ಕಾಗದ ಬಂದಿದೆ......ಕರಡಿ ಮರಿಯಿಂದ...
ಕ ಕಾರ ಪ್ರಿಯ ಕರಡಿಮರಿಯೊಂದು ದುರ್ಗಕ್ಕೆ ಪತ್ರ ಬರೆದಿದೆ ಈ ಕಾಗದದಲ್ಲಿ ಕರುಣಾಜನಕವಾದ ತನ್ನ ಕಥಾನಕವನ್ನು ಕರಳು ಕಿವಿಚುವಂತೆ ವರ್ಣಿಸಿದೆ.ಈ ಕಾಗದವನ್ನೂ ಚಿತ್ರವನ್ನೂ ಇಲ್ಲಿ ಪ್ರಕಟಿಸಿದ್ದೇನೆ.
* * * * * * * *
ದುರ್ಗಕ್ಕೆ ಭೇಟಿ ಕೊಡುವ ಎಲ್ಲಾ ಮಹನೀಯರೇ ಮತ್ತು ಮಹಿಳೆಯರೇ,
ನಾನೊಂದು ಪುಟ್ಟ ಕರಡಿಮರಿ .ಚಳಿಯಲ್ಲಿ ನಡುಗುತ್ತಿದ್ದೇನೆ ಕಾಡಿನ ಕೊಳೆತ ಹಣ್ಣುಗಳನ್ನು ತಿಂದೂ ತಿಂದೂ ಸಾಕಾಗಿದೆ.ಊರಿಗೆ ಬರೋಣವೆಂದರೆ ಕೈಯಲ್ಲಿ ಕಾಸಿಲ್ಲಾ ಕಣ್ಣಲ್ಲಿ ಕನಸು ಇದೆ ಹೊಟ್ಟೆಗೆ ಕವಳವಿಲ್ಲಾ ಒಟ್ಟಿನಲ್ಲಿ `ಚಳಿ ಚಳಿ ತಾಳೆನು ಈ ಚಳಿಯಾ' ಎಂದು ಹಾಡುತ್ತಿರುವ ನನ್ನ ಸ್ಥಿತಿ ಕಳವಳಕಾರಿಯಾಗಿದೆ
ನಿಮ್ಮಗಳೆಲ್ಲರ ಅವಗಾಹನೆಗಾಗಿ ನನ್ನ ಚಿತ್ರವನ್ನೂ ಕಳಿಸಿರುವೆ
ಈ ದುರ್ಗಕ್ಕೆ ದೇಶ ವಿದೇಶಗಳಿಂದ ಹಲವಾರು ಜನ ಭೇಟಿ ಕೋಡುವುದನ್ನು ನೋಡಿ ನಿಮ್ಮೆಲ್ಲರ ಸಹಾಯ ಯಾಚಿಸಿ ಇಲ್ಲಿಗೆ ಈ ಕಾಗದ ಕಳಿಸುತ್ತಿರುವೆ.
ದುರ್ಗಕ್ಕೆ ತೆಂಗಿನತೋಟ,ಮಾವಿನತೋಟ ,ಹಲಸಿನ ತೋಟ ಮುಂತಾಗಿ ತೋಟಗಳನ್ನು ಹೊಂದಿರುವ ಮಹನೀಯರೂ, ಸುಗಂಧ ಬೀರುವ ಕಾಡುಗಳನ್ನು ಹೊಂದಿರುವ ಮಹಿಳೆಯರೂ ಭೇಟಿ ನೀಡುವುದು ನನಗೆ ಗೊತ್ತು.ಅನೇಕ ಅನ್ವೇಶಕರೂ, ಪ್ರಭಾವಶಾಲಿ ದಾದಗಳೂ, ದೆಹಲಿ ಚಳಿ ಕಂಡವರೂ ಇಲ್ಲಿಗೆ ತಪ್ಪದೇ ಬರುತ್ತಾರೆಂದು ಕೇಳಿಬಲ್ಲೆ.ತಮಗೊಂದು,ಮಗನಿಗೊಂದು ಎಂದು ಎರಡೆರಡು ಮನೆ ಕಟ್ಟಿರುವ ಶ್ರೀಮಂತರೂ ದಿನವೂ ಭೇಟಿ ನೀಡುತ್ತಾರೆ.ಅಲ್ಲದೇ ಜ್ಯೋತಿ ಬೆಳಗುವ ಸಹೃದಯರೂ, ಥಾಟಿಗೆ ಅರ್ಥಾತ್
`thought ಗೆ 'ಮೇವು ಹಾಕುವವರೂ ದುರ್ಗದ ಬೆಂಬಲಕ್ಕಿದ್ದಾರೆ.ಇದಲ್ಲದೇ ಭಾರತ, ಕೆನಡಾ, ಫ್ರ್ಯಾನ್ಸ್,ಇರಾನ್, ಯು.ಕೆ ಮುಂತಾದ ದೇಶಗಳಿಂದಲೂ,ಅಮೇರಿಕಾದ ಪೂರ್ವ-ಪಶ್ಚಿಮ ತೀರಗಳಿಂದಲೂ ಹಲವಾರು ಅನಾನಿಮಸ ಬೆಂಬಲಿಗರು ದುರ್ಗಕ್ಕೆ ಬರುವರು
