Saturday, October 28, 2006

ಜಿಪುಣಾ ಅಂದ್ರೆ ಜಿಪುಣಾ ಈ ಕಾಲಾ...


ಜಿಪುಣಾ ಅಂದ್ರೆ ಜಿಪುಣಾ ಈ ಕಾಲಾ...
ಏನೇ ಗಿರವೀ ಇಟ್ಟು ಎಷ್ಟೇ ಬಡ್ಡಿ ಕೊಟ್ಟ್ರು
ಹುಟ್ಟೋದಿಲ್ಲಾ ಒಂದು ಘಳಿಗೆ ಸಾಲ!
ಎಂದು ಹಾಡಿದ್ದಾರೆ ಕವಿ ಬಿ.ಆರ್‍.ಲಕ್ಷ್ಮಣ ರಾಯರು.ಜಿಪುಣನಾದ ಕಾಲನನ್ನು ಘಂಟೆ ಬಡಿಯುವ ,ಕನ್ನಡಿ ಹಿಡಿಯುವ, ಬೆನ್ನು ಹತ್ತಿದ ಬೇತಾಳ ಎನ್ನುತ್ತಾರೆ ಅವರು.ನಮಗೆಲ್ಲರಿಗೂ ಅನುಭವ ವೇದ್ಯವಾದ ಈ ಸತ್ಯವನ್ನು ಕವಿ ಎಷ್ಟು ಚೆನ್ನಾಗಿ ಹೇಳಿದ್ದಾರೆ ನೋಡಿ....
ಹೌದು...ಸಮಸ್ಯೆ ಏನೋ ಎಲ್ಲರಿಗೂ ಗೊತ್ತಿರುವುದೇ...ಅದಕ್ಕೆ ಪರಿಹಾರವೇನಾದರೂ ಇದೆಯೋ...? ಎಂದು ನೀವು ಕೇಳುತ್ತೀರಿ ಅಂತಾನೂ ಅವರಿಗೆ ಗೊತ್ತು! ಅದಕ್ಕೇ ಮುಂದುವರೆದು
ಹೇಳುತ್ತಾರೆ...

ಮೀರುವುದೊಂದೇ ಇವನನು ಗೆಲ್ಲುವ ದಾರೀ...
ಸಿಕ್ಕದೆ ರೂಢಿಯ ಕೈಲಿ,ಕಲ್ಪಿಸಿ ಹೊಸ ಹೊಸ ಶೈಲಿ
ಧಿಕ್ಕರಿಸೋಣಾ ಲೆಕ್ಕಾಚಾರದ ಕಾಲಾ...

ಅಂಥದ್ದೊಂದು,ತೀರಾ ಹೊಸದಲ್ಲದಿದ್ದರೂ `ನಮಗೆ' ಹೊಸದೆಂದು ತೋರಬಹುದಾದ `ಶೈಲಿ'ಯೊಂದರ ಬಗ್ಗೆ ಕೊರೆಯಲೆಂದೇ ನಾನು ಇಷ್ಟೊತ್ತು ಪೀಠಿಕೆ ಹಾಕಿದ್ದು!
ಅದೇ Daylight Saving Time ಅಥ್ವಾ (DST).
Daylight saving time (DST), also known as summer time or,daylight savings
time, is a widely used system of adjusting the official local time forward,
usually by one hour from its official standard time, for the spring, summer,
and early autumn periods ಇದು DST ಗೆ Wikipedia ದ ಡೆಫಿನಿಶನ್ನು

