ಪುಟ್ಟ ಪುಟ್ಟ ಹೆಜ್ಜೆ
ಈ ಬೆಣ್ಣೆ ಬಂಗಾರದ ಬಣ್ಣದ ಕಾಲಚೀಲ ಜೋಡಿಯನ್ನು ನನ್ನ ಗೆಳತಿಯ ಮಗುವಿಗಾಗಿ ನಾನು ಹೆಣೆದಿದ್ದು.ಹೆಣೆದು ಮುಗಿಸಿ ಒಂದರ ಪಕ್ಕದಲ್ಲೊಂದು ಇಟ್ಟಾಗ ಎಷ್ಟು ಮುದ್ದಾಗಿ ನಕ್ಕು ಮಿಟುಕಿಸಿದವೆಂದರೇ......ಮಗು ಇವನ್ನು ಹಾಕಿಕೊಳ್ಳುವ ಮೊದಲೇ ಇವುಗಳೇ ಜೀವ ಬಂದು ಪುಟ್ಟಪುಟ್ಟ ಹೆಜ್ಜೆ ಹಾಕಲು ಶುರು ಮಾಡಿಬಿಡುತ್ತಾವೇನೋ ಅನ್ನಿಸಲು ಶುರುವಾಯಿತು ನನಗೆ...
ನೆನ್ನೆಯ ವೃತ್ತಾಂತದ ಕೊನೆಯ ಭಾಗ ಉಳಿದು ಹೋಗಿತ್ತು ಅದನ್ನಿವತ್ತು ಹೇಳಿಬಿಡುತ್ತೇನೆ ....
ನಾನೂ, ಸುಗಂಧಿಯೂ ನಂತರ ತುಂಬಾ ದಿನ ಭೇಟಿಯಾಗಲೇ ಇಲ್ಲಾ...ಕಳೆದ ವರುಷ ನಾನು ಸುಗಂಧಿಯ ಹೈದ್ರಾಬಾದ್ ನ ಮನೆಗೆ ಹೋದಾಗ ಆಗಷ್ಟೇ ಮೆಲ್ಲ ಮೆಲ್ಲನೆ ಬೆಳಗಾಗುತ್ತಿತ್ತು ನಾನೂ ಸುಗಂಧಿಯೂ ಟೀ ಕೈಲಿ ಹಿಡಿದು ಹಳೆ ಕಥೆಗಳ ವಿನಿಮಯ ನಡೆಸುತ್ತಿದ್ದಾಗ ಅಡುಗೆಮನೆ ಬಾಗಿಲಲ್ಲಿ ಪುಟಾಣಿ ನೆರಳೊಂದು ಕಾಣಿಸಿತು..ನಾನು ತಿರುಗಿ ನೋಡುವಷ್ಟರಲ್ಲಿ ಮಾಯ!ಸುಗಂಧಿ ನಕ್ಕು ನನ್ನನ್ನು ಪಕ್ಕದ ರೂಮ್ಗೆ ಕರೆದೊಯ್ದಳು.ಅದು ಧ್ರುವ್ ನ ರೂಂ. ಕೊಲಾಜ್ ಮಾಡಿದ್ದ ದೊಡ್ದ ಚಿತ್ರದ ಕಡೆ ಬೆರಳು ಮಾಡಿ ತೋರಿಸಿದಳು ಧ್ರುವ್ ನ ಹಲವು ಬಾಲಲೀಲೆಗಳ ಫೋಟೋ ಗಳ ನಟ್ಟ ನಡುವಲ್ಲಿ ಕೂತಿತ್ತು.....ಆ ಫೋಟೋ....ನಾಲ್ಕು ಮಾರು ಹೋದವಳು ಮಗು ಅಳುತ್ತಿದ್ದಾನೋ ಏನೋ ಎಂದು ಹಿಂದೆ ತಿರುಗಿ ನೋಡಿ ಸುಮ್ಮನೆ ಒಮ್ಮೆ ಕ್ಲಿಕ್ಕಿಸಿದಳಲ್ಲಾ..ಅದೇ ಫೋಟೋ...W.T.C ಯ ಎರಡು ಟವರ್ ಗಳ ಮಧ್ಯೆ ಧ್ರುವ್ ನನ್ನ ಮಡಿಲಲ್ಲಿ ಮಲಗಿ ಮುಗುಳು ನಗುತ್ತಿರುವ ಫೋಟೋ... ನಾನು ಅದನ್ನೇ ನೋಡುತ್ತಾ ಸುಮ್ಮನೆ ನಿಂತು ಬಿಟ್ಟೆ...ಎಷ್ಟು ಹೊತ್ತು ಹಾಗೇ ನಿಂತಿದ್ದೆನೋ...
