Monday, November 27, 2006

Nov, 27...

Now you will feel no rain,
For each of you will be shelter to the other.

Now you feel no cold,
For each of you will be warmth to the other.

Now there is no more loneliness,
For each of you will be companian to the other.

Now you are two bodies,
But there is only one life before you.

Go now to your dwelling place
To enter into days of your togetherness
And may your days be good and long upon
The Earth

-Traditional Apache Wedding Prayer

******************************************
ಆಶೀರ್ವಾದಗಳು ಯಾವ ಭಾಷೆಯಲ್ಲಿದ್ದರೇನು? ಅವುಗಳ ಹಿಂದಿರುವ ಆಶಯ,ಭಾವ ಒಂದೇ...
ಅದು ನಮ್ಮ ಸಂಸ್ಕೃತವಾಗಲೀ ಅಥವಾ ಅಪಾಚಿ ಗಳ ಭಾಷೆಯಾಗಿರಲೀ...

Does it make any difference?
ನನಗಂತೂ ವ್ಯತ್ಯಾಸವೇನೂ ತೋರುವುದಿಲ್ಲ

ಇವತ್ತಿಗೆ ವರುಷಗಳ ಹಿಂದೆ ನಮಗೆ ಇಂಥ ಆಶೀರ್ವಾದಗಳು ನಮ್ಮ ನೆಲದಲ್ಲಿ ದೊರಕಿದ್ದವು
ಪುಣ್ಯ ವಿಶೇಷದಂತೆ ಅಚಾನಕ್ಕಾಗಿ ಇಂದು ಈ ಆಶೀರ್ವಚನ ಯಾವುದೋ ಹಳೆಯ ಪುಸ್ತಕದಲ್ಲಿ ಸಿಕ್ಕಿತು
And it made `Our' day....

5 Comments:

Anonymous Anonymous said...

ಇಲ್ಲಿ ದಿನಕ್ಕೊಂದು ಹೊಸ ಹೂವು ನಳನಳಿಸುತ್ತಿರುವುದು ನೋಡಿ ತುಂಬಾ ಸಂತೋಷವಾಗುತ್ತದೆ. ಈ ತಾಣದ ಹೆಸರು ಚಿತ್ರದುರ್ಗ ಅನ್ನುವುದಕ್ಕಿಂತ "ಹೂವಾಡಗಿತ್ತಿ" ಎಂದಿದ್ದರೆ ಚೆನ್ನಾಗಿತ್ತು ಅನ್ನಿಸಿತು. ಚಿತ್ರದುರ್ಗದಲ್ಲಿ ಹೂವೆಲ್ಲಿ ಬರಬೇಕು? ಬಿಸಿಲಿಗೆ ಕಾದು ಹೋಗಿರುವ ಶಾಪಗ್ರಸ್ತ ,ಒಣ ಬಂಡೆಗಳು ಮಾತ್ರ ಅಲ್ಲಿರೋದು :)

8:24 AM  
Anonymous Anonymous said...

ಬ್ಲಾಗಿನ ಹೆಸರು 'ಚಿತ್ರ-ದುರ್ಗ' ಅಂತಲೇ ಇರಲಿ, ಪರವಾ ಇಲ್ಲ. ಆದರೆ ವಿಸಿಟಿಗರು ಕಮೆಂಟಿಸಿದಾಗ ಈ ಬ್ಲಾಗೊಡತಿ ರಿಪ್ಲೈಸದಿರುವುದನ್ನು, ಅಥವಾ ಬಹಳ ಅಪರೂಪವಾಗಿ ರಿಪ್ಲೈಸುವುದನ್ನು, ನೋಡಿ 'ಪತ್ರ-ದುರ್ಗ' ಎಂದು ನಾಮಕರಣ ಮಾಡೋಣವೇ ಅನಿಸಿದ್ದಿದೆ!

ಮೆಚ್ಚುಗೆಯೇ ಇರಬೇಕಂತೇನಿಲ್ಲ, ನಿರಾಕರಣವಿರಬಹುದು, ಸಮರ್ಥನೆ ಇರಬಹುದು, ಏನಿದ್ದರೂ ಒಂದು acknowledgement ಇದ್ದರೆ ವಿಸಿಟಿಗರ/ಕಮೆಂಟಿಗರ ಸಂಖ್ಯೆ ಮತ್ತು ಆವೃತ್ತಿ ಹೆಚ್ಚಾಗುತ್ತದೆ. ಪ್ರೀತಿವಿಶ್ವಾಸ ವೃದ್ಧಿಸುತ್ತವೆ.