Spring forward... Fall back....ಇದು DST ಮಂತ್ರ.ವಸಂತದಲ್ಲಿ ಎಲ್ಲರೂ ತಮ್ಮ ಗಡಿಯಾರಗಳನ್ನು ಒಂದು ಘಂಟೆ ಮುಂದಿಟ್ಟರೆ ಎಲೆ ಉದುರುವ ಶಿಶಿರದಲ್ಲಿ ಒಂದು ಘಂಟೆ ಹಿಂದಿಟ್ಟು ವಾಪಸು ಬರುತ್ತಾರೆ ಅಮೆರಿಕದಲ್ಲಿ ಸಾಮಾನ್ಯವಾಗಿ (ಈಚಿನ ವರ್ಷಗಳಲ್ಲಿ)ಏಪ್ರಿಲ್ ನ ಮೊದಲ ಭಾನುವಾರ ಸುರುವಾಗುವ DST ಅಕ್ಟೋಬರ್ ಕೊನೆಯ ಭಾನುವಾರ ಮಧ್ಯರಾತ್ರಿ ಎರಡಕ್ಕೆ ಮುಗಿಯುತ್ತೆ ಈ ವರ್ಷ
ಏಪ್ರಿಲ್ 2ರಂದು ಸುರುವಾಗಿದ್ದು ಇವತ್ತು ರಾತ್ರಿ( 29)ಮುಗಿಯಲಿದೆ Energy ಉಳಿಸಲು,ಸಾರ್ವಜನಿಕ ಸುರಕ್ಷತೆ ಹೆಚ್ಚಿಸಲು, ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಈ DST ಸಹಾಯ ಆಗುತ್ತೆ ಅಂತ ಅಂಕಿ ಅಂಶಗಳು ಹೇಳುತ್ತವೆ
ಮುಂದಿನ ವರ್ಷವೇನೋ ಮಾರ್ಚ್ ನಲ್ಲೇ DST ಸುರುವಾಗಿ ನವಂಬರ್ ಕೊನೆವಾರದ ತನಕ ಇರುತ್ತಂತೆ.ಮುಂದಿನ ವರ್ಷಕ್ಕಿನ್ನೂ ಬೇಕಾದಷ್ಟು ಟೈಮ್ ಇದೆ ನಾಳೆ ಚೆನ್ನಾಗಿ ನಿದ್ದೆ ಮಾಡೋಣಾ ಏನಂತೀರಿ?

3 Comments:

Anonymous Anonymous said...

"ಈ ವರ್ಷ ನಿಮ್ಮಲ್ಲಿ ಯಾರು ಅತಿ ಹೆಚ್ಚು ಬೆಳಕನ್ನು 'ಉಳಿತಾಯ' ಮಾಡುವಿರಿ?" ಎಂದು 1984ರಲ್ಲಿ ಒಂದು ದಿನಪತ್ರಿಕೆಯು ತನ್ನ ಓದುಗರಿಗೆ ಸ್ಪರ್ಧೆಯನ್ನು ಏರ್ಪಡಿಸಿತ್ತು! ಓದುಗರೆಲ್ಲರೂ ಉಳಿತಾಯ ಮಾಡಿದ ಬೆಳಕನ್ನು 'ಬೆಳಕು ಉಳಿತಾಯ ಮಾಡದ ನತದೃಷ್ಟ ದೇಶಗಳ ಪ್ರಜೆಗಳಿಗೆ ಹಂಚಲಾಗುವುದು' ಎಂದೂ ಸ್ಪರ್ಧೆಯ ವಿವರಗಳಲ್ಲಿ ತಿಳಿಸಲಾಗಿತ್ತು!

7:54 AM  
Anonymous Anonymous said...

ಒಳ್ಳೆಯ ಲೇಖನ ಒದಗಿಸಿದ್ದೀರಿ. ಅದಕ್ಕೆ ತಕ್ಕಂತಿಹ ಚಿತ್ರ. ಇನ್ನೂ ಹೆಚ್ಚು ಹೆಚ್ಚಾಗಿ ಇಂತಹ ವಿಷಯಗಳನ್ನು ನಮಗೆ ತಿಳಿಸಿಕೊಡುತ್ತಿರಿ.

ಗಡಿಯಾರದ ಸಮಯವನ್ನು ಹೀಗೇಕೆ ಹಿಂದೆ ಮುಂದೆ ಮಾಡ್ತಾರೆ ಅಂತ ನನಗೆ ಗೊತ್ತೇ ಇರಲಿಲ್ಲ. ಮೊನ್ನೆ ನನ್ನ ಸ್ನೇಹಿತರೊಂದಿಗೆ ಚಾಟಿಸುತ್ತಿದ್ದಾಗಲೇ ತಿಳಿದದ್ದು.

ಇನ್ನು ನಮ್ಮೂರಿನ ರೈಲ್ವೇ ಸ್ಟೇಷನ್ನಿನಲ್ಲಿನ ಒಂದು ಗಡಿಯಾರ ತನ್ನ ಕಥೆಯನ್ನು ಹೀಗೆ ಹೇಳಿಕೊಂಡಿತ್ತು.

ನಮ್ಮೂರು ನಮ್ಮೂರೇ ನಿಮ್ಮೂರು ನಿಮ್ಮೂರೇ!

8:49 AM  
Blogger Mahantesh said...

modle idanna odidaddare baaLa anakula agta ittu...time adjust mADikoLLalarade ivattu officege baMdu mosa hode :(

9:49 AM  

Post a Comment

Subscribe to Post Comments [Atom]

<< Home