ಅವಳ ನೆನಪು ತಂದ ಹೂವು...
ಎಲ್ಲೆಡೆ ಹಸಿರು ಚಿಗುರು... ಸಾಲು ಸಾಲು ಬಣ್ಣದ ಹೂಗಳು...ಹಿತವಾಗಿ ಬೀಸುತ್ತಿರುವ ಗಾಳಿ... ಭೂಮಿ ಗೆ ಹೊಸ ಹರೆಯ ಬಂದಂತೆ... ಈ ಕಡುಗೆಂಪು ಹೂಗಳನ್ನು ನೋಡಿ ಅವನ ನೊಂದ ಮನ ಏನನ್ನೋ ನೆನೆದು ಹೀಗೆ ನಿಟ್ಟುಸಿರಾಗುತ್ತದೆ...
ಮಧು ಪಾತ್ರೆಯ ಮೈಮಾಟ
ಹೊಂದಿರುವ
ಕೆಂಪು ಹೂವೇ
ಅವಳ
ತುಟಿಗಳ
ನೆನಪು ತಂದು
ಕೆಂಡದಂತೆ
ನನ್ನನ್ನೇಕೆ ಸುಡುವೆ?
ಟಿಪ್ಪಣಿ-ಈ ಹೂವುಗಳೊಂದಿಗೆ ಹಾಕೋಣವೆಂದರೆ ನನಗೆ ಯಾವ ಹಾಡೂ ನೆನಪಿಗೆ ಬರಲಿಲ್ಲ
ಹಾಡು ಹುಡುಕುವುದಕ್ಕಿಂಥಾ ಹಾಡು ಬರೆಯುವುದೇ ಕಮ್ಮಿ ಸಮಯ ಹಿಡಿಯುತ್ತದೆಂದು ತೋರಿತು
ನೀವೀಗ ಓದಿದ್ದು `ಸಂತೆ ಹೊತ್ತಿಗೆ ಮೂರು ಮೊಳ ನೇಯುವುದು' ಅಂತಾರಲ್ಲಾ ಹಾಗೆ ಈಗಷ್ಟೇ (ಫಾರ್ಸಿ ಕವಿತೆಗಳ ಪ್ರಭಾವದಿಂದ) ನಾನು ಬರೆದ ಅತಿ ಫ್ರೆಶ್ ಹರುಕು ಮುರುಕು ಕವಿತೆ! ಹೇಗಿದೆ?
ಈ ವಾರದ ಪೋಸ್ಟಿಂಗ್ ಗಳಲ್ಲಿರುವ ಒಂದು ವಿಶೇಷವನ್ನು ನಿಮ್ಮಲ್ಲಿ ಎಷ್ಟು ಜನ ಗಮನಿಸಿದಿರಿ?
1 Comments:
''ಕನ್ಯಾರತ್ನ'(1963) ಚಿತ್ರದಲ್ಲಿ ಒಂದು ಒಳ್ಳೆಯ ಹಾಡಿದೆ, ಪಿ.ಬಿ.ಶ್ರೀನಿವಾಸ್ ಹಾಡಿರುವುದು. 'ಬಿಂಕದ ಸಿಂಗಾರಿ... ಮೈಡೊಂಕಿನ ವೈಯಾರಿ...' ಎಂದು ಶುರುವಾಗುತ್ತದೆ. ಅದರಲ್ಲಿ 'ನಿನ್ನಂತರಂಗ ಮಧುರಂಗ...' ಎಂದು ಬರುತ್ತದೆ, 'ಮಧುಪಾನಪಾತ್ರೆ ನಿನ್ನೊಡಲು...' ಎಂದೂ ಬರುತ್ತದೆ.
ನಿಮ್ಮ ಬ್ಲಾಗ್‍ನಲ್ಲಿನ ಚಿತ್ರಕ್ಕೆ ಇದು ಸಮಂಜಸವಾದ ಹಾಡು.
Post a Comment
Subscribe to Post Comments [Atom]
<< Home