ಜಾತ್ರೆಯಲ್ಲಿ...
ಆಗಷ್ಟೇ ಅರಳುತ್ತಿರುವ ಪುಟ್ಟ ಮೊಗ್ಗಿನಂಥಾ ಮುದ್ದು ಹುಡುಗನೊಬ್ಬ ಜಾತ್ರೆಗೆ ಬಂದಿದ್ದಾನೆ
ಅದೂ ಇದೂ ಅಂತೆಲ್ಲಾ ನೋಡಿದ ಮೇಲೆ ಅವನಿಗೆ `ಮೆರ್ರಿ-ಗೋ-ರೌಂಡ್' ನಲ್ಲಿ ಕೂರುವ ಆಸೆಯಾಗಿದೆ ಯಾವುದೇ ಆರೇಳರ ಹುಡುಗನಿಗಿರಬಹುದಾದ ತೀರಾ ಸಾಮಾನ್ಯ ಆಸೆ ಅದು ಆದರೆ ಅವನಿಗೇನೋ ಸಂಕೋಚ,ಹಿಂಜರಿಕೆ..."ಅದಕ್ಕಿಂಥಾ ಹೆಚ್ಚಾಗಿ ನಾನೆಲ್ಲಿ ಕೂರಲೀ" ಎಂಬ ದೊಡ್ಡ ಪ್ರಶ್ನೆ ಭಾದಿಸುತ್ತಿದೆ ಏಕೆಂದರೆ ಅವನೊಬ್ಬ ಕಪ್ಪು ಹುಡುಗ! ಆ ಕಪ್ಪು ಪುಟಾಣಿಗೆ ತುಂಬಾ ಯೋಚನೆಯಾಗಿ ಹೀಗೆ ಕೇಳುತ್ತಾನೆ....
ಈ ಮೆರ್ರಿ-ಗೋ-ರೌಂಡ್ ನಲ್ಲಿ `ಜಿಮ್ ಕ್ರೋ'ವಿಭಾಗ ಎಲ್ಲಿದೆ ಮಹನೀಯರೇ...
ಏಕೆಂದರೆ ನನಗೆ ಇದರಲ್ಲೊಂದು ಸುತ್ತು ಸವಾರಿ ಮಾಡಬೇಕೆಂದು ಆಸೆಯಾಗುತ್ತಿದೆ
ನಮ್ಮ ದಕ್ಷಿಣದಲ್ಲಿ ಹಾಗೆಲ್ಲಾ ಬಿಳಿಯರ ಪಕ್ಕ ಕರಿಯನಾದ ನಾನು ಕೂರುವಂತಿಲ್ಲಾ
`ಜಿಮ್ ಕ್ರೋ'ಬೋಗಿಗಳೆಂದೇ ದಕ್ಷಿಣದ ರೈಲುಗಳಲ್ಲಿ ನಮಗೆ ಬೇರೆ ಬೋಗಿಗಳಿವೆ
ಬಸ್ಸಿನಲ್ಲಿ ಸಹ ನಮ್ಮನ್ನು ಬೇರೆಯಾಗಿ ಹಿಂದೆ ಕೂರಿಸುತ್ತಾರೆ
ಆದರೆ ಈ ಮೆರ್ರಿ-ಗೋ-ರೌಂಡ್ ನಲ್ಲಿ ನನಗೆ ಹಿಂದೆ ಯಾವುದು ಮುಂದೆ ಯಾವುದುಅಂತ ಗೊತ್ತಾಗುತ್ತಿಲ್ಲಾ....
ಇಲ್ಲಿ ಕಪ್ಪು ಹುಡುಗನಿಗೋಸ್ಕರ ಇರುವ ಕುದುರೆಯಾವುದು? ಅಂತ ಸ್ವಲ್ಪ ಹೇಳ್ತೀರಾ.....
ಲಾಂಗ್ಸ್ಟನ್ ಹ್ಯೂಗ್ಸ್ ಬರೆದಿರುವ "ಜಾತ್ರೆಯಲ್ಲಿ ಕಪ್ಪುಹುಡುಗ" ಕವನ ಓದಿದಾಗ ಗಂಟಲು ಬಿಗಿದು ಹೋಯಿತು.ಕಣ್ಣು ಮಂಜಾದವು ಮೈಯ ರಕ್ತವೆಲ್ಲಾ ಕುದ್ದು ಹೋಯಿತು
ನಿಮಗಾಗಿ ಈ ಕವನ...
Merry-Go-Round by Langston Hughes
COLORED CHILD AT CARNIVAL
Where is the Jim Crow section
On this merry-go-round,
Mister, cause I want to ride?
Down South where I come from
White and colored
Can't sit side by side.
Down South on the train
There's a Jim Crow car.
On the bus we're put in the back
—But there ain't no back
To a merry-go-round!
Where's the horse
For a kid that's black?
ಅಯ್ಯೋ.. ಈ ಬಿಳಿಯರು ಮಾಡಿರುವ ಕೆಟ್ಟ ಬುದ್ದಿಗೆ ಕೊನೆ ಮೊದಲೇ ಇಲ್ಲಾತುಂಬಾ ಕ್ರೂರಿಗಳಪ್ಪಾ...
