Tuesday, November 28, 2006

ಬ್ರಹ್ಮಾ ಜೀ ಕಾ ದರ್ಶನ್ ಹೋಗಯಾ


ಜೂಜುಕೋರ ನಗರಿ ಲಾಸ್ ವೇಗಸ್ ನಲ್ಲಿ ಈ ಬ್ರಹ್ಮನ ದೇಗುಲ ಕಂಡಾಗ ಒಂದು ಕ್ಷಣ ದಂಗಾಗಿ ನಿಂತು ಬಿಟ್ಟಿದ್ದೆ. ಎಲ್ಲಿಯ ಲಾಸ್ ವೇಗಸ್ ಎಲ್ಲಿಯ ಬ್ರಹ್ಮ?

ಲಾಸ್ ವೇಗಸ್ ಹೇಳಿ ಕೇಳಿ ಸುಖವಿಲಾಸಕ್ಕೆಂದೇ ಕಟ್ಟಿದ ಭೋಗನಗರಿ. ಜೂಜೂ, ಮದಿರೆಯೂ ಮಾನಿನಿಯರೂ ಆಳುವ ರಾಜ್ಯ. ನಮ್ಮಂಥ ಸಾಮಾನ್ಯ ಜನ ಇಪ್ಪತೈದು ಪೈಸೆಯ (ಸೆಂಟಿನ) ಸ್ಲಾಟ್ ಮಿಶಿನ್ನಿನಲ್ಲಿ ಅಬ್ಬಬ್ಬ ಅಂದ್ರೆ ಐವತ್ತು ಡಾಲರ್ ಕಳೆದು ಕೊಂಡೋ,ಐದು ಡಾಲರ್ ಗೆದ್ದುಕೊಂಡೋ ಎದ್ದು ಹೊರಗೆ ಬಂದು ಬಿಡುತ್ತೀವಿ ದೊಡ್ಡ ಮೊತ್ತದ ಟಿಕೆಟ್ಟಿನ` ರೋಮಾಂಚಕ' ಷೋ ನೋಡಲು ಧೈರ್ಯ ಸಾಲದೇ ಕ್ಯಸಿನೋ ಗಳ ಮುಂದೆ ತೋರಿಸುವ ಬಣ್ಣದ ಕಾರಂಜಿ,ನಕಲಿ ಜ್ವಾಲಾಮುಖಿ ನೋಡಿಕೊಂಡು ರಾತ್ರಿ ಕಷ್ಟ ಪಟ್ಟಾದರೂ ಇಂಡಿಯನ್ ಹೋಟೆಲ್ ಹುಡುಕಿ, ಅನ್ನ ತಿಂದು ಹೋಟೆಲ್ ರೂಮು ಸೇರಿ ಬಿಡುತ್ತೇವೆ.ವೇಗಸ್ಸನ್ನು ಬಲ್ಲ ರಸಿಕರು `ಹನ್ನೆರಡರ ಮೇಲೇ ನಿಜವಾದ ವೇಗಸ್ ನೋಡಲು ಸಿಗುವುದು' ಅಂತ ಪಿಸುಗುಟ್ಟುತ್ತಾರೆ...`ಹೆಂಡ್ತಿ ,ಮಕ್ಳನ್ನ ಕರಕೊಂಡು ವೇಗಸ್ ಗೆ ಹೋಗುವುದೇ...ಅಂತ ಮೂಗು ಮುರಿಯುತ್ತಾರೆ
ಇಂಥಾ ಜೋಬಿಗೆ ಬರೀ ಲಾಸ್ ಮಾಡುವ ವೇಗಸ್ಸಿನಲ್ಲಿ ನಮ್ಮ ಬ್ರಹ್ಮ ದೇವರು ಕಾಣಿಸಿ ಬಿಟ್ಟರೆ....ನಾನು ಮೂರ್ಛೆ ಬೀಳದೇ ಹೋಗಿದ್ದೇ ಆಶ್ಚರ್ಯ!