ಈ ಎಲ್ಲಾ ಮಹನೀಯರೂ, ಮಹಿಳೆಯರೂ ನನಗೆ ಉದಾರವಾಗಿ ಸಹಾಯ ಮಾಡಬೇಕೆಂದು ಕಳಕಳಿಯ ಮನವಿ ನನಗೆ ನೀವು ಕೋಟುಗಳನ್ನೂ, ಕ್ಯಾನ್ಡ್ ಫುಡ್ ಕ್ಯಾನ್ ಗಳನ್ನೂ,ಕ್ಯಾಶ್ ಅನ್ನೂ(ಡಾಲರ್,ಯೂರೋ,ರಿಂಗೆಟ್ಸ್,ದಿರ್ ಹಮ್,ಸಿಂಗ್/ಕೆನಡಿಯನ್ ಡಾಲರ್ ಯಾವುದಾದರೂ ಸರಿ) ಕಳಿಸಬಹುದು
[ ನಿಮ್ಮ ಇಂಡಿಯನ್ `ಕರಿ ' ತುಂಬಾ ಕಾರವಾದ್ದರಿಂದ ಮನೆಯಲ್ಲಿ ಮಾಡಿದ ಅಡುಗೆ ಖಂಡಿತಾ ಕಳಿಸಬೇಡಿ (ನಾನು` ಕ ಕಾರ' ಪ್ರಿಯ ನಾದರೂ ಕಾರಪ್ರಿಯನಲ್ಲ ಮತ್ತು ನನ್ನ ನಾಲಿಗೆ ಅಬ್ಬಿ ಆಗುತ್ತೆ ನಿಮ್ಮ ಕರಿ ತಿಂದ್ರೆ...) ]
ಪುಟ್ಟ ಕರಡಿ ಮರಿಯನ್ನು ರಕ್ಷಿಸಿ!!!
ದಯವಿಟ್ಟು ಉದಾರವಾಗಿ ನೆರವಾಗಿ!!!
ನೆನಪಿಡಿ ಕೋಟು,ಕ್ಯಾನ್ಡ್ ಫುಡ್,ಮತ್ತು ಕ್ಯಾಶ್ ಓನ್ಲಿ!!!
-ಇತಿ ನಿಮ್ಮ
ಕೊಡುಗೆಗಳಿಗಾಗಿ
ಕಾಯುತ್ತಿರುವ
ಕರಡಿ ಮರಿ
* * * * * * * *
ಈ ಪುಟಾಣಿ ಕರಡಿಮರಿ ದುರ್ಗದ ಅಭಿಮಾನಿಗಳಲ್ಲಿ ಇಟ್ಟಿರುವ ನಂಬಿಕೆಯನ್ನು ನೀವು ಸುಳ್ಳು ಮಾಡುವುದಿಲ್ಲಎಂಬ ಭರವಸೆ ನನಗಿದೆ.ಪ್ರತಿಯೊಬ್ಬರೂ ತಮ್ಮ ತನುಮನ ಮನೆಗಳಿಂದ ನಿಮ್ಮ `ಧನವನ್ನು' ಕಳಿಸುತ್ತೀರೆಂದು ನಂಬುವೆ.ಪ್ರತಿದಾನಿಯ ಕೊಡುಗೆಯ ವಿವರವನ್ನೂ ದುರ್ಗದ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.ಅತ್ಯಂತ ಪಾರಾದರ್ಶಕವಾದ ಈ ವ್ಯವಸ್ಥೆಯನ್ನು ನೀವು ಖಂಡಿತಾ ನಂಬಬಹುದು
ಟಿಪ್ಪಣಿ-
`ಚಿತ್ರ-ದುರ್ಗ'ದಲ್ಲಿ ದುರ್ಗದ ಹಿತೈಷಿಗಳ ಬ್ಲಾಗ್ ನ ಲಿಂಕ್ ಹಾಕಲು ಕೆಲವು ದಿನಗಳ ಹಿಂದೆ ನಿಮ್ಮೆಲ್ಲರ ಅನುಮತಿ ಕೇಳಿದ್ದೆ.ನೀವುಗಳೆಲ್ಲರೂ ದೊಡ್ಡ ಮನಸ್ಸಿನಿಂದ ನನಗೆ ಅನುಮತಿಯನ್ನೂ,ಪುಟಾಣಿ ಕರಡಿಮರಿಗೆ ಕೊಡುಗೆಗಳನ್ನೂ ನೀಡುತ್ತೀರೆಂದು ನಂಬಲೇ?

