ಸರಳ ಸುಂದರಿ
ಕಪ್ಪು-ಬಿಳುಪು ಚಿತ್ರಗಳು ಬಣ್ಣದ ಫೋಟೋಗಳಷ್ಟು ಆಕರ್ಷಕವಾಗಿರುವುದಿಲ್ಲ ನಿಜ.ಆದರೆ ಈ ಕಪ್ಪು ಬಿಳುಪು ಚಿತ್ರಗಳು ನೋಡುಗನಲ್ಲಿಒಂದು ರೀತಿಯ ಆತ್ಮೀಯತೆ ತೋರಿ ಹತ್ತಿರವಾಗುತ್ತವೆ ಅಂತ ನನಗನ್ನಿಸುತ್ತೆ.
image ಗಳಲ್ಲಿನ ಸರಳತೆಯೇ ಇದಕ್ಕೆ ಕಾರಣ.ಕಪ್ಪು-ಬಿಳುಪು ಫೋಟೋಗಳು ನೋಡುಗನನ್ನು ಅನಗತ್ಯವಾಗಿ distract ಮಾಡುವುದಿಲ್ಲ.ನೆರಳು-ಬೆಳಕಿನ ವಿನ್ಯಾಸವನ್ನುBlack & White ಫೋಟೋಗಳು ಅನುಪಮವಾಗಿ ಸಾಧಿಸುತ್ತವೆ.ಕಪ್ಪು-ಬಿಳುಪು ಚಿತ್ರಗಳಲ್ಲಿನ Depth ಬಣ್ಣದ ಚಿತ್ರಗಳಲ್ಲಿ ಕಾಣದು
ಯಾವುದೇ ಬಣ್ಣದ ಬೆಡಗಿಲ್ಲದೇ `ಮರ್ಸೆಡ್' ಸರಳ ಸುಂದರಿಯಾಗಿ ಈ ಚಿತ್ರದಲ್ಲಿ ಕಂಗೊಳಿಸುತ್ತಿದ್ದಾಳೆ ಅಂತ ನಿಮಗನ್ನಿಸುವುದಿಲ್ಲವೇ?
Merced & it's Many Moods-3
2 Comments:
ನಿಮ್ ಪ್ರಶ್ನೆಗ್ ಉತ್ರ ಗೊತ್ತಿಲ್ಲ; ನಮ್ ಮೇಷ್ಟ್ರು ಬಿಳಿ ಎಲ್ಲ ಬಣ್ಣಗಳನ್ನೂ ಪ್ರತಿಫಲಿಸುತ್ತೆ, ಕಪ್ಪು ಎಲ್ಲ ಬಣ್ಣಗಳನ್ನೂ ಹೀರಿಕೊಳ್ಳುತ್ತೆ ಅಂತ ಹೇಳಿಕೊಟ್ಟ ನೆನಪು.
ಅದಿರ್ಲಿ ಬಣ್ಣಗಳು ನಮ್ ಮನಸಲ್ ಇರೋದೋ ಅಥವಾ ಚಿತ್ರದಲ್ಲಿ mUಡೋದೋ?
ನಾವ್ ನೋಡ್ದಾಗ ಸ್ವಾಭಾವಿಕ ಬಣ್ಣಗಳಲ್ಲಿ ಕಾಣೋ ಮರ್ಸೆಡ್ ಆಗ್ಲಿ ಇನ್ನೊಂದೇ ಆಗ್ಲಿ ಕೃತಕವಾದ 'ಕಪ್ಪು-ಬಿಳುಪಿ'ನಲ್ಲಿ ಕಂಗೊಳಿಸ್ತಾಳೆ ಅನ್ನೋದು ಅವರವರ ಭಾವನೆ ಅಷ್ಟೆ, ನನಗಂತೂ ಹಂಗನ್ಸಲ್ಲಪ್ಪಾ!
ಕಾಳೂ ಅವರೇ,
ನೀವು ಹೇಳಿದ್ದು ನಿಜ ಬಣ್ಣಗಳು ಮನಸ್ಸಿನಲ್ಲೇ ಇರೋದು
ಆದರೆ ಈಗಿನ ತಂತ್ರ ಜ್ಞಾನ ಎಷ್ಟು ಮುಂದುವರೆದಿದೆ ಅಂದ್ರೆ ಆ ಮನಸ್ಸಿಗೇ ಮೋಸ ಮಾಡುವಷ್ಟು!
ನಾನು `ಸರಳ ಸುಂದರಿ, ಬಣ್ಣದ ಬೆಡಗಿಲ್ಲದೇ'...ಎಂಬ ಮಾತುಗಳನ್ನು ಉಪಯೋಗಿಸಿದ್ದು ಯಾಕೆಂದರೇ....
ಇವತ್ತಿನ ಪೋಸ್ಟಿಂಗ್ ನೋಡಿ....
Post a Comment
Subscribe to Post Comments [Atom]
<< Home