Saturday, November 25, 2006

ಯಾರೇ ನೀನು ಚೆಲುವೇ...


ಯಾರೇ ನೀನು ಚೆಲುವೇ...ನಿನ್ನಷ್ಟಕ್ಕೆ ನೀನೇ ಏಕೆ ನಗುವೇ...?' ಅಂತ ಅಂಗಳದ ಬಂಗಾರದ ತಿಳಿ ಬಣ್ಣದ ಸೂರ್ಯನ ಬೆಳಕಲ್ಲಿ ನಗುತ್ತಿರುವ ಈ ಚೆಲುವೆಯನ್ನು ಕೇಳಿದೆ ಅದು ಸುಮ್ಮನೆ ನಕ್ಕು ತಲೆ ಅಲುಗಿಸಿತು ಎಂಥಾ ಚೆಲುವು! ಮನ ತುಂಬಿ ಬಂತು....

ಈ ವಾರವೆಲ್ಲಾ ನಾನು ಟುಲಿಪ್ ಹೂಗಳ ಮಾಲೆ ಪೋಣಿಸಿದ್ದು ನಿಮ್ಮ ಗಮನಕ್ಕೆ ಬಂದಿರಬೇಕು (ನೆನ್ನೆ Thanks giving shopping ಲ್ಲಿ busy ಆಗಿದ್ದರಿಂದ ಆಗಲಿಲ್ಲ sorryಅದಕ್ಕೆ ಎರಡು ಕಾರಣವಿದೆ ನೀವುಗಳು ಅಮಿತಾಭ್,ರೇಖಾ ಅಭಿನಯದ` ದೇಖಾ ಏಕ್ ಕ್ವಾಬ್...'ಎಂಬ ಸಿಲ್ ಸಿಲಾ ಸಿನಿಮಾದ ಹಾಡಿನಲ್ಲಿ ಟುಲಿಪ್ ಫೀಲ್ಡ್ ನೋಡೇ ಇರುತ್ತೀರಾ...ಆದ್ದರಿಂದ ನಿಮಗೆ ಬಿಡಿ ಹೂವಿನ ಸೊಬಗು ತೋರಿಸುವಾ ಅಂತ ನನಗನ್ನಿಸಿತು....

ಇದ್ಯಾವ ಟುಲಿಪ್ ಮೇನಿಯಾ ಇವಳಿಗೆ ಹಿಡಿಯಿತಪ್ಪಾ ಅಂಥ ನೀವು ಯೋಚಿಸಿರಬೇಕು( ಈ classic Tulip mania ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ) ನನಗೆ ಟುಲಿಪ್ ಹುಚ್ಚು ಹಿಡಿದು ಕೆಲವು ವರ್ಷಗಳೇ ಆದವು. ವಾರಪೂರ್ತಿ ನೀವು ನೋಡಿದ ಎಲ್ಲಾ ಚಿತ್ರಗಳ ಟುಲಿಪ್ ಗಳೂ ನನ್ನ ಅಂಗಳದಲ್ಲಿ ನಾನು ಕೈಯ್ಯಾರ ಬೆಳೆಸಿದವು ಪ್ರತಿಯೊಂದು ಗಿಡದ,ಹೂವಿನ ಜಾತಕ ,ನಕ್ಷತ್ರ ನನಗೆ ಗೊತ್ತು!

ಟುಲಿಪ್ ಗಳು ನೋಡಲು ಸುಂದರವಾದರೂ ಅವುಗಳನ್ನು ಬೆಳೆಸುವುದು ಅಷ್ಟು ಸುಲಭವಲ್ಲ...ಸ್ವಲ್ಪ ಮೈ ಕೈ ನೋವು ಮಾಡಿಕೊಳ್ಳಬೇಕುನೀವು ಯೋಚಿಸಿದ್ದು ಹಂಡ್ರೆಡ್ ಪರ್ಸೆಂಟ್ ಸರಿ ಈ ಮೈಕೈನೋವಿನ part ಅಂದ್ರೆ ನನಗೆ ಸ್ವಲ್ಪ ಉತ್ಸಾಹ ಕಡಿಮೆ ಬಾಯಿ ಮೊಸರಾಗಬೇಕು ಅಂದ್ರೆ ಹೇಗೆ ಕೈ ಕೆಸರು ಮಾಡಿಕೊಳ್ಳಲೇ ಬೇಕೋ ಸೇಮ್ ಅದೇ ತರ ಸುಂದರ ಟುಲಿಪ್ ನೋಡಬೇಕೂ ಮತ್ತು ನಿಮಗೆಲ್ಲ ತೋರಿಸಬೇಕೂ ಅಂದ್ರೆ ಸ್ವಲ್ಪ ಮೈನೋವು ಮಾಡಿಕೊಳ್ಳಬೇಕು!