16 Comments:
ಫೋಟೋ ತುಂಬಾ ತುಂಬಾ ಚೆನ್ನಾಗಿದೆ.
ನೀವು ಇರಾನಿಯನ್ ರಿಯಾಲ್ಸ್ ಕಳಿಸ್ಬಹುದಾ ಅಂತ ಬರೆದಿಲ್ಲ.
It was a good way to put links. Iam liking ur writing as much as ur photograhs (ಕೊರೆತ ಅಂತೇನೋ ಇತ್ತಲ್ಲ ಮೊದ್ಲು ಟೈಟಲ್ನಲ್ಲಿ ಅದಕ್ಕೇ ಹೇಳ್ದೆ)
link ಧಾರಾಳವಾಗಿ ಹಾಕ್ಕೊಳ್ಳಿ, ಜೊತೆಗೆ ಸ್ವಲ್ಪ thanks ಕೂಡ ತಗೊಳ್ಳಿ :-)
kaLasoNa ...adre elli kaLisodu aMtane gottu agta illa...:
ಪುಟ್ಟ ಕರಡೀ ಮರಿಗೆ,
kaaloo ಕೊಡುವ ಆಶಿರ್ವಾದಗಳು. ಕುಸಾ ಮಕ್ಳು ಅಪ್ಪನ ಮಾತು ಕೇಳದೇ ಅವೇಳೆಯಲ್ಲಿ ಬೀದಿ ಬೀದಿ ಸುತ್ತಿ ಊಟಕ್ಕೆ (ಭಿಕ್ಷೆ) ಬೇಡೋ ಹಾಗೆ ಆಗಿರುವಂತೆ ನಿನಗೂ ಆಗದಿರಲಿ. ಒಡನೆಯೇ ಅಪ್ಪಾ-ಅಮ್ಮನ ಮಾತು ಕೇಳಿ ಅವರ ಮಾತನ್ನು ಮೀರದೆ ನಡೆಯುವಂತವನಾಗು. ನಿನಗೆ ಅಪ್ಪ-ಅಮ್ಮನ ರಕ್ಷೆಯೇ ಎಲ್ಲರಿಗಿಂತ ದೊಡ್ಡದೇ ವಿನಾ ಬೇರೆ-ಬೇರೆ ದೇಶದವರು ಕೊಡೋ ಕೋಟುಗಳು ನಿನ್ನನ್ನು ಬೆಚ್ಚಗಿಡಲಾರವು.
ಈ ಛಳಿ ದೇಶಗಳಲ್ಲಿ ಯಥೇಚ್ಛವಾಗಿ ತಿಂದು-ಉಂಡು ಬೆಳೆದು ಕೊಬ್ಬಿರೋ ನಿನ್ನ ದೊಡ್ಡ ದೇಹವನ್ನು ನೋಡಿದರೆ ನೀನೊಬ್ಬ ಪುಟ್ಟ ಮರಿಯೇ ಅನ್ನೋದು ನನ್ನ ಅನುಮಾನ. ಸುಮ್ಮನೇ ನಿನ್ನ ಡೇಟ್ ಆಫ್ ಬರ್ತ್ ಅನ್ನು ತಿದ್ದಿ ಮಕ್ಕಳ ಥರ ನಾಟಕವಾಡದೇ ಸುಮ್ಮನೇ ಮರದ ಪೊಟರೆಯಿಂದ ಹೊರಗೆ ಬಾ.
