Saturday, September 30, 2006

ಮರಳಿ ದೊರಕಿದ "ಭುವನದ ಭಾಗ್ಯ"



ಇಂಥದೊಂದು ಆನಂದವನ್ನು ಯಾವ ಪದಗಳಲ್ಲಿ ಹೇಳಿ ಕೊಳ್ಳುವುದೋ ಗೊತ್ತಾಗುತ್ತಿಲ್ಲ ಇವತ್ತಿಗೆ ಸರಿಯಾಗಿ "ಮೂವತ್ತು ದಿನ" ತುಂಬಿರುವ ಈ ಬ್ಲಾಗಿನಲ್ಲಿ ನಾನು ಮಾಡಿಕೊಂಡ ಮನವಿಗೆ ಓಗೊಟ್ಟ ಸಹೃದಯಿ ಒಬ್ಬರಿಂದ ನಾನು ವರುಷಗಳ ಹಿಂದೆ ಕಳೆದುಕೊಂಡ `ಸಿರಿ' ಯೊಂದು ಮರಳಿ ದೊರಕಿದೆ.

ಮೊನ್ನಿನ ಪೋಸ್ಟ್ ನಲ್ಲಿ ನಾನು ನನ್ನ ಶಾಲಾ ದಿನಗಳ ಪ್ರಾರ್ಥನಾ ಪದ್ಯ `ದೇವಿ ಭುವನ ಮನಮೋಹಿನಿ' ಯ ಬಗ್ಗೆ ಹೇಳಿದ್ದೆ.ಈ ಹಾಡು ನಿಮ್ಮ ಹತ್ರ ಇದ್ದರೆ ದಯವಿಟ್ಟು ನನಗೆ ಕಳಿಸಿ ಕೊಡುತ್ತೀರಾ ಅಂತ ಕೇಳಿದ್ದೆ

ಸ್ಯಾನ್ ಹೋಸೆಯ" ಶ್ರೀ ಮಧು ಕೃಷ್ಣಮೂರ್ತಿ" ಯವರು ತಮ್ಮ ಸಂಗ್ರಹದಲ್ಲಿದ್ದ "ದೇವಿ ಭುವನ ಮನ ಮೋಹಿನಿ" ಹಾಡನ್ನು ಕಳಿಸಿ ಕೊಟ್ಟಿದ್ದಾರೆ.ಮಧು ಅವರಿಗೆ ನನ್ನ ತುಂಬು ಹೃದಯದ ಕೃತಜ್ಞತೆಗಳು.

ಭಾರತ ಮಾತೆಯ ಸೌಂದರ್ಯವನ್ನು ಸಾರುವ ಈ ಸುಂದರ ಪದ್ಯದ ಪೂರ್ಣ ಪಾಠ ನಿಮಗಾಗಿ...

ದೇವಿ ಭುವನ ಮನ ಮೋಹಿನಿ

ನಿರ್ಮಲ ಸೂರ್ಯ ಕರೋಜ್ವಲ ಧರಣಿ

ಜನಕ ಜನನಿ ಜನನಿ

ನೀಲ ಸಿಂಧು ಜಲ ದೌತ ಚರಣಕಲ

ಅನಿಲವಿಕಂಪಿತ ಶಾಮಲಾಂಚಲ

ಅಂಬರ ಚುಂಬಿತ ಫಾಲ ಹಿಮಾಚಲ

ಶುಭ್ರ ತುಷಾರ ಕಿರೀಟಿಣಿ

ಪ್ರಥಮ ಪ್ರಭಾತ ಉದಿತವ ಗಗನೆ

ಪ್ರಥಮ ಸಾಮರಸ ತವ ತಪೋವನೆ

ಪ್ರಥಮ ಪ್ರಸಾದಿತ ತವ ವನ ಭವನೆ

ದಾನ ಧರ್ಮ ಹಿತ ಕಾರ್ಯಕಾರಿಣಿ

ಚಿರ ಕಲ್ಯಾಣ ಮಹೀತುವೆ ಧನ್ಯೆ

ದೇಶ ವಿದೇಶ ವಿಕಲಿತ ಅನ್ಯೆ

ಜಾಹ್ನವಿ ಜಮುನಾ ವಿಕಲಿತ ಕರುಣಾ

ಪುಣ್ಯ ಪೀಯೂಷಾ ಸ್ತನ್ಯವಾಹಿನೀ

ಈ ಭುವನದ ಭಾಗ್ಯವನ್ನು ಮತ್ತೆ ದೊರಕಿಸಿ ಕೊಟ್ಟ ಮಧು ಕೃಷ್ಣಮೂರ್ತಿಯವರಿಗೆ ಧನ್ಯವಾದಗಳು

2 Comments:

Blogger Satish said...

ನಿಮ್ಮ ಕನ್ಸಿಸ್ಟೆನ್ಸಿ ಹೀಗೇ ಮುಂದುವರೆಯಲಿ, ಬರಹಗಳು ಇನ್ನೂ ಹಲವಾರು ಮೂವತ್ತುಗಳನ್ನು ಮೀರಿ ಬರಲಿ!

4:09 AM  
Blogger nishu mane said...

ಕಳೆದು ಹೋದ ಹಾಡು ಸಿಕ್ಕಿದ್ದಕ್ಕೆ, ನಿನ್ನ ಬ್ಲಾಗಿಗೆ ಮೂವತ್ತು ದಿನ ತುಂಬಿದ್ದಕ್ಕೆ, ಇಂತಾದ್ದೊಂದು ಚಂದದ ಬ್ಲಾಗ್ ನಮ್ಗೆ ಕೊಡ್ತಿರೋದಕ್ಕೆ.....ಎಲ್ಲಕ್ಕೂ ಅಭಿನಂದನೆಗಳು ಮಾಲ. ನಿನ್ನ ದುರ್ಗದ ಕೋಟೆ ಇನ್ನಷ್ಟು, ಮತ್ತಷ್ಟು ಸಿಂಗಾರಗೊಳ್ಳಲಿ, ಗಟ್ಟಿಯಾಗಲಿ.

ಮೀರ.

8:46 PM  

Post a Comment

Subscribe to Post Comments [Atom]

<< Home