ಅಂಥಾ ಉದ್ಗಾರ ತೆಗೆಯುತ್ತೀವಿ ನಾವು....
ಹುಡುಗಿ ಕಪ್ಪು ನಮಗೆ ಬೇಡಾ...,ಮಗು ಬಣ್ಣ ಕಡಿಮೆ....,ಅವನಾ ತೊಳೆದ ಕೆಂಡ...ಏಯ್ ಕರಿ ಕಪ್ಪೇ..ಬಾರೋ ಇಲ್ಲೀ...,ನಿಮ್ಮ ಮಗಳು ಬೆಳ್ಳಗಿಲ್ಲಾ ವರದಕ್ಷಿಣೆಗೆ ದುಡ್ಡು ಕೂಡಿಸಲು ಈಗಿಂದಾನೇ ಶುರು ಮಾಡಿ...,ನೋಡೂ ಕಪ್ಪಗಿರೋ ಹುಡುಗೀರೂ ಯಾವ ಹುಡುಗ ಸಿಕ್ಕಿದರೂ ಸುಮ್ನೆ ಒಪ್ಕೊಂಡು ಮಾಡ್ಕೋಬೇಕು.... ಈ ಎಲ್ಲಾ ಮುತ್ತು ಉದುರಿಸುವವರು ಬಿಳಿಯರಲ್ಲಾ....ನಾವೇ
ಈಗ ಹೇಳಿ ನಮಗೂ ಬಿಳಿಯರಿಗೂ ಏನು ವ್ಯತ್ಯಾಸ?????
ಟಿಪ್ಪಣಿ-೧೮೬೦ ರ ದಶಕ ಅಮೆರಿಕನ್ ಸಿವಿಲ್ ವಾರ್ ನ ನಂತರ ಅಮೆರಿಕದ ದಕ್ಷಿಣ ಭಾಗದ ಬಹುಪಾಲು ರಾಜ್ಯಗಳು `ಜಿಮ್ ಕ್ರೋ'ಲಾ ಗಳನ್ನು ಜಾರಿಗೆ ತಂದವು.ಈ ಲಾ ಗಳ ಪ್ರಕಾರ ಸಾರ್ವಜನಿಕ ಸ್ಥಳಗಳಾದ ಶಾಲೆ,ಹೋಟೆಲ್,ಸಿನಿಮಾ,ನಾಟಕ ಮಂದಿರ,ಆಟದ ಮೈದಾನ ಮುಂತಾದುವುಗಳಲ್ಲಿ ಕರಿಯರ ಪ್ರವೇಶಕ್ಕೆಕಟ್ಟುಪಾಡು ವಿಧಿಸಲಾಯಿತು.ಸಾರ್ವಜನಿಕ ಬಸ್ಸುಗಳಲ್ಲಿ ಕರಿಯರ ಆಸನಗಳು ಬಿಳಿಯರ ಆಸನಗಳು ಎಂದು ನಿಗದಿಮಾಡಲಾಗಿತ್ತು.ಟ್ರೇನು ಗಳಲ್ಲೂ ಕರಿಯರಿಗೆ ಬೇರೆ ಡಬ್ಬಿಗಳಿರುತ್ತಿದ್ದವು.
`ಜಿಮ್ ಕ್ರೋ'೧೮೨೦ ರಲ್ಲಿ ಪ್ರಚಲಿತವಿದ್ದ ಹಾಡಿನಲ್ಲಿನ ಒಂದು ಕರಿಯನೊಬ್ಬನ ಪಾತ್ರ.
3 Comments:
ಎಂದೋ ಓದಿದ್ದು ನೆನಪಾಗ್ತಿದೆ
ನಾ ಕರಿಯನೆಂದು ನೀ ಜರಿಯಬೇಡ
ಬಿಳಿ ಗೆಳತಿ ಗರ್ವದಿಂದ
ಕಪ್ಪಿಗಿಂತ ಬಿಳಿ ಬಣ್ಣ ಹೆಚ್ಚು
ಹೇಳಾವ ಹಿರಿಮೆಯಿಂದ.
ಮನದಿಂದ ಮತ್ತೊಂದು ಉತ್ತಮ ಲೇಖನ
This comment has been removed by a blog administrator.
ತವಿಶ್ರೀ ಅವರೇ,
ನಾನೂ ಈ ಹಾಡು ಕೇಳಿದ್ದೇನೆ
ತುಂಬಾ ಅರ್ಥಪೂರ್ಣವಾದ ಹಾಡು
ನಿಮ್ಮಲ್ಲಿದ್ದರೆ ನನಗೆ ಕಳಿಸಿಕೊಡಿ
ಇದರ ಕವಿ ಯಾರು ಅಂತ ನಿಮಗೆ ಗೊತ್ತಿದ್ದರೆ ತಿಳಿಸಿ
Post a Comment
Subscribe to Post Comments [Atom]
<< Home