***
'ಕಾಲಚಕ್ರ'ವನ್ನು ನಿಮ್ಮ ಪುಟದಲ್ಲಿ ಲಿಂಕ್ ಕೊಡಬಹುದು, ಧನ್ಯವಾದ.
ಏಯ್ ಕರಡಿ ಮರಿಯೆ,
ನನ್ನನ್ನು ಲಿಂಕಿಸದೇ ಇದ್ದರೆ....
ಪೊಟರೆಯಿಂದ ಹೊರಗೆಳೆದು ಮೂರು ಸುತ್ತು ತಿರುಗಿಸಿ...
ಸಾಧ್ಯವಾಗದಿದ್ದರೆ ನಾವೇ ಮೂರ್ನಾಲ್ಕು ಸುತ್ತು ತಿರುಗಿ
ಒಂದು ಲೋಟ ನೀರು ಕುಡಿಯಲಾಗುವುದು.
ಒಂದು ಸೂಟ್ ಕೇಸು ತುಂಬಾ ಧನ ಕಳಿಸಿಕೊಟ್ಟರೆ ಅದರಲ್ಲಿ ಒಂದೆರಡು ಧನವನ್ನಿಟ್ಟು ಚಿತ್ರದುರ್ಗಕ್ಕೆ ಛೂ ಬಿಡಲಾಗುವುದು.
ಲಿಂಕ್ ತಾನೇ ಧಾರಾಳವಾಗಿ ಹಾಕಿ. ಅದಕ್ಕೂ ನೀವು ಕರಡಿ ಮರಿ ತರ ಕಾಸು (ಕ್ಯಾಶ್) ಕೇಳಲ್ಲ ತಾನೇ? :-)
ಕರಡಿಮರಿನ ತುಳಸಿವನಕ್ಕೇ ತಂದು ಬಿಡಿ. ಅಲ್ಲಿರುವ ಹನುಮಂತಗಳು ಈ ಜಾಂಬವಂತನಿಗಾಗಿ ಪ್ರೀತಿಯಿಂದ ಕಾಯುತ್ತಿವೆ ಎಂದು ತಿಳಿಸಿ.
ಲಿಂಕ್ ಧಾರಾಳವಾಗಿ ಕೊಡಿ. ಅದರೆ ಅದಕ್ಕೆ ನೀವು ಕರಡಿ ಮರಿ ತರ ಕಾಸು (ಕ್ಯಾಶ್) ಕೇಳಲ್ಲ ತಾನೇ? :-)
ಕರಡಿಮರಿಯನ್ನು ಸಾಕೋದು ಕಷ್ಟ ಆದ್ರೆ ತುಳಸಿವನಕ್ಕೆ ತಂದು ಬಿಡಿ. ಅಲ್ಲಿರುವ ಹನುಮಂತಗಳು ಈ ಜಾಂಬವಂತನಿಗಾಗಿ ಪ್ರೀತಿಯಿಂದ ಕಾಯುತ್ತಿವೆ ಎಂದು ತಿಳಿಸಿ.
ಇಂತಹ ಒಳ್ಳೊಳ್ಳೇ ಚಿತ್ರಗಳು ಮತ್ತು ಅದಕ್ಕೆ ತಕ್ಕನಾದ ಲೇಖನ ಯಾ ಕವನಗಳನ್ನು ಹಾಕುತ್ತಿದ್ದೀರಿ. ನಿಮ್ಮ ಬ್ಲಾಗಿನಲ್ಲಿ ನನ್ನ ಬ್ಲಾಗಿನ ಕೊಂಡಿ ಹಾಕಲು ನೀವು ಕೇಳಬೇಕೇ?
ಧಾರಾಳವಾಗಿ ಹಾಕಿಕೊಳ್ಳೆ. ಪಟ್ಟಿ ಕೊಡಲೇ? ಇವುಗಳಲ್ಲಿ ಯಾವುದನ್ನು ಬೇಕಾದರೂ ನಿಮ್ಮ ಪಟ್ಟಿಯಲ್ಲಿ ಸೇರಿಸಿಕೊಳ್ಳಬಹುದು.
