"ಬೆಳ್ಳನೆ ಬೆಳಗಾಯಿತು...."
"ಬೆಳ್ಳನೆ ಬೆಳಗಾಯಿತು..." ಹೆಸರಾಂತ ಹಿಂದಿಗಾಯಕಿ ಲತಾ ಮಂಗೇಶ್ಕರ್ ಕನ್ನಡದಲ್ಲಿ ಹಾಡಿರುವ ಹಾಡು `ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ' ಸಿನಿಮಾದ್ದು. ಕಪ್ಪು-ಬಿಳುಪುನಲ್ಲಿರುವ ಸಿನಿಮಾವನ್ನು ಲತಾರ ಈ ಹಾಡಿಗೋಸ್ಕರ ನೋಡಿದವರು ಹಲವರಿದ್ದಾರೆ.ಈಗ್ಗೆ ಕೆಲವು ವರ್ಶಗಳ ಹಿಂದೆ ದೂರದರ್ಶನದಲ್ಲಿ ಸಂಗೊಳ್ಳಿ ರಾಯಣ್ಣ ಪ್ರಸಾರವಾದಾಗ ನಾನು ಲತಾ ಹಾಡಿಗಾಗಿಯೇ ಸಿನಿಮಾ ನೋಡಿದೆ .ತಾರಾಗಣದಲ್ಲಿ ಉತ್ತರಕರ್ನಾಟಕದ ನಟರುಗಳೇ ಬಹಳವಿರುವ ಈ ಸಿನಿಮಾ ಕಿತ್ತೂರಿನ ಸ್ವಾತಂತ್ರ್ಯ ಹೋರಾಟದ ಕಥೆ ಹೊಂದಿದೆ.ಈ ಹಾಡಲ್ಲದೇ `ಎಲ್ಲಾರ ಇರುತಿರು...ಎಂದಾರ ಬರುತಿರು...' ಎಂಬ ಇನ್ನೊಂದು ಹಾಡನ್ನೂ ಈ ಸಿನಿಮಾದಲ್ಲಿ ಲತಾ ಹಾಡಿದ್ದರೂ `ಬೆಳ್ಳನೆ ಬೆಳಗಾಯಿತು' ಹಾಡೇ ಜನಪ್ರಿಯ.
ಆದರೆ ನಾನು ಹಾಕಿರುವ ಮೇಲಿನ ಚಿತ್ರದಲ್ಲಿ ಬೆಳ್ಳನೆ ಬೆಳಗಾಗಿದ್ದು, ಅಮೇರಿಕಾದ ವಯೋಮಿಂಗ್ ರಾಜ್ಯದಲ್ಲಿ!
ಆದರೆ ನಾನು ಹಾಕಿರುವ ಮೇಲಿನ ಚಿತ್ರದಲ್ಲಿ ಬೆಳ್ಳನೆ ಬೆಳಗಾಗಿದ್ದು, ಅಮೇರಿಕಾದ ವಯೋಮಿಂಗ್ ರಾಜ್ಯದಲ್ಲಿ!
2 Comments:
ಮಾಲಾ ಮೆಡಮ್,
ನಿಮ್ ಹತ್ರ ಭಾಳಾ ಚೊಲೋ ಕ್ಯಾಮ್ರಾ ಇದ್ದಂಗೈತಿ ನೋಡ್ರಿ, ನಿಮ್ ಚಿತ್ರಗಳು ಅಗದಿ ಚಂದ್ ಇದಾವ್ರಿ.
ನೀವು ಬೆಳಕಿನ್ ಬಗ್ಗೆ ಬರದಿರೋ ಹಾಡು ನನಗೂ ಭಾಳ್ ಇಷ್ಟಾ, ನಾನೂ ಅವಾಗವಾಗ್ ಈ ಹಾಡ್ ಕೇಳ್ತಾ ಇರ್ತೀನಿ.
ನೀವ್ ತಿಂಡಿ ಬಗ್ಗೆ ಬರೆಯೋದೇನೋ ನಿಜಾ, ಆದ್ರೆ ಚಿತ್ರಾ ತೋರಿಸಿ ಆಸಿ ಹುಟ್ಟಿಸೋದ್ ಅಷ್ಟೊಂದ್ ಇಷ್ಟಾ ಆಗ್ಲಿಲ್ಲ ನೋಡ್ರಿ!
ಕಾಳೂ ಅವರೆ,
ಬೆಳಕಿನ ಹಾಡು ನಿಮಗಿಶ್ಟವಾಗಿದ್ದು ಕೇಳಿ ಕುಶಿಯಾಯಿತು
ನಿಮ್ಮ ಹೊಗಳಿಕೆ ನನ್ನ ಕ್ಯಾಮರಣ್ಣನಿಗೆ ತಲುಪಿಸುತ್ತೇನೆ.
ಬರೀ ಚಿತ್ರ ತೋರಿಸಿಲ್ಲಾ ರೆಸಿಪಿ ಕೂಡಾ ಕೊಟ್ಟಿದ್ದೀನಲ್ಲಾ...
Post a Comment
Subscribe to Post Comments [Atom]
<< Home