ಆದರೆ ಈ ಕೆಲಸಕ್ಕೆ ಸ್ವಲ್ಪ ಸ್ಪೂರ್ತಿ ಬೇಕಲ್ಲಾ ಅಂತ ನನಗೆ ಒಂದಿಷ್ಟು `Enthu'ಬರಿಸಿ ಕೊಳ್ಳೋಣ ವೆಂದು 2006 ವಸಂತದಲ್ಲಿ ನಮ್ಮ ಅಂಗಳದಲ್ಲಿ ಅರಳಿದ ಹೂಗಳ ಫೋಟೋ ನೋಡುತ್ತಿದ್ದೆ ಮತ್ತು ನಿಮಗೂ ತೋರಿಸಿದೆ ಇದು ಈ ಟುಲಿಪ್ ವೀಕ್ ಮಾಡಲು ಮೊದಲ ಮತ್ತು ಮುಖ್ಯವಾದ ಕಾರಣ!

ಸಾಮಾನ್ಯವಾಗಿ ಪ್ರತೀ ವರ್ಷ ನಾನು Thanks giving week end ನನ್ನ Fall planting(ಮುಖ್ಯವಾಗಿ Tulips ಮತ್ತು Daffodils) ಶುರು ಮಾಡುತ್ತೇನೆ ಈ ವರ್ಷವೂ ಈಗ ಪ್ರಾರಂಭಿಸ ಬೇಕಿದೆ...

Thanks giving ಅಂತ ನಾವು ಭಾರತೀಯರು Traditional ಆಗಿ Turky ತಿನ್ನುವುದಿಲ್ಲವಾದರೂ ಇಲ್ಲಿ ಎಲ್ಲರ ಮನೆಯಲ್ಲೂ ಮಸಾಲೆ ದೋಸೆಯೋ ಇನ್ನೇನೋ ವಿಶೇಷವೋ ನಡೆದೇ ಇರುತ್ತೆ ಜೊತೆಗೆ ಸಖತ್ತು Thanks giving shopping!
ನನ್ನಂಥಾ ಹೂವು ಪ್ರೇಮಿಗಳಿಗೆ additional ಸಂಭ್ರಮ ಈ Tulip planting

So happy Thanks giving

and happy Fall planting!

1 Comments:

Blogger Satish said...

ಈ ವಾರದ ವಿಶೇಷಗಳಲ್ಲಿ ಹೂವನ್ನು ಗಮನಿಸಿದೆ, ಆದರೆ ಟುಲಿಪ್ ಹೂಗಳು ಅಂತಾ ಹೇಳೋಕೆ ಸಾಧ್ಯವಾಗದವನಾದೆ, ಏಕೆಂದ್ರೆ ನನ್ನ ಮತ್ತು ಹೂಗಳ ಅನುಬಂಧ ಅಷ್ಟಕಷ್ಟೇ ಇರೋದರಿಂದ ಹೂಗಳ ಬಗ್ಗೆ ಹೆಚ್ಚೇನೂ ಹಚ್ಚಿಕೊಳ್ಳಲು ಈವರೆಗೆ ಹೋಗಿಲ್ಲ.

ನಿಮ್ಮ ಅಂಗಳದಲ್ಲಿ ಬೆಳೆದ ಹೂಗಳ ಪರಿಚಯ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು!

6:02 PM  

Post a Comment

Subscribe to Post Comments [Atom]

<< Home