಮೆಂಟ್ ಕೊಟ್ಟು ಬಿಟ್ಟಿದ್ದೆ! ಈ ರೇನ್ ನನ್ನ ಪ್ರೋಗ್ರಾಂ ಎಲ್ಲಾ ಹಾಳು ಮಾಡಲು ಪ್ರೋಗ್ರಾಂ ಹಾಕಿದರೆ... ಕೋಪ ಬರೊಲ್ಲವಾ ನನಗೆ! ನಾನೆಷ್ಟು ಬೇಡಿಕೊಂಡರೂ ಕೇರ್ ಮಾಡದೇ ಅಂತೂ ಮಧ್ಯಾಹ್ನ ಮಳೆ ಸುರಿದೇ ಬಿಟ್ಟಿತು.ಮೊದಲ ಮಳೆ ಆಹಾಹಾ...ಊಹೂಹೂ...ಅನ್ನುವ ಕವಿ ಹೃದಯವೇನಿಲ್ಲಾ ನನಗೆ. ಅಥವಾ ಬೈಚಾನ್ಸ್ ಎಲ್ಲೋ ಅಲ್ಪ ಸ್ವಲ್ಪ ಕ.ಹೃ ಇದ್ದರೂ ಅದನ್ನು ಬೇಕಂತ್ಲೇ ದೂರವಿಟ್ಟು ಮಳೆಯನ್ನೂ,`ಮಳೆ ಬಂದ್ರೆ ಕೇಡೇ,ಮಗ ಉಂಡ್ರೆ ಕೇಡೇ...' ಎಂಬ ಗಾದೆಯನ್ನೂ ,ಆ ಗಾದೆ ಮಾಡಿದವರನ್ನೂ ಸೇರಿಸಿ ಶಪಿಸಿದೆ
ಅ.ರಾ.ಮಿತ್ರ ಅವರು ಸುರಿಸಿದ ಹಾಸ್ಯದ ಮಳೆಯಲ್ಲಿ ನೆನೆಯುತ್ತಾ ಕೂತಾಗ ನಿಜವಾದ ಮಳೆಯ ನೆನಪೂ ಬರಲಿಲ್ಲ.ಸಂಜೆಗೆ ಶೆರಿಲ್ ಕ್ರೋ ಗೆ `ನೀನು ಜೇನಿನಮಳೆ ಸುರಿಸಮ್ಮಾ' ಅಂತ ಹೇಳಿ ಮಳೆ ಪಾಪ ತಾನು ಹಿಂದೆ ಸರಿಯಿತು
ಶೆರಿಲ್ ಕಾನ್ಸಾರ್ಟ್ ಮುಗಿಸಿ ಮನೆಗೆ ಬರುವಾಗ ಪಾಪ ಮೊದಲ ಮಳೆಗೆ ಬೈದು ಬಿಟ್ಟೆನಲ್ಲಾ ಅಂತ ನನಗೆ ನಿಜವಾಗಿಯೂ ಬೇಜಾರಾಯಿತು.`ಸಾರಿ ಮಳೆ ಪ್ಲೀಸ್ ಈಗ ಬಾ' ಅಂದೆ. ಅದಕ್ಕೇನೋ ಬಿಂಕ! ಬರಲಿಲ್ಲ ನಾನದಕ್ಕೆ ಅನಂತ್ ನಾಗ್ `ಪ್ರೇಮಾಯಣ'ದಲ್ಲಿ ಆರತಿಗೆ ಹೇಳಿದ ಸ್ಟೈಲ್ ನಲ್ಲಿ
ಹೋದರೆ ಹೋಗು ಎಲ್ಲೊಗ್ತೀಯಾ
ಈ ಹೊತ್ತಲ್ಲಾ ನಾಳೆ ಬರ್ತೀ...
ಊರಲ್ಲೆಲ್ಲಾ ಒಬ್ಳೇ ಅಲ್ಲಾ
ನಿನ್ನಂಥೋರು ಬಹಳಾ ಬಹಳಾ...
ಅಂತ ಅಂದು ಬಿಟ್ಟೆ. ಮಳೆ ಮುನಿಸಿಕೊಂಡಿತು.ಮಳೆಗೆ ಕೋಪ ಬಂದಿದೆ ಅಂತ ನಂಗೊತ್ತು.ಮಳೆ `ತಣ್ಣಗಾಗೋಕ್ಕೆ' ತುಂಬಾ ಸಮಯ ಬೇಡಾ ಅಂತಾನೂ ಗೊತ್ತು ಅದಕ್ಕೇ ಕಾಯ್ತಾ ಇದೀನಿ `ಮುತ್ತು ಮುತ್ತು ನೀರ ಹನಿಯ ತಾಂ ತನನ' ಯಾವಾಗ ಕೇಳುತ್ತೇ ಅಂತ...
6 Comments:
"ಜಿನುಗುತೊಮ್ಮೆ ಸುರಿಯುತೊಮ್ಮೆ
ಇಳಿಯುತೊಮ್ಮೆ ಬಾರೊ ನೀ...
ಈ ಜಗವ ತೊಯ್ಯೊ ನೀ..."
ಎಂದು ಒಂದು ಪದ್ಯವಿತ್ತು, ನಾಲ್ಕನೇ ಅಥವಾ ಐದನೇ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿ (ನಮಗಿಂತ ಹಿಂದಿನ ಸಿಲೆಬಸ್; ಸುಮಾರು ೭೦ರ ದಶಕದಲ್ಲಿದ್ದದ್ದು).
ಆ ರೀತಿ 'ಶಾಲಾ ಮಗುವಿನ ಹೃದಯಭಾವ'ದಿಂದ ಹಾಡಿದರೆ, ಬೇಕಾದಾಗ ಬೇಕಾದಲ್ಲಿ ಬೇಕಾದಷ್ಟು ಬೇಕಾದಂತೆ ಮಳೆ ಬರಬಹುದೋ ಏನೊ!
hmm!!! nAnu e weekend niagra hodaaga MaLe barabeda aMta bedakoMde....ade karakkeno varuna deva nimma mele tanna vakra drishti biridda ansutte.. illi rain oMdthara ansutte...
one of the best postings so far. I really enjoyed it.
Meera.
ಜೋಶಿಯವರೇ,
ಈಗಾಗಲೇ ಶಾಲಾ ಮಕ್ಕಳು ಅವರೂರಿಗೆ ಬರುವ ಎಲ್ಲಾ ಗಣ್ಯರಿಗೂ ಸ್ವಾಗತ ಕೋರಲು ಉರಿಬಿಸಿಲಲ್ಲಿ ಬೇದಿಯಲ್ಲಿ ನಿಂತು
ಒಣಗಿಹೋಗಿವೆ ಇನ್ನು ನೀವು ಮಳೆ ಕರೆಯುವ ಕೆಲಸ ಕೊಡಬಹುದು ಪುಟಾಣಿಗಳಿಗೆ ಅಂಥ ನಮ್ಮ ನಾಯಕರುಗಳಿಗೆ ಐಡಿಯಾ ಕೊಡುವುದು ನೋಡಿ ಗಾಭರ ಯಾಗುತ್ತಿದೆ!
ಮಹಂತೇಶರೇ,
ನಿಮ್ಮನ್ನು ನಾನು `ಸ್ಯೂ' ಮಾಡುವೆ!
ಥ್ಯಾಂಕ್ಸ್ ಮೀರಾ
Post a Comment
Subscribe to Post Comments [Atom]
<< Home