Monday, October 27, 2008

ದೀಪಾವಳಿ


ಇಂದು ದೀಪಾವಳಿಯ ಮೊದಲದಿನ,ನರಕಚತುರ್ದಶಿ. ಶ್ರೀ ಕೃಷ್ಣ ಪ್ರಾಗ್ಜ್ಯೋತಿಷ ಪುರದ ರಾಜನಾಗಿದ್ದು ಲೋಕಕಂಟಕನಾಗಿದ್ದ ನರಕಾಸುರನನ್ನು ವಧಿಸಿ ಜಗತ್ತಿಗೆ ನೆಮ್ಮದಿ ನೀಡಿದ್ದು ಇದೇ ದಿನವಂತೆ.ಜೊತೆಗೆ ಅವನು ಸೆರೆಯಲ್ಲಿಟ್ಟಿದ್ದ ಹಲವಾರು ಸುಕೋಮಲ ಕನ್ನಿಕೆಯರನ್ನು ಕೃಷ್ಣ ನರಕಾಸುರನ ಭದ್ರ ಕೋಟೆಯ ಸೆರೆಯಿಂದ ಬಿಡಿಸಿ ಸ್ವತಂತ್ರ ಗೊಳಿಸಿದನಂತೆ.ದೀಪಾವಳಿಯ ಹಿನ್ನಲೆಗಿರುವ ಹಲವಾರು ಕಥೆಗಳಲ್ಲಿ ಇದೂ ಒಂದು.

ಇಂದಿನ ವ್ಯಕ್ತಿ ಪ್ರಧಾನವಾದ ವೇಗದ ಜೀವನ ಶೈಲಿಯ ದಿನಗಳಲ್ಲಿ ಪ್ರತಿಯೊಬ್ಬರೂ ಸದಾ ತಮ್ಮತಮ್ಮ ಹಿತ ಕಾಯ್ದುಕೊಳ್ಳುವುದರಲ್ಲೇ ಮಗ್ನರು.ನಾವೆಲ್ಲ ಓಡುತ್ತಿರುವುದೊಂದು ವಿವೇಚನಾರಹಿತವಾದ Rat race.ಎಲ್ಲ ಸಂಬಂಧಗಳೂ ವ್ಯಾವಹಾರಿಕ.ಯಾರ ಮೇಲೆ ಯಾರಿಗೂ ವಿಶ್ವಾಸವಾಗಲೀ ನಂಬಿಕೆಯಾಗಲೀ ಇಲ್ಲ .ಸ್ನೇಹಕಾಗಲೀ,ಸುಕೋಮಲ ಭಾವನೆಗಳಿಗಾಗಲೀ ಜಾಗವಿಲ್ಲ....

"ಕಡಗೋಲು ಕೈಯ್ಯ,ಕಡುನೀಲಿ ಮೈಯ್ಯ ಆ ದಿವ್ಯ ರೂಪವನ್ನು " ನಾವುಗಳು ಮನದಲ್ಲಿ ತಂದುಕೊಂಡು ನಮ್ಮೆದೆಗಳಲ್ಲಿ ವ್ಯವಹಾರಿಕ ನರಕಾಸುರ ಕಟ್ಟಿರುವ ಕೋಟೆ ಒಡೆದು,ಸುಕೋಮಲ ಕನ್ನಿಕೆಯರಂಥಾ ಸ್ನೇಹ ,ಪ್ರೀತಿ,ವಿಶ್ವಾಸಗಳನ್ನು ಸ್ವತಂತ್ರ ಗೊಳಿಸಲು ಇಂದು ಸುದಿನ
ನಿಮಗೆಲ್ಲಾ ದೀಪಾವಳಿಯ ಶುಭಾಶಯಗಳು