Monday, October 23, 2006

ನೋಡಿದೋ ಇಲ್ಲರಳಿ ನಗುತಿದೆ ಏಳು ಸುತ್ತಿನ ಮಲ್ಲಿಗೆ...


ನೋಡಿದೋ ಇಲ್ಲರಳಿ ನಗುತಿದೆ
ಏಳು ಸುತ್ತಿನ ಮಲ್ಲಿಗೆ
ಎಷ್ಟು ಹಚ್ಚನೆ ಹಸಿರು ಗಿಡದಿ
ಎಂತು ಮೂಡಿತೋ ಬೆಳ್ಳಗೆ...

ತತ್ವಶೀಲನ ಧ್ಯಾನ ಮೌನವೆ
ಅರಳಿ ಬಂದೊಲು ತೋರಿದೆ
ಒಲವು ತುಂಬಿದ ಮುಗುದೆ
ಎದೆಯಿಂ ಒಗೆದ ನಲ್ನುಡಿಯಂತಿದೆ...

ಇವತ್ತಿನ ಪೋಸ್ಟಿಂಗ್ ನಲ್ಲಿ ಇರುವ ತಪ್ಪು ಕಂಡು ಹಿಡಿಯುವಿರಾ?

3 Comments:

Anonymous Anonymous said...

ಈ ಗುಲಾಬಿಯು ನಿಮಗಾಗಿ ಇದು ಚೆಲ್ಲುವ ಪರಿಮಳ ನಿಮಗಾಗಿ ಅಂತ ಹಾಡಿದ್ರೆ ಚೆನ್ನಾಗಿತ್ತೇನೊ ಅಲ್ವಾ?? :-)
Anyways, very nice and cute photo..

11:56 AM  
Anonymous Anonymous said...

ಮಲ್ಲಿಗೆ ಅಂತೀರಾ, ಬೆಳ್ಳಗೆ ಅಂತೀರಾ? ಇಲ್ಲಿ ನೋಡಿದ್ರೆ ಹಳದಿ ಗುಲಾಬಿ ಇದ್ದ ಹಾಗಿದೆ. ನನಗೇನೋ ಆರೇ ಸುತ್ತು ಕಾಣಿಸ್ತಿದೆ. ಇನ್ನೊಂದು ಸುತ್ತು ಅರಳಬೇಕು ಅನ್ಸತ್ತೆ.

ಹೂವಿಗ ತಕ್ಕನಾದ ಕವನ. ಯಾರು ಬರೆದದ್ದು ಮೇಡಂ? ನೀವೇ ಆಗಿದ್ರೆ ಸೂಪರ್ ಕವನ. ನನ್ನ ಟೋಪಿ ಕೆಳಗೆ

6:53 PM  
Blogger mala rao said...

ಇದು ನಾನು ಬರೆದ ಕನ್ವನ ಅಲ್ಲ
ಶಿವರುದ್ರಪ್ಪನವರದ್ದೋ ಕಣವಿಯರದ್ದೊ ನೆನಪಿಲ್ಲಾ
ಈ ಹಾಡು ತುಂಬಾ ಚೆನ್ನಾಗಿದೆ ನನಗೆ ನೆನಪಿರುವ ಸಾಲುಗಳನ್ನಷ್ಟೇ ಇಲ್ಲಿ ಬರೆದಿದ್ದೇನೆ

3:37 PM  

Post a Comment

Subscribe to Post Comments [Atom]

<< Home