ಸುಗಂಧಿ ಯ ಮಾತು ಮತ್ತೆ ಈ ಲೋಕಕ್ಕೆ ಎಳೆತಂತು."ನೋಡು ಯಾವಾಗ್ಲೂ ಕೇಳ್ತಿರ್ತೀಯಲ್ಲಾ ಯಾರು ಈ ಆಂಟಿ ಅಂತಾ ಇವರೇ ಆ ಆಂಟೀ...." ನಂತರ ನನಗೆ ಗೊತ್ತಾಗಿದ್ದು "ಆಗ ತಾನೆ ಹಾಲು ಕುಡಿದು ಬಿಳಿ ಮೀಸೆಯ ಬಾಯಿಯೊಂದಿಗೆ ಕಣ್ಣರಿಳಿಸಿಕೊಂಡು ನಗುತ್ತಾ ಪುಟ್ಟ ಫುಟ್ಟ ಹೆಜ್ಜೆಯಿಡುತ್ತಾ ಬಂದು ಧ್ರುವ್ ನನ್ನ ತೊಡೆಯೇರಿದ್ದು....."
ಈ ಬಂಗಾರದ ಬಣ್ಣದ ಪುಟ್ಟ ಕಾಲುಚೀಲ ಗಳು ಎಲ್ಲಾದರೂ ಪುಟುಪುಟು ಎಂದು ಪುಟ್ಟ ಪುಟ್ಟ ಹೆಜ್ಜೆ ಹಾಕುತ್ತಾ ಮಾಯವಾಗುವ ಮೊದಲೇ ಇವುಗಳನ್ನು ಇವುಗಳ `ಪುಟ್ಟ ಯಜಮಾನನಿಗೆ' ತಲುಪಿಸಲು ಪ್ಯಾಕ್ ಮಾಡುತ್ತಾ...
4 Comments:
ತುಂಬಾ ಚೆನ್ನಾಗಿ ಹೆಣೆದಿದ್ದೀರಿ. ನೋಡಲು ಮುದ್ದಾಗಿದೆ. ಬೇಗ ಹೋಗಿ ಪುಟ್ಟ ಪಾದಗಳನ್ನು ಸೇರಲಿ.
ಚಿತ್ರದುರ್ಗದಲ್ಲಿ ವಾಸ್ತವ ಸಂಗತಿಗಳನ್ನು ಚಿತ್ರಗಳ ಸಮೇತ ವಿಶೇಷವಾಗಿ ರೂಪಿಸುತ್ತಿರುವ ನಿಮ್ಮ ಪುಟ್ಟ ಬರಹಗಳನ್ನು ಓದೋದೇ ಒಂದು ಸೊಗಸು...ನೀವ್ ಬರೆಯೋದ್ ಹೆಚ್ಚೋ ನಾವ್ ಓದೋದ್ ಹೆಚ್ಚೋ!
(ನಮ್ ಹುಡುಗ್ರು ಫೋಟೋ ಸದ್ಯದಲ್ಲೇ ಕಳಿಸ್ತೀನಿ)
ಶ್ರೀತ್ರೀ ಅವರೇ,
ಕಾಂಪ್ಲಿಮೆಂಟ್ಸ್ ಗೆ ಧನ್ಯವಾದಗಳು.ಬರೆಯುವುದರ(ಕೊರೆಯುವುದರ) ಜೊತೆ ಕ್ರೋಶೆ ಹಾಕುವುದು
ನನ್ನ ಇನ್ನೊಂದು ಹುಚ್ಚು!
ಕಾಳೂ ಅವರೆ,
ಹೊಗಳಿಕೆಯ ಹಾಲನ್ನು ಹೀರುವುದು ಯಾವ ಬೆಕ್ಕಿಗೆ ಪ್ರಿಯವಲ್ಲ
ಹೇಳಿ....
ಧನ್ಯವಾದಗಳು
Post a Comment
Subscribe to Post Comments [Atom]
<< Home