Saturday, November 04, 2006

ನನ್ನ ಜೊತೆಗೆ ಇನ್ನೊಂದು ಜೀವ ನಡೆದು...


ಒಬ್ಬಂಟಿಯಾಗಿ ಈ ನನ್ನ ಜೊತೆಗೆ
ಇನ್ನೊಂದು ಜೀವ ನಡೆದು,
ಅದರಾಚೆಗೀಚೆಗೇನಿರದ ಬಳಿಗೆ
ನನ್ನನ್ನು ಕರೆಯುತಿಹುದೋ,
ಅರಳುತ್ತ ಮೊಗ್ಗು,ಹಾಡುತ್ತ ಹಕ್ಕಿ
ನಾನಾಗಿ ಬದುಕುತಿಹೆನೋ,
-ಹೋಗಬೇಕು ನಾನಲ್ಲಿಗೆ!

ಜೀವನ ಹೂವಾಗಿ ಅರಳಿ,ಮಧುರ ಹಾಡಾಗಲು `ಅದರಾಚೆಗೀಚೆಗೇನಿರದ' ಅನಂತಕ್ಕೆ ಕರೆದೊಯ್ಯಲು ಒಬ್ಬಂಟಿ ಜೀವಕ್ಕೆ ಇನ್ನೊಂದು ಜೀವದ ಅವಶ್ಯಕತೆಯನ್ನು ಈ ಪ್ರೇಮಕವಿಯಲ್ಲದೇ ಇನ್ನಾರು ಇಷ್ಟು ಸೊಗಸಾಗಿ ಹೇಳಬಲ್ಲರು?

ರಾಜ್ಯೋತ್ಸವ ವಿಶೇಷ- ಕೆ.ಎಸ್ ನ. ಅವರ ಹೋಗಬೇಕು ನಾನಲ್ಲಿಗೆ-4

5 Comments:

Blogger Shiv said...

ಇಂತಹ ಸುಂದರ ಕವನವನ್ನು ನೆನಪಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ! ಕವನಕ್ಕೆ ತಕ್ಕುದಾದ ಚಿತ್ರ ! ನಿಮ್ಮ ಛಾಯಾಗ್ರಹಣವೇ ?

ಬ್ಲಾಗ್ ಲೋಕದಲ್ಲಿ ತಿರುಗಾಡುವಾಗ ನಿಮ್ಮ ಚಿತ್ರ-ದುರ್ಗ ಕಣ್ಣಿಗೆ ಬಂತು..ನಿಮ್ಮ ಬ್ಲಾಗ್ ನೋಡಿ ಖುಷಿಯಾಯಿತು..

12:24 AM  
Blogger Satish said...

ರಾಜ್ಯೋತ್ಸವದ ಕಾಣಿಕೆ ಚೆನ್ನಾಗಿದೆ.

ಕೆ.ಎಸ್.ನ. ಅವರ ಈ ಪದ್ಯದ ಸಾಲುಗಳಲ್ಲಿ ಹುದುಗಿರುವ "ಇಲ್ಲಿಂದ-ಅಲ್ಲಿಗೆ" ಹೋಗಬೇಕು ಎನ್ನುವುದನ್ನು ನಿಮ್ಮ ಅನಿವಾಸಿ ಮಿತ್ರರು ಓದಿ ತವರಿನ ನೆನಪು ತಂದುಕೊಂಡು ಭಾವುಕರಾದರೆ...ಎಂಬ ಯೋಚನೆ ಬಂತು! ನಿಮ್ಮ ಊರುಗಳಲ್ಲೂ ಕವಿಯ ಚಿತ್ರಣಗಳು ಬರೀ ಉಪಮೆ-ಉಪಮಾನಗಳಾಗದೇ ನಿಜವಾಗಿಯೂ ದೊರಕುತ್ತವಾದರೆ ಎಲ್ಲರೂ ಧನ್ಯರು.

6:27 AM  
Blogger mala rao said...

ಶಿವ್ ಅವರಿಗೆ,
ದುರ್ಗಕ್ಕೆ ಸ್ವಾಗತ
ನಿಮ್ಮ ಮೆಚ್ಚುಗೆಗಾಗಿ ಥ್ಯಾಂಕ್ಸ್
ಹೀಗೇ ಆಗಾಗ ಬರುತ್ತಿರಿ
ದುರ್ಗದ ಎಲ್ಲಾ ಫೋಟೋಗಳೂ ನಾನು ತೆಗೆದವುಗಳು
ನಾನು ತೆಗೆದ ಫೋಟೋಗಳನ್ನು `ಮಾತ್ರ' ಇಲ್ಲಿ ಬಳಸಬೇಕೆಂದು ನಾನು ಹಾಕಿಕೊಂಡಿರುವ ನಿಯಮ
ನಿಮಗಿಷವಾಗದವಕ್ಕೆ ನೀವು ನನ್ನೊಬ್ಬಳನ್ನು `ಮಾತ್ರ'ಬೈಯ್ಯಬೇಕು!

12:45 PM  
Blogger mala rao said...

ಕಾಳು ಅವರೇ
ದುರ್ಗಕ್ಕೆ ನಿಮ್ಮ ಭೇಟಿ ಅಪರೂಪವಾಗಿದೆ ಏಕೆ?
ನಿಮಗನ್ನಿಸಿದ ಹಾಗೆ ನನಗೂ ಅನ್ನಿಸಿತ್ತು ಈ ಕವನ ಮೊದಲ ಬಾರಿ ಓದಿದಾಗ...

12:47 PM  
Blogger Satish said...

ತುಂಬಾ ಕೆಲ್ಸಾ ಮೆಡಮ್, ಟೈಮೇ ಇಲ್ಲಾ ಇತ್ತೀಚೆಗೆ.

3:39 PM  

Post a Comment

Subscribe to Post Comments [Atom]

<< Home