http://maavinayanasa.blogspot.com
http://tvsrinivas41.googlepages.com
http://venkatesha.wordpress.com
http://asraya2006.blogspot.com
http://srinivastalaku.blogspot.com
ನಿಮ್ಮ ಬ್ಲಗ್ ನ ಲಿಂಕ್ ಹಾಕಲು ಅನುಮತಿ ನೀಡಿದ ಎಲ್ಲರಿಗೂ ಧನ್ಯವಾದಗಳು
ಶ್ರೀಲತಾ ಆಂಟಿ,
ಇರಾನಿನ ರಿಯಾಲ್ ಕಳ್ಸಿ ಕನ್ವರ್ಷನ್ ರೇಟ್ ಚೆನ್ನಾಗಿದೆ ತಾನೇ
ನಿಮ್ಮ ಇರಾನಿನ ಹುಡುಗಿಯರು ತುಂಬಾ ಚೆಂದ ಇರ್ತಾರಂತೆ ಹೌದಾ....
ಇತಿ ಪುತ್ತ ಕ.ಮ
ಮಹಂತೇಶರೇ
ಕರಡಿಮರಿಯ ಬಗ್ಗೆ ಅಷ್ಟೋಂದು ಧಾರಾಳ ತನ ತೋರಿಸುವ ನೀವು ನನಗೆ ಅನುಮತಿ ಕೊಡಲು ಜಿಫುಣತನ ಮಾಡುತ್ತಿರುವುದೇಕೋ ಅರ್ಥವಾಗಲಿಲ್ಲ
ಕಾಳಣ್ಣಾ
ನಿನ್ನ ಮಾತು ಕೇಳಿ ಭಾಳ ಅಂಜಿಕಿ ಆಗ್ತಿದೆ
ಎಲ್ಲಿ ಎರಡು ಗೂಸಾ ಕೊಟ್ಟು ಬಿಡುತ್ತೀಯೋ ಅಂಥಾ
ಕ.ಮ
ಅನ್ವೇಶಿ ಅಂಕಲ್
ನಂಗೆ ಮೆರ್ರಿ-ಗೋ -ರೌಂಡ್ ತುಂಬಾ ಇಷ್ಟ
ನಿಮ್ಮ ಆಫರ್ ಗಾಗಿ ಥ್ಯಾಂಕ್ಸ್
ಫಿಫ್ಟಿ-ಫಿಫ್ಟಿ ಹಂಚಿಕೊಳ್ಳೋಣ ಏನಂತೀರಿ?
(ಮಾಲಾ ಅಕ್ಕನಿಗೆ ಹೇಳಬೇಡಿ)
ಇತಿ ಕ.ಮ
This comment has been removed by a blog administrator.
ಶ್ರೀತ್ರೀ ಆಂಟಿ,
ನನ್ನ ಮೇಲಿನ ನಿಮ್ಮ ಪ್ರೀತಿ ಕಂಡು ಮೂಕನಾಗಿ ಹೋದೆ!
೪-೪ ಕಮೆಂಟ್ ಹಾಕಿ ನನ್ನ ನಾಲ್ಕು ಸಲ ನಿಮ್ಮ ಕಾಡಿಗೆ ಕರೆದದ್ದಕ್ಕೆ ತುಂಬಾ ಥ್ಯಾಂಕ್ಸ್.
ಈಗ ನಿಮ್ಮಲ್ಲೂ ಚಳಿ ಅಲ್ವಾ
ಸಮ್ಮರ್ ನಲ್ಲಿ ಖಂಡಿತಾ ಬರ್ತೀನಿ
ಇತಿ
ಕ.ಮ
ತವಿಶ್ರೀ ಅವರೇ
ನಿಮ್ಮ ಮೆಚ್ಚುಗೆಗಾಗಿ ಧನ್ಯವಾದಗಳು
ಇದೇನು ಒಳ್ಳೇ ಸ್ವಾಮೀಜಿಗಳ ತರ ಮೂರು ಶ್ರಿಗಳು?
ಯಾರು ಎಂದೇ ಮೊದಲಿಗೆ ಗೊತ್ತಾಗಲಿಲ್ಲ!
ಪಾಪದ ಕರಡಿ ಮರಿ ಅಂದ್ಕೊಂಡ್ರೆ ನಮ್ಮೂರಿನ ಹುಡುಗಿಯರ ಬಗ್ಗೆಯೇ ಮಾತಾಡ್ತೀಯಾ? cashಊ ಇಲ್ಲ ಕಾಸೂ ಇಲ್ಲ್ ಹೋಗ್..
Post a Comment
Subscribe to Post Comments [Atom]
<< Home