Monday, December 04, 2006

ಮಾರ್ನಿಂಗ್ ಗ್ಲೋರಿ


Oh, Morning Glory!

The Morning Glory
It has taken the well bucket
I must ask elsewhere for water
-Chiyo ni

ಆಕಾಶ ನೀಲಿ ಬಣ್ಣದ ಸುಕೋಮಲ ಹೂ ಮಾರ್ನಿಂಗ್ ಗ್ಲೋರಿ. ಪೀಪಿ ಆಕಾರದ ಸೂಕ್ಷ್ಮ ಪ್ರಕೃತಿಯ ಚೆಲುವೆ ಗುಲಾಬಿ,ಸೇವಂತಿಯರಂತೆ ಈ ಹೂಗಳು ವಾರಗಳಗಟ್ಟಲೆ ನಲಿಯಲಾರವು ಬೆಳಗ್ಗೆ ಪಳಪಳ ಮೃದುಮೈ ತೋರುತ್ತಾ ಹೊಳಪಾದ ನೀಲಿ ಜ್ವಾಲೆಯಂತೆ ಬೆಳಗುತ್ತಾ ಅರಳಿ ಸಂಜೆಗೆ ಬಾಡಿ ಹೋಗಿಬಿಡುತ್ತವೆ ಒಂದೇ ದಿನದ ವೈಭವ....

ನಾವೆಷ್ಟು ಕಾಲ ಬದುಕಿದೆವೆಂಬುದು ಮುಖ್ಯವಲ್ಲ. ನಾವು ಬದುಕಿದಷ್ಟು ಕಾಲ ಎಷ್ಟು ಹೃದಯ,ಮನಸ್ಸುಗಳನ್ನು ಬೆಳಗಿಸಿದೆವು ಎನ್ನುವುದೇ ಮುಖ್ಯ ಎಂಬ ಪಾಠ ಹೇಳುತ್ತಿವೆಯೇನೋ ಅಂತ ಪ್ರತಿಸಲ ಈ ಪುಟಾಣಿ `ಗ್ಲೋರಿ' ಗಳನ್ನು ನೋಡಿದಾಗಲೆಲ್ಲಾ ನನಗೆ ಅನ್ನಿಸುತ್ತೆ...

0 Comments:

Post a Comment

Subscribe to Post Comments [Atom]

<< Home