Tuesday, February 13, 2007

ಕೆಂಪು ಗುಲಾಬಿಯ ಚೆಲುವೆಗೆ...


A Red, Red Rose

O, my luv is like a red, red rose,
That's newly sprung in June.
O my luv is like the melodie,
That's sweetly played in tune.

As fair art thou, my bonnie lass,
So deep in luv am I,
And I will luv thee still, my dear,
Till a' the seas gang dry.

Till a' the seas gang dry, my dear,
And the rocks melt wi' the sun!
And I will luv thee still, my dear,
While the sand o' life shall run.

And fare thee well, my only luv,
And fare thee well awhile!
And I will come again, my luv,
Though it were ten thousand mile!

-Robert Burns

**************
ಇಂಗ್ಲೀಷ್ ಸಾಹಿತ್ಯದ ರಮ್ಯಪಂಥದಲ್ಲಿ ಚಿರಸ್ಥಾಯಿಯಾಗಿರುವವನು Robert Burns (1759- 1796 ) .ಇಂದು
ಸ್ಕಾಟ್ ಲ್ಯಾಂಡಿನ ಹೆಮ್ಮೆಯ ಕವಿ ಎಂದೇ ಕೀರ್ತಿಸಲ್ಪಡುವ, ತನ್ನ ಚೆಂಗುಲಾಬಿಯ ಪದ್ಯಕ್ಕಾಗಿ ಜಗತ್ತಿನಲ್ಲೆಲ್ಲಾ ಪ್ರಸಿದ್ದಿ ಪಡೆದಿರುವ Burns ತನ್ನ ಜೀವಿತಕಾಲದಲ್ಲಿ ಬಹು ಕಷ್ಟಕರವಾದ ಬಾಳು ಬಾಳಿ ಚಿಕ್ಕವಯಸ್ಸಿಗೇ ತೀರಿಕೊಂಡವನು
ಆದರೆ Burns ರಚಿಸಿದ ಐನೂರಕ್ಕೂ ಹೆಚ್ಚಿನ ಪದ್ಯಗಳು ಕನ್ನಡವೂ ಸೇರಿದಂತೆ ಜಗತ್ತಿನ ಹಲವಾರು ಭಾಷೆಗಳಿಗೆ ಅನುವಾದವಾಗಿವೆ.ಇಂದಿಗೂ ಹಲವು ಕವಿಗಳಿಗೆ,ಪ್ರೇಮಿಗಳಿಗೆ, ಸಹೃದಯರಿಗೆ ಸ್ಪೂರ್ತಿಯಾಗಿ ಉಳಿದಿವೆ...

******************
Burnsನಿಂದ ಸ್ಪೂರ್ತಿ ಪಡೆದ ಕನ್ನಡದ ಕವಿಗಳಲ್ಲಿ ನಮ್ಮ ಕೆ.ಎಸ್.ನರಸಿಂಹಸ್ವಾಮಿ ಪ್ರಮುಖರು. ಹಲವಾರು ಕಡೆ
`Burns ನನಗೆ ಬಹಳ ಹತ್ತಿರದವನು' ಎಂದು ಸ್ವತಃ ಕೆ.ಎಸ್.ನ. ಹೇಳಿಕೊಂಡಿದ್ದಾರೆ.
ನನಗೇಕೋ ಯಾವ ಕೆಂಪು ಗುಲಾಬಿಯ ಹಾಡು ಕೇಳಿದರೂ ಅದರಲ್ಲಿ Burnsನ ಗುಲಾಬಿಯ ಸುವಾಸನೆಯೇ ಅನುಭವವಾಗುತ್ತದೆ! ಪಿ.ಬಿ.ಶ್ರೀನಿವಾಸ್ ಹಾಡಿರುವ `ಕೆಂಪು ಗುಲಾಬಿಯ ಚೆಂದುಟಿ ಚೆಲುವೇ...'ಶಿವಮೊಗ್ಗ ಸುಬ್ಬಣ್ಣ ಅವರ ಸುಪರಿಚಿತ `ಚೆಂಗುಲಾಬಿಯ ನಡುವೆ ನಾ ನಿನ್ನ ಕಂಡೆ...' ಇವುಗಳಲ್ಲಿ ಕೆಲವು...

********************
ಪ್ರೇಮೋತ್ಸವಕ್ಕಾಗಿ ನಾನು ಮೊಟ್ಟ ಮೊದಲು ಕೈಗೆತ್ತಿಕೊಂಡ ಕವನಗಳಲ್ಲಿ ಇದೂ ಒಂದು...ನಾನು ಈ ಕೆಂಪುಗುಲಾಬಿಯನ್ನು ಕೈಗೆತ್ತಿಕೊಡಾಗಲೇ ಅಂದುಕೊಂಡೆ ಅವತ್ತಿನ ದಿನಕ್ಕೇ ಸರಿಯಾಗಿ ಇದು ಇನ್ಯಾವುದಾದರೂ ಬ್ಲ್ಯಾಗ್ ನಲ್ಲಿ ಮುಖ ತೋರಿಸುತ್ತೇ ಅಂತ...ಇಲ್ಲಿವರೆಗೂ ಯಾವ ಬ್ಲಾಗ್ ನಲ್ಲೂ ಕಾಣಿಸಿಲ್ಲ ನೋಡೋಣಾ...
ಆದರೆ `ಸುಧಾ' ವಾರಪತ್ರಿಕೆಯ ಈ ವಾರದ ಸಂಚಿಕೆಯಲ್ಲಿ A Red,Red Rose ನ ಕನ್ನಡ ಅನುವಾದ ಪ್ರಕಟವಾಗಿದೆ

ಪ್ರೇಮೋತ್ಸವ-9

7 Comments:

Anonymous Anonymous said...

