Friday, December 01, 2006

ಎದುರಿಸಬೇಕು ಧೈರ್ಯದಿಂದ...

ಬಿಸಿಲಿಗೆ ಕರಗೋ ಮಂಜೇನಲ್ಲ

ಕಷ್ಟ ನಷ್ಟ ಎಲ್ಲಾ

ಎದುರಿಸಬೇಕು ಧೈರ್ಯದಿಂದ

ಬೇರೆ ದಾರಿ ಇಲ್ಲಾ

ಬೆಟ್ಟ ಕೊರೆದು ದಾರಿ ಮಾಡಿ

ನೀರು ನುಗ್ಗೋ ಹಾಗೆ

ಮುಂದೆ ನುಗ್ಗಿ ಹೋದ್ರೆ ತಾನೇ

ದಾರಿ ಕಾಣೋದ್ ನಮ್ಗೇ...

**********

ನಿಮ್ಮಲ್ಲಿ ಹಲವರು ನನ್ನ ಇ-ಮೇಲ್ ಐ.ಡಿ ಕೇಳಿದ್ದೀರಾ...ಕಾಳಜಿಗೆ ಧನ್ಯವಾದಗಳು
ನಾನು ವಾರಕ್ಕೊಂದು ಬಾರಿ ಮೇಲ್ ಚೆಕ್ ಮಾಡುವ, ತಿಂಗಳಿಗೊಂದು ಸಾರಿ ರಿಪ್ಲೆ ಮಾಡುವ
ಜಾತಿ....ಬೇಗ ರಿಪ್ಲೆ ಬರಲಿಲ್ಲ ಅಂತ ಬೇಜಾರು ಮಾಡಿಕೊಳ್ಳದಿದ್ದ ಪಕ್ಷದಲ್ಲಿ ನನಗೆ ಮೇಲ್ ಕಳಿಸಿ
ನಿಮ್ಮೆಲ್ಲಾ ಕಮೆಂಟ್ಸ್ ಗಳನ್ನು ಬ್ಲಾಗ್ ನಲ್ಲೇ ಹಾಕಿದರೆ ಉತ್ತಮ.ಸ್ವಂತ ಬ್ಲಾಗ್ ಇಲ್ಲದವರು
`ಅನಾನಿಮಸ' ಆಯ್ಕೆ ಮಾಡಿಕೊಂಡು ನಿಮ್ಮ ಹೆಸರು ಟೈಪಿಸಬಹುದು.....
ನನ್ನ ಐಡಿ mala1427@yahoo.com

2 Comments:

Anonymous Anonymous said...

"ನಿಮ್ಮೆಲ್ಲಾ ಕಮೆಂಟ್ಸ್ ಗಳನ್ನು ಬ್ಲಾಗ್ ನಲ್ಲೇ ಹಾಕಿದರೆ ಉತ್ತಮ."

1. ಕಮೆಂಟ್
2. ಕಮೆಂಟ್ಸ್ (ಕಮೆಂಟ್‌ಗಿಂತ ಹೆಚ್ಚು)
3. ಕಮೆಂಟ್ಸ್‌ಗಳು ('ಕಮೆಂಟ್ಸ್'ಗಿಂತಲೂ ಹೆಚ್ಚು)
4. ಎಲ್ಲಾ ಕಮೆಂಟ್ಸ್‌ಗಳು (ಕಮೆಂಟ್ಸ್‌ಗಳಿಗಿಂತಲೂ ಹೆಚ್ಚು).

ಅವೆಲ್ಲದಕ್ಕೂ ಜಾಗವಿದೆ ಚಿತ್ರ-ದುರ್ಗದಲ್ಲಿ ಎಂದಾಯ್ತು! ಭೇಷ್!!

:-)

ಕ್ಷಮಿಸಿ. ನಾನು ಕಮೆಂಟಿಸುವ ರೀತಿ ಹೀಗೆಯೇ. ಹೇಗಿದ್ದರೂ ನಿಮಗೆ ಗೊತ್ತು, "ಎದುರಿಸಬೇಕು ಧೈರ್ಯದಿಂದ... ಬೇರೆ ದಾರಿ ಇಲ್ಲ..."

ಒಳ್ಳೆಯದಾದ ಆ ಹಾಡನ್ನು ಮುಂದುವರೆಸಿ ಚಿತ್ರ-ದುರ್ಗವನ್ನು ಸಿಂಗರಿಸಿದ್ದಕ್ಕೆ ನಿಮಗೆ ಅಭಿನಂದನೆ+ಧನ್ಯವಾದ.

6:51 AM  
Blogger mala rao said...

ಜೋಶಿ ಅವರೇ
ದುರ್ಗ ವಿಶಾಲವಾಗಿದೆ ಗೂಗಲ್ ಕೃಪೆ! ಸೋ `ಎಲ್ಲಾ ಕಮೆಂಟ್ಸ್' ಗಳನ್ನೂ ಪ್ರಕಟಿಸುತ್ತೇನೆ!
ನೀವು ಹೇಳಿದ್ದು ನಿಜ ಬ್ಲಾಗ್ ಶುರು ಮಾಡಿದ ಮೇಲೆ
`.............ಬೇರೆ ದಾರಿ ಇಲ್ಲಾ!'
ಮೆಚ್ಚುಗೆಗೆ ಧನ್ಯವಾದಗಳು

11:24 AM  

Post a Comment

Subscribe to Post Comments [Atom]

<< Home