ವೇಗಸ್ ನ ಪ್ರಖ್ಯಾತ ಕ್ಯಸಿನೋಗಳಲ್ಲೊಂದಾದ `ಸೀಸರ್ಸ್ ಪ್ಯಾಲೇಸ್' ನ ಉತ್ತರ ಬದಿಯ ಹುಲ್ಲು ಹಾಸಿನ ಬಳಿ ಪ್ರತಿಷ್ಟಾಪಿತನಾಗಿದ್ದಾನೆ ಈ ಬ್ರಹ್ಮದೇವ.ಸೀಸರ್ಸ್ ಪ್ಯಾಲೇಸ್ ನ ಒಡೆಯರಿಗೆ ಥೈಲ್ಯಾಂಡ್ ದೇಶದ newspaper tycoon Kamphol Vacharaphol and his wife Praneetslipa ಮತ್ತು Mr. Yip Hon, a leading citizen of Hong Kong ಗಳ ಜಂಟಿ ಕೊಡುಗೆಯಂತೆ ಹದಿನಾಲ್ಕು ಅಡಿ ಎತ್ತರವಿರುವ ಈ ಬ್ರಹ್ಮ ಪುತ್ತಳಿ ಥೈಲ್ಯಾಂಡ್ ನಲ್ಲಿ ನಿರ್ಮಿಸಿದ ಮೂರ್ತಿಯನ್ನು ವೇಗಸ್ಸಿನಲ್ಲಿ ತಂದು ಜೋಡಿಸಿ 1984ರಲ್ಲಿ ವೈಭವಯುತವಾದ ಪ್ರತಿಷ್ಟಾಪನಾ ಮಹೋತ್ಸವ ನಡೆಸಿ ಮೂರ್ತಿ ಸ್ಥಾಪನೆ ಮಾಡಿದರಂತೆ 800 ಪೌಂಡ್ ತೂಕದ ಕಂಚಿನ ಪ್ರತಿಮೆಗೆ ಬಂಗಾರದ ಪ್ಲೇಟಿಂಗ್ ಮಾಡಿದ್ದಾರೆ.
ಥಾಯ್ ಜನ ಬ್ರಹ್ಮನ ಮೂರ್ತಿಯನ್ನು good fortune ಮತ್ತು prosperity ಯ ಶುಭ ಸಂಕೇತವಾಗಿ ನಂಬುತ್ತಾರೆ.ಸೀಸರ್ಸ್ ನ ಒಡೆಯರಿಗೂ ಬ್ರಹ್ಮ ಸಾಕಷ್ಟು ಯಶಸ್ಸು ತಂದು ಕೊಟ್ಟಿರುವುದಕ್ಕೆ ಬೇಕಾದಷ್ಟು ನಿದರ್ಶನಗಳು ಕಂಡವು!

ಅಗರಬತ್ತಿಯ ಸುವಾಸನೆಯ ಮಧ್ಯೆ ಹೂಗಳಿಂದ ಅಲಂಕೃತನಾಗಿ ವಿರಾಜಮಾನನಾಗಿದ್ದ ಬ್ರಹ್ಮದೇವನಿಗೆ ಒಂದು ನಮಸ್ಕಾರ ಹಾಕಿ ಮುಂದೆ ನಡೆದಾಗ ಯಾಕೋ `ಇದು ಎಂಥಾ ಲೋಕವಯ್ಯಾ' ಹಾಡು ನೆನಪಿಗೆ ಬಂತು...


ಟಿಪ್ಪಣಿ-ಚಂದ್ರಶೇಖರ ಆಲೂರರು ತಮ್ಮ ಅಮೆರಿಕ ಪ್ರವಾಸ ಕಥನದಲ್ಲಿ `ಬ್ರಹ್ಮಾ ಜೀ ಕಾ ದರ್ಶನ್ ಹೋಗಯಾ' ಎಂದು ತಾವು ಈ ಬ್ರಹ್ಮ ಪುತ್ತಳಿ ನೋಡುವಾಗ ಉತ್ತರ ಭಾರತದ ವೃದ್ದ ದಂಪತಿಗಳು ಉದ್ಗರಿಸಿದ ಪ್ರಸಂಗವನ್ನು ಸೊಗಸಾಗಿ ವರ್ಣಿಸಿದ್ದಾರೆ ಲಾಸ್ ವೇಗಸ್ ನಿಂದ ಹಿಂದಿರುಗಿದ ನಂತರ ನಾನು ಆಲೂರರ ಪುಸ್ತಕ ಓದಿದೆ.....

2 Comments:

Anonymous Anonymous said...

ಮಾಲಾ ಅವರೇ,

ಲಾಸ್ ವೇಗಸ್‍ನ ಥಳಕು-ಬಳುಕಿನ ನಡುವೆ ನಮ್ಮ ಬ್ರಹ್ಮ ಹೋಗಿ ತಾನು ಸೃಷ್ಟಿಸಿಲ್ಲದ ಒಂದು ಮಾಯಾಲೋಕ ನೋಡ್ತಾ ಇದ್ದಾನೆಯೇ ?

ನಾನು ಲಾಸ್ ವೇಗಸ್‍ಗೆ ಅನೇಕ ಸಲ ಹೋಗಿದ್ದರೂ ಬ್ರಹ್ಮನ ದರ್ಶನ ಆಗಲಿಲ್ಲ..ಮುಂದೆ ಹೋದಾಗ ಖಂಡಿತ ನೋಡಕೊಂಡು ಬರಬೇಕು ಅನ್ನಕೊಂಡಿದ್ದೀನಿ..ವೇಗಾಸ್ ಬ್ರಹ್ಮನ ಪರಿಚಯ ಮಾಡಿಕೊಟ್ಟಿದ್ದಕೆ ವಂದನೆಗಳು!

6:52 PM  
Blogger mala rao said...

ಶಿವ್ ಅವರಿಗೆ
ದುರ್ಗಕ್ಕೆ ಸ್ವಾಗತ
ಮತ್ತು ನಿಮ್ಮ ಕಮೆಂಟ್ ಗಾಗಿ ಥ್ಯಾಂಕ್ಸ್
ಹೀಗೇ ಆಗಾಗ ಬರ್ತಾ ಇರಿ

11:20 AM  

Post a Comment

Subscribe to Post Comments [Atom]

<< Home