ಕನಸು ಕೈ ಬೀಸಿ ಕರೆಯುತ್ತಿರಲು...
ನಕ್ಷತ್ರಲೋಕ ಕನಸಾಗಿ ಹೊಳೆದು
ಕೈ ಬೀಸಿ ಕರೆಯುತಿಹುದೋ
ಗುರಿಯಿರದ ಪಯಣ ಕೊನೆಯಿರದ ದಾರಿ
ನಾ ಪಡೆದ ಭಾಗ್ಯವೆಂದು,
ಹೆಜ್ಜೆ ನೊಂದರೂ ಎಲ್ಲಿ ಹರುಷ
ಬೆನ್ನಟ್ಟಿ ನಡೆಸುತಿಹುದೋ,
-ಹೋಗಬೇಕು ನಾನಲ್ಲಿಗೆ!
ನಕ್ಷತ್ರ ಲೋಕ ಕನಸಾಗಿ ಹೊಳೆದು... ಎಷ್ಟು ಅರ್ಥಪೂರ್ಣವಾದ ಸಾಲುಗಳು! ಬದುಕಿಗೊಂದು ಗುರಿ, ಅರ್ಥ ಕೊಡುವ ಕನಸು ಕೈಬೀಸಿ ಕರೆಯುತ್ತಿರುವಾಗ ಹೆಜ್ಜೆ ನೊಂದರೂ ಹರುಷವೇ...`ಹಿರಿಯರೊಬ್ಬರು ಹೇಳಿದಂತೆ `ಬೆಳಕಿಲ್ಲದ ದಾರಿಯಲ್ಲಿ ನಡೆಯ ಬಹುದು...ಆದರೆ ಕನಸಿಲ್ಲದ ದಾರಿಯಲ್ಲಿ ನಡೆಯುವುದು ಹೇಗೆ...?
'ಕೊನೆಯಿರದ ಹಾದಿಯಲ್ಲಿ ನಡೆಯುವುದು ನಾವೆಲ್ಲಾ ಪಡೆದ ಭಾಗ್ಯವೇ ಇರಬಹುದು.ಆದರೆ ಹೆಜ್ಜೆ ನೋಯುವ ಈ ಹಾದಿಯಲ್ಲಿ ನಡೆಯುವವ ಒಂದಿಷ್ಟು ಹಗುರ ಮನಸ್ಸು, ತಿಳಿಯಾದ ದೃಷ್ಟಿ ಇರಿಸಿಕೊಂಡರೆ ಹಾದಿ ಬದಿಯ ಹೂಗಳ ಸುವಾಸನೆ ,ಸೊಬಗು ಪಯಣವನ್ನು ಒಂದಷ್ಟು ಉಲ್ಲಸಿತವಾಗಿಸೀತು...
ರಾಜ್ಯೋತ್ಸವ ವಿಶೇಷ-ಕೆ.ಎಸ್.ನ ಅವರ ಹೋಗಬೇಕು ನಾನಲ್ಲಿಗೆ-5
ಇವತ್ತಿಗೆ ಈ ವಿಶೇಷ ಮಾಲಿಕೆ ಮುಗಿಯುತ್ತಿದೆ.ಈ ಪ್ರಯತ್ನ ನಿಮಗೆ ಹೇಗನ್ನಿಸಿತು? ಇದೇ ರೀತಿ ಇನ್ನೊಂದು ಕವನಕ್ಕೆ `ಚಿತ್ರಪ್ರಯೋಗ' ಮಾಡಿದರೆ ನಿಮಗೆ ಇಷ್ಟವಾಗುತ್ತಾ? ಮುಂದಿನ ಇಂಥ ಪ್ರಯತ್ನದಲ್ಲಿ ಏನೇನು ಸುಧಾರಣೆ ಮಾಡಬಹುದು?ನಿಮ್ಮ ಐಡಿಯಾಗಳೇನಾದರೂ ಇದ್ದರೆ
ನನಗೆ ತಿಳಿಸುತ್ತೀರಾ?
4 Comments:
ಮಾಲಾ,
ಒಳ್ಳೆಯ ಹಾಡಿಗೆ 'ಚಿತ್ರಪ್ರಯೋಗ' ಧಾರಾಳವಾಗಿ ಮಾಡಬಹುದು. ಉತ್ತಮ ಪ್ರಯತ್ನ, ನಮಗೆ ರಸದೌತಣ.
ಇವತ್ತಿನ ಚಿತ್ರವಂತೂ ಅತ್ಯಂತ ಸುಂದರ. ಎಲ್ಲಿಯದ್ದು?
ಆ ಹಸಿರು, ಆ ಕಾಲು ಹಾದಿ, ನಡುನಡುವೆ ಮಿನುಗುವ ನೇರಳೆ-ಬಿಳಿ ಹೂಗಳು.... ಕೊನೆಗೆ ಜೀವರಸವಾದ ನದೀತೀರ.... ಸ್ವರ್ಗ ಇದೇ ಇರಬೇಕು!!
mast aagide re...heege bere kavan matte chitragaLu( olle camera kelsa re numdu...) barta irali...
nimma ella prayogalu yashasheshe re!!! enadaru maaDi chitra mattu blog bariri....
ಬಹಳ ಚೆನ್ನಾಗಿತ್ತು ಈ ಮಾಲಿಕೆ.
ಕವಿ ಹೇಳಿದ ಲೋಕಕ್ಕೆಲ್ಲ ಹೋಗಿಬರುವಂತಿದ್ದರೆ ಎನಿಸಿದ್ದೇನೋ ನಿಜ...
ನಿಮ್ಮ ಚಿತ್ರಗಳ ಜೊತೆ ಕವನಗಳನ್ನು ಹೆಣೆಯುವ ಕಾಯಕ ಹೀಗೇ ಮುಂದುವರೆಯಲಿ, ದಿನನಿತ್ಯವೂ ಒಂದಲ್ಲ ಒಂದು ಉತ್ತಮ ಚಿತ್ರವನ್ನು ಪ್ರಕಟಿಸಿ ಮನಸ್ಸನ್ನು ಆಹ್ಲಾದಗೊಳಿಸುವ ನಿಮ್ಮ ದುರ್ಗದಲ್ಲಿ ಚಿತ್ರಗಳಿಗೆ ಕೊರತೆಯಾಗದಿರಲಿ.
ಚಿತ್ರ-ಕವನ ಪ್ರಯೋಗ ತುಂಬಾ ಚೆನ್ನಾಗಿತ್ತು, ನಾಳೆ ಏನು ಅಂತ ಕಾಯೋ ಹಾಗೆ ಮಾಡ್ಬಿಡ್ತು. ಮುಂದೇನೂ ಇದೇ ತರ ಪ್ರಯೋಗ ಮಾಡ್ತಾ ಇರಿ..
Post a Comment
Subscribe to Post Comments [Atom]
<< Home