ಸುಧಾದಲ್ಲಿ ಬಂದಿರುವ ಕೆ.ಟಿ.ಗಟ್ಟಿಯವರ ಅನುವಾದಕ್ಕಿಂತ ಬಿ.ಆರ್.ಎಲ್ ಮಾಡಿರುವ ಅನುವಾದ ಚೆನ್ನಾಗಿದೆ. ಪೂರ್ಣ ಪದ ಪದ ಅನುವಾದವಲ್ಲ. ಭಾವಾನುವಾದ ಅವರದು. ಅದನ್ನು ಸಿ.ಅಶ್ವಥ್ ಹಾಡಿದ್ದಾರೆ ಕೇಳಿದ್ದೀರಾ?

"ಕೆಂಪು ಕೆಂಪು ಕೆಂಗುಲಾಬಿ ನನ್ನ ಪ್ರೇಯಸಿ
ಮಧುರವಾದ ವೇಣುನಾದ ನನ್ನ ಪ್ರೇಯಸಿ" - ಅಂತ ಬರತ್ತೆ ಮೊದಲ ಸಾಲುಗಳು.

12:04 PM  
Blogger Shiv said...

ಕೆ.ಎಸ್.ನ ವರ ಸ್ಪೂರ್ತಿ ನೀಡಿದ ಕವಿಯ ಬಗ್ಗೆ ಪರಿಚಯಿಸಿದ್ದಕ್ಕೆ ವಂದನೆಗಳು

9:58 PM  
Blogger mala rao said...

ಇಲ್ಲಾ ತ್ರಿವೇಣಿಅವರೇ
ನಾನು ಈ ಹಾಡು ಕೇಳಿಲ್ಲಾ
ಯಾವ ಕ್ಯಾಸೆಟ್ ನಲ್ಲಿ ಇದೆ ಅದು?

12:00 PM  
Blogger mala rao said...

ಶಿವು ಅವರೇ,
ಪ್ರತಿಕ್ರಿಯೆಗಾಗಿ ಧನ್ಯವಾದಗಳು

12:00 PM  
Anonymous Anonymous said...

ಕ್ಯಾಸೆಟ್ ಹೆಸರೇ "ಕೆಂಗುಲಾಬಿ" :)

And fare thee well, my only luv,
And fare thee well awhile!
And I will come again, my luv,
Though it were ten thousand mile!

ಇದಕ್ಕೆ ಬಿ.ಆರ್.ಎಲ್ .ಅನುವಾದ ಇದು -

ಹೋಗಿ ಬರುವೆ ನನ್ನ ನಲ್ಲೆ
ಘಳಿಗೆ ಕಾದಿರು
ಸಾವಿರಾರು ಮೈಲಿ ಇರಲಿ
ಮತ್ತೆ ಬರುವೆನು!

1:07 PM  
Anonymous Anonymous said...

ಹೌದು, ಈ ಹಾಡು ನಾನೂ ಕೇಳಿದ್ದೇನೆ, ಸುಂದರವಾಗಿದೆ. ಆದರೆ ಈಗ link ಸಿಗುತ್ತಿಲ್ಲ. ಇಲ್ಲಿ ಮೈಸೂರು ಅನಂತಸ್ವಾಮಿ ಹಾಡಿದ ಗೀತೆಯ link ಇದೆ, ನೋಡು.

http://www.udbhava.com/usearch/search.spring?ps=on&md=on&ly=on&cat=0&qs=B+R+Lakshman+Rao&st=on&at=on&sx=on#

ಇದರಲ್ಲಿ ಐದನೇ ಹಾಡು.

ಸಿ.ಅಶ್ವಥ್ ಹಾಡಿದ್ದು ಇದಕ್ಕಿಂತಲೂ ಸುಶ್ರಾವ್ಯವಾಗಿದೆ. ಸಿಕ್ಕಿದರೆ ಕೇಳು.

11:24 AM  
Blogger mala rao said...

ಜ್ಯೋತಿ ಮತ್ತು ತ್ರಿವೇಣಿ ಇಬ್ಬರಿಗೂ
ನನಗೆ ಕೆಂಪುಗುಲಾಬಿಯ ಹಾಡಿನ ಬಗ್ಗೆ ಮಾಹಿತಿಗಾಗಿ ಧನ್ಯವಾದಗಳು ಹಾಡು ಕೇಳುತ್ತೇನೆ

9:41 PM  

Post a Comment

Subscribe to Post Comments [Atom]

<< Home