Thursday, November 02, 2006

ಎಲ್ಲಿ ಬೆಳ್ದಿಂಗಳಿಳಿದು...



ಎಲ್ಲಿ ದುಂಬಿ ಬಿರಿಮೊಗ್ಗ ತೆರೆದು
ಝೇಂಕರಿಸಿ ಕರೆಯುತಿಹುದೋ,
ನೋವಿನಾಚೆ ನಲಿವಿಹುದು ಎಂದು
ಕೋಗಿಲೆಯು ಹಾಡುತಿಹುದೋ,
ಎಲ್ಲಿ ಉರಿಬಿಸಿಲು ಮುಗಿದು ಬೆಳ್ದಿಂಗಳಿಳಿದು
ಸಂತಸವು ಉಕ್ಕುತಿಹುದೋ ,
-ಹೋಗಬೇಕು ನಾನಲ್ಲಿಗೆ !

ಬೆಳದಿಂಗಳು ಉಕ್ಕಿಸುವಂತೆ ಬೆಳಗುತ್ತಿರುವ ಈ ಗುಲಾಬಿಯಲ್ಲಿ ಝೇಂಕರಿಸುತ್ತಿರುವುದು ದುಂ`ಬಿ'ಯಲ್ಲ... ಹನಿ `ಬೀ'ಕೋಗಿಲೆಯು ದೂರದಲ್ಲೆಲ್ಲೋ ಹಾಡುತ್ತಿದೆ ಅಂದುಕೊಳ್ಳೋಣಾ! ಕಷ್ಟಗಳೆಂಬ ಕಲ್ಲುಗಳ ನಡುವಲ್ಲಿ ಅರಳಿದ ಹೂವು ಉರಿಬಿಸಿಲಿಂದ ಬೆಳದಿಂಗಳಿಗೆ, ಸಂತಸಕ್ಕೆ, ಕರೆದೊಯ್ಯುವ ಸಂಕೇತವಲ್ಲದೇ ಮತ್ತೇನು?

ರಾಜ್ಯೋತ್ಸವ ವಿಶೇಷ-ಹೋಗಬೇಕು ನಾನಲ್ಲಿಗೆ-2

1 Comments:

Blogger Shiv said...

ಕಲ್ಲುಗಳ ನಡುವೆ ಅರಳಿದ ಗುಲಾಬಿ ಚಿತ್ರ ಸೊಗಸಾಗಿದೆ.ಕವನಕ್ಕೆ ತಕ್ಕುದಾದ ಚಿತ್ರ!

12:27 AM  

Post a Comment

Subscribe to Post Comments [Atom]

<< Home