Wednesday, November 07, 2007

ನಂದ ಗೋಕುಲಕೆ ಬನ್ನಿ...

ಅಮ್ಮ ನನಗೆ ಅಂತ ಒಂದು ಬ್ಲಾಗ್ ಮಾಡಿದಾಳೆ ಅದ್ರ ಹೆಸರು `ನಂದಗೋಕುಲ' ಅಂತ ನಾನು ಕೃಷ್ಣ ಅಲ್ವಾ...ಅದಕ್ಕೇ ನಾನು ನನ್ನ ಸ್ನೇಹಿತರು ಎಲ್ಲಾ ಕೂಡಿ ಹಾಡಿ ಆಡುವ ಜಾಗಕ್ಕೆ ನಂದ ಗೋಕುಲ ಅಂತಾನೆ ಅಮ್ಮ ಹೆಸರಿಟ್ಟಿದ್ದು ನಂದಗೋಕುಲದಲ್ಲಿ ಅಮ್ಮ ನಂಗೆ ಮತ್ತೆ ನನ್ನಂತ ಪುಟಾಣಿಗಳಿಗೆ ಅಂತ ಮಕ್ಕಳ ಹಾಡು, ನರ್ಸರಿ ರೈಮ್ಸ್ ಎಲ್ಲಾ ಹಾಕ್ತಾಳೆ ದೊಡ್ಡ ದೊಡ್ದ ಕವಿಗಳು ಬರೆದ ಹಾಡುಗಳು,ಇಂಗ್ಲಿಷ್ ರೈಮ್ಸ್ ಜೊತೆಗೆ ನಂಗೆ ಅಂತ ಅಮ್ಮ ಬರೆದ ಸೂಪರ್ ಫ್ರೆಶ್ ಹಾಡುಗಳು ಇಲ್ಲಿ ನಿಮ್ಗೆ ಸಿಗುತ್ವೆ ಜೊತೆಗೆ ನನ್ನ ಮತ್ತು ಪುಟಾಣಿ ಗಳ ಫೋಟೋನೂ ಹಾಕ್ತಾಳೆ ಅಮ್ಮ.

ನೀವೆಲ್ಲಾ ನನ್ನ ನಂದ ಗೋಕುಲಕ್ಕೆ ಬನ್ನಿ...
ಎಲ್ರೂ ಒಟ್ಟಿಗೆ ಹಾಡೋಣಾ...ಮತ್ತೆ ಆಡೋಣಾ...
ನಾನು ಕಾಯ್ತಾ ಇರ್ತೀನೀ...
ಬರ್ತೀರಿ ಅಲ್ವಾ...

-ಅಮರ್ತ್ಯ ಕೃಷ್ಣ

1 Comments:

Anonymous Anonymous said...

ಅಬ್ಬಾ... ಚಿತ್ತಚೋರ ಅಂದ್ರೆ ಇವನೇ...!! ಎಷ್ಟೆಂದರೂ ಕೃಷ್ಣನಲ್ಲವೆ?

-ಮನಸೋತ ಆಂಟಿ.

3:18 PM  

Post a Comment

Subscribe to Post Comments [Atom]

<< Home