:-)

12:39 PM  
Blogger mala rao said...

ಶ್ರೀತ್ರೀ ಅವರೇ,
ಮೆಚ್ಚುಗೆಗಾಗಿ ಥ್ಯಾಂಕ್ಸ್
ನಿಮ್ಮ ಸಲಹೆ (ಹೆಸರು ಬದಲಾವಣೆ ಬಗ್ಗೆ) ಚೆನ್ನಾಗಿದೆ
ನಾನು ಚಿತ್ರ ದುರ್ಗದಲ್ಲಿ ನನ್ನ ಬಾಲ್ಯ ದ ನಾಲ್ಕೈದು ವರ್ಷ
ಕಳೆದಿದ್ದರಿಂದಲೋ ಏನೋ ದುರ್ಗ ನನಗೆ ಬಾಲ್ಯದ ಸವಿ ನೆನಪು ತರುವ ಸಿದ್ದರು ಹರಸಿದ ಸಿರಿನಾಡಾಗೇ ಕಾಣತ್ತೆ!
ನೀವು ಅಲ್ಲಿಗೆ ಬಿರು ಬೇಸಿಗೆಯಲ್ಲೇನಾದ್ರೂ ಪ್ರಯಾಸದ ಪ್ರವಾಸ ಮಾಡಿದ್ರಾ?

3:32 PM  
Blogger mala rao said...

ಓಹೋ ಜೋಷೀ ಮೇಷ್ಟರಿಗೆ ಕೋಪ ಬಂದಿದೇ...
ಅವರ ಬಿಂಗದ ಸಿಂಗಾರಿಯ ಬಿಂಕವನ್ನು ಮೆಚ್ಚಿಕೊಂಡೂ
ಅದನ್ನವರಿಗೆ ತಿಳಿಸಲು ತಡ ಮಾಡಿದ್ದಕ್ಕೆ!

ಸಾರೀ ಮೇಷ್ಟ್ರೇ...
ಸಂಸಾರ ಸಾಗರದ ತಾಪತ್ರಯಗಳು ನಿಮಗೆ ಗೊತ್ತಲ್ಲಾ
ಕೆಲವು ಸಾರಿ ಮುಳುಗಿ ಹೋಗಿರುತ್ತೇನೆ
ಅದರಿಂದ ನಮ್ಮ ಸಹೃದಯಿ ವಿಸಿಟಿಗರಿಗೆ ತೊಂದರೆಯಾಗುತ್ತೆ
ಆಗಾಗ ಹೀಗೆ ಎಚ್ಚರಿಕೆ ಕೊಡುತ್ತಿರುವುದಕ್ಕೆ ಧನ್ಯವಾದಗಳು

3:40 PM  
Anonymous Anonymous said...

ಕೋಪ-ತಾಪ ಏನೂ ಇಲ್ಲಮ್ಮಾ! :-)

KSRTC ಬಸ್ಸುಗಳಲ್ಲಿ 'ಟಿಕೇಟ್ ಕೇಳಿ ಪಡೆಯಿರಿ' ಎಂದು ಬೋರ್ಡ್ ಇರುತ್ತದಲ್ಲ? ಹಾಗೆಯೇ ಇಲ್ಲಿ 'ರಿಪ್ಲೈ ಕೇಳಿ ಪಡೆಯಿರಿ' ಆದ್ರೂ ವರ್ಕ್ ಆಗುತ್ತೋ ನೋಡಿದೆ, ಆಯ್ತು! ಪರಮಸಂತೋಷ :-)

(ಮತ್ತೆ ಮತ್ತೆ ':-)' ಉಪಯೋಗಿಸಿದ್ದು, ನಾನು ಸಿಟ್ಟಿನಿಂದ ಕಮೆಂಟಿಸಿದ್ದಲ್ಲ, witನಿಂದ ಎಂದು ಪ್ರತಿಪಾದಿಸಲು)

:-)

6:23 AM  

Post a Comment

Subscribe to Post Comments [Atom]

<< Home