ಗೆಲುವಾಗೆಲೆ ಮನ...
ನಿರ್ಮಲವಾದ ತಿಳಿನೀರಿನಲ್ಲಿ ಆನಂದದಿಂದ ವಿಹರಿಸುತ್ತಿರುವ ಈ ಶುಭ್ರ ಶ್ವೇತ ಪಕ್ಷಿಗಳನ್ನು ನೋಡಿ ಎಷ್ಟು ಹಗುರವಾಗಿ ತೇಲುತ್ತಿರುವ ಇವುಗಳನ್ನು ಕಂಡು ಪ್ರಪಂಚದ ಭಾರವೆಲ್ಲಾ ನಾನೇ ಹೊತ್ತಿದ್ದೇನೆ ಅಂತ ಸುಮ್ ಸುಮ್ನೆ ಆದಿಶೇಷನ ಪೋಸು ಕೊಡುವ ನಾವುಗಳು ಕಲಿಯ ಬೇಕಾದ್ದು ಇದೆ ಅಂತ ಅನ್ನಿಸುವುದಿಲ್ಲವೇ?
ಇವುಗಳು` ಲಘುವಾಗೆಲೆ ಮನ ಗೆಲವಾಗೆಲೆ ಮನ' ಎನ್ನುತ್ತಾ ಹಗುರವಾಗಿ` ಹಾರಿ ಹರಿಯನ್ನು ಮುಟ್ಟುತ್ತಿರುವಾಗ' ಸೋಕಾಲ್ಡ್ ಬುದ್ದಿವಂತ ಮಾನವರಾದ ನಾವು `ಹರಳೆಣ್ಣೆ ಮುಖ' ಮಾಡಿಕೊಂಡು ಕೂರೋದ್ರಲ್ಲಿ ಅರ್ಥವಿದೆಯೇ?
ಎಲ್ಲಿ ಚಿಯರ್ ಅಪ್....ಹಾಗೇ....
4 Comments:
ಬ್ಲಾಗ್ ತುಂಬಾ ಚೆನ್ನಾಗಿದೆ, ಚಿತ್ರಗಳು ಕೂಡ.. ಇವತ್ತೇ ಮೊದಲನೇ ಸಲ ಇಲ್ಲಿಗೆ ಬಂದದ್ದು ನಾನು.
ನನ್ನ blog pageನಲ್ಲಿ ನಿಮ್ಮ ಬ್ಲಾಗಿನ ಕೊಂಡಿ ಹಾಕ್ಲಿಕ್ಕೆ ಅನುಮತಿಯುಂಟೆ?
ಮಾಲ,
ಈಚಿತ್ರದ ಶೀರ್ಷಿಕೆಯೇ ನನ್ನನ್ನು ಆಕರ್ಷಿಸಿತು.ನನ್ನ ತಂದೆಯವರ ಕವನಗಳಲ್ಲಿ ನನಗೆ ಅತ್ಯಂತ ಪ್ರಿಯವಾದ ಕವನಗಳಲ್ಲೊಂದು" ಗೆಲುವಾಗೆಲೆ ಮನ". ಕೆಸರಿನ ಕೊಳದಲ್ಲಿ ಈಸುತಿದ್ದರೂ ಈ ಹಂಸಗಳು ಎಷ್ಟು ಸ್ವಛ್ಛವಾಗಿದೆ ನೋಡಿ!ಅಣ್ಣನ ಮತ್ತೊಂದು ಪದ್ಯ ನೆನಪಿಗೆ ಬಂತು
"ಹಗುರಾಗಿಹ ಮೈ,ಕೆಸರಿಲ್ಲದಮನ
ಹಂಗಿಲ್ಲದ ಬದುಕು
ಕೇಡೆಣಿಸದ ನಡೆ,ಕೆಡುಕೆಣಿಸದ ನುಡಿ
ಸಾಕಿದು ಇಹಕು ಪರಕು
ಮೇಲೇನಿದೆ ಇದಕೂ!"
ನಮ್ಮೆಲ್ಲರ ಮನ ಕೆಸರಿಲ್ಲದ ಮನವಾಗಿರಲಿ ಎಂದು ಹಾರೈಸುತ್ತೇನೆ.
ಅಲಮೇಲು
ಶ್ರೀಲತಾ ಅವರಿಗೆ
ದುರ್ಗಕ್ಕೆ ಸ್ವಾಗತ ನಿಮ್ಮ ಮೆಚ್ಚುಗೆಗಾಗಿ ಥ್ಯಾಂಕ್ಸ್
ಹೀಗೇ ಆಗಾಗ ಬರ್ತಾ ಇರಿ
ನಿಮ್ಮ ಬ್ಲಾಗಿನಲ್ಲಿ ಲಿಂಕ್ ಅನ್ನು ಹಾಕಿ ಮತ್ತು ಅದಕ್ಕಾಗಿ ನಿಮಗೆ
ಧನ್ಯವಾದಗಳು
ಅಲಮೇಲು ಅವರಿಗೆ ,
ದುರ್ಗಕ್ಕೆ ಸ್ವಾಗತ. ನಿಮ್ಮ ತಂದೆ ಪು.ತಿ.ನ ಅವರ ಈ ಪದ್ಯ
ನನಗೆ ತುಂಬಾ ಇಷ್ಟ.ರಾಜ್ ಇದನ್ನು ತುಂಬಾ ಚೆನ್ನಗಿ ಹಾಡಿದ್ದಾರೆ ಕೂಡಾ.
ನೀವು ಇಲ್ಲಿ ನೆನಪಿಸಿದ ಇನ್ನೊಂದು ಪದ್ಯವೂ ಬಹಳ ಅರ್ಥವತ್ತಾಗಿದೆ. ಧನ್ಯವಾದಗಳು
Post a Comment
Subscribe to Post Comments [Atom]
<< Home