ಪೋಕರಿಯೊಬ್ಬನ ಪ್ರೇಮನಿವೇದನೆ
ನಾನು ಎಂಟೊಂಬತ್ತನೇ ಕ್ಲಾಸ್ ನಲ್ಲಿದ್ದಾಗಿರಬೇಕು ನನ್ನ ಸೋದರಿಯೂ ಅವಳ ಬೆಸ್ಟ್ ಸ್ನೇಹಿತೆಯೂ ಹೆದರೆದರುತ್ತಾ ನನ್ನ ಬಳಿಗೆ ಬಂದು ಒಂದು ಗ್ರೀಟಿಂಗ್ ಕಾರ್ಡ್ ತೋರಿಸಿದರು ಯಾವುದೇ ಲೋಕಲ್ ಬುಕ್ ಸ್ಟೋರ್ ನಲ್ಲಿ ಸಿಗಬಹುದಾದ ಎರಡು ಗುಲಾಬಿ
ಒಂದು ಹಾರ್ಟೋ ಒಂದು ಗುಲಾಬಿ ಎರಡು ಹಾರ್ಟೋ ಇದ್ದ ಕಾರ್ಡ್ ಅದು. ಅಸಲಿ ವಿಷ್ಯ ಅದಲ್ಲ ಅದನ್ನು ಕೊಟ್ಟ ಪೋಕರಿ ಅದರೊಳಗೆ ಒಂದು ಪದ್ಯ ಬೇರೇ ಬರೆದು ಬಿಟ್ಟಿದ್ದ ಮತ್ತು ಅದನ್ನು ಅವನ ಕ್ಲಾಸ್ ನ `ದಡ್ಡೆಸ್ಟ್ ಹುಡುಗಿ ' ಅನ್ನಿಸಿ ಕೊಂಡ ನನ್ನ ಸೋದರಿಯ ಸ್ನೇಹಿತೆಗೆ ಅರ್ಪಿಸಿ ಬಿಟ್ಟಿದ್ದ ಅವಳಿಗೆ ಅದು ಅರ್ಥವಾಗದೆ ವಯಾ ನನ್ನ ಸೋದರಿ ನನ್ನ ಬಳಿಗೆ ಬಂದು ಅದು ತಲುಪಿದ್ದು...ಅಂದಿಗೆ ನನಗರ್ಥವಾದ ರೀತಿ ಅದನ್ನು ನಾನು ಅವೆರಡೂ ಮಂಗಗಳಿಗೆ ವಿವರಿಸಿದ್ದೆ ಇವತ್ಯಾಕೋ ನಾಲ್ಕು ಸಾಲುಗಳ ಆ ಪದ್ಯ ನೆನಪಿಗೆ ಬಂತು ಇದರ ವ್ಯಾಕರಣ , ಪದಭಂದದ ಬಗ್ಗೆಯಾಗಲೀ., ಇದು ಯಾವ ಫೇಮಸ್ ಪದ್ಯದ ನಕಲು ಇರಬಹುದೆಂದು ತಲೆ ಕೆಡೆಸಿಕೊಳ್ಳುವುದಾಗಲೀ ಮಾಡದೆ ಸುಮ್ಮನೆ ಇದನ್ನು ಓದಿಕೊಳ್ಳಿ...
**************
Love is in your Heart
Was not put there to say
Love is not Love
Till you give it away
3 Comments:
ಪ್ರೇಮ ನಿವೇದನೆ ಹೂವಿನ ಬುಡಕೆ
ಸೋಕಿದ ಬೆರಳು ಯಾರದೋ?
please visit
http://ka16kss75.blogspot.com/
Thank you for visiting our blog
durgada hudugaru
Post a Comment
Subscribe to Post Comments [Atom]
<< Home