Wednesday, September 27, 2006

ತಟ್ಟೇ ಕೂಗಾಡಲೀ.....



"ತಟ್ಟೇ ಕೂಗಾಡಲೀ..." ಇದ್ದಕ್ಕಿದ್ದಂತೆ ಅಡುಗೆಮನೆ ಕಡೆಯಿಂದ ಕೇಳಿ ಬಂದಾಗ ಬೆಚ್ಚಿ ಬಿದ್ದೆ ತಟ್ಟೆ ಕೂಗಾಡುವುದೆಂದರೇನೂ? ತಟ್ಟೆಗಳಿಗೆ ಹೀಗೆಲ್ಲಾ "ಕೂಗಾಡಲು" ಕರೆ ಕೊಡುತ್ತಿರುವ ಮಹಾನ್ ಲೀಡರ್ ಯಾರಪ್ಪಾ...ತಟ್ಟೇಗಳೂ ಏನಾದರೂ ಯೂನಿಯನ್ ಗೀನಿಯನ್ ಅಂತ ಮಾಡಿಕೊಂಡು ಬಿಟ್ಟವಾ...ಅಂತಾ ಗಾಭರಿಯಿಂದ ಅಡುಗೆ ಮನೆ ಇಣುಕಿದೆ.ಅಷ್ಟೊತ್ತಿಗೆ ಅರವಿಂದನಿಗೆ ಊಟದ ತಟ್ಟೆ ಕೈಗೆ ಸಿಕ್ಕಿದ್ದರಿಂದ ಹಾಡು ನಿಲ್ಲಿಸಿದ. "ಅಬ್ಬೋ..." ಇಷ್ಟೇನಾ ಅಂತ ಉಸಿರುಬಿಟ್ಟೆ.ಒಂದು ನಿಮಿಷದ ನಂತರಯೋಚನೆಯಾಯಿತು."ಅಲ್ಲಾ...ಮನೆಯಲ್ಲಿರುವ ಎಂಟು ದೊಡ್ಡ ತಟ್ಟೆಗಳೂ,ಅದೇ ಸೆಟ್ ನಲ್ಲಿ ಬಂದ ಇನ್ನೆಂಟು ಸಣ್ಣತಟ್ಟೆಗಳೂ ಕೂಗಾಡಲು ಶುರು ಮಾಡಿದರೆ ಗತಿ ಏನು? ಜೊತೆಗೆ ಇದು ಸಲಾಡ್ ಇಡಲು ಚೆನ್ನಾಗಿದೆ,ಇದು ಯಾರಾದ್ರೂ ಗೆಸ್ಟ್ ಬಂದಾಗ ಸ್ವೀಟ್ಸ್ ಅರೇಂಜ್ ಮಾಡಿ ಡೈನಿಂಗ್ ಟೇಬಲ್ ಮೇಲಿಡಲು ಚೆನ್ನಾಗಿದೆ,ಇದು ಸ್ಟಾರ್ ಶೇಪ್ ನಲ್ಲಿದೆ,ಇದು ಲೀಫ್ ಶೇಪ್ನಲ್ಲಿದೆ, ಈ ತರದ್ದು ಇಂಡಿಯಾನಲ್ಲಿ ಸಿಗೋಲ್ಲಾ...ಅಂತೆಲ್ಲಾ ಮಣ್ಣು ಮಸಿ ಕಾರಣ ಕೊಟ್ಟು ನಾನು ಕೊಂಡಿರುವ ತಟ್ಟೆಗಳೂ ಸುಮಾರಿವೆ ಅವೂ ಜೊತೆಗೂಡಿದರೇ? ಎಷ್ಟೆಲ್ಲಾ ಗದ್ದಲವಾಗಬಹುದೂ...?ನಮ್ಮಮ್ಮ ಕೊಟ್ಟ ತಟ್ಟೆ,ದೇವರಿಗೆಂದು ತಂದ ಬೆಳ್ಳಿತಟ್ಟೆ ಮುಂತಾಗಿ ಇಂಡಿಯಾದಿಂದ ನಮ್ಮೊಂದಿಗೆ ವಲಸೆ ಬಂದವುಗಳು ತಮ್ಮ ಅಮೆರಿಕನ್ ಅಣ್ಣಂದಿರ ಪಾರ್ಟಿ ಸೇರದೆ ಸುಮ್ಮನುಳಿಯುತ್ತವೆ ಅಂತ ಏನು ಗ್ಯಾರೆಂಟಿ? ನನಗೆ ತುಂಬಾ ಯೋಚನೆಯಾಗಿ ಬಿಟ್ಟಿತು
ನಾನು ತಲೆ ಕೆಡಿಸಿ ಕೊಳ್ಳುತ್ತಾ ಹಾಲ್ ಗೆ ಬಂದರೆ ಅರವಿಂದ ಚಪಾತಿಯಿಂದ ಚಮಚ ಮಾಡಿಕೊಂಡು ಕಾಳಿನ ಉಸ್ಲಿಯನ್ನು ಮೆಲ್ಲುತ್ತಾ `ಚಾಂದ್ ಚುಪಾ ಬಾದಲ್ ಮೇ..'ಅಂತ ತನ್ನಷ್ಟಕ್ಕೆ ತಾನು ಸರಸವಾಗಿ ಹಾಡಿಕೊಳ್ಳುತ್ತಿದ್ದ.ನನಗೆ ಸಿಟ್ಟು ನೆತ್ತಿಗೇರಿತು "ತಟ್ಟೆಗಳೇ ಕೂಗಾಡಿ'ಅಂತೆಲ್ಲಾ ಅವಕ್ಕೆ ಅಲ್ಲಿ ಕರೆ ಕೊಟ್ಟು ಬಿಟ್ಟು ಇಲ್ಲಿ ಬಂದು ತಾನು ಹಾಯಾಗಿ ಚಾಂದ್ಉ..,ಬಾದಲ್ಲುಉ... ಅಂತ ಹಾಡಿ ಕೊಳ್ತಾ ಇದಾನಲ್ಲಾ ಥೇಟ್ ಈಗಿನ ನಮ್ಮ ನಾಯಕರುಗಳ ತರಾ...ಅಂತಾ.
ತಟ್ಟೆ ಯಾಕೆ ಕೂಗಾಡಬೇಕೂ "ಹೊಟ್ಟೆ ಕೂಗಾಡುವುದು ಸಾಲದೇ?" ಅಂತ ಕೋಪದಿಂದ ಕೂಗಿದೆಅವನು ಕಿವಿಗೇ ಹಾಕಿಕೊಳ್ಳಲಿಲ್ಲಾ...ತನ್ನ ಪಾಡಿಗೆ ತಾನು ಚಾಂದ್ ಬಾದಲ್ ಗಳ ಮಧ್ಯೆ ಕಳೆದು ಹೋಗಿದ್ದ.
ಸರಿ ನಾನೇ ಈ ಕ್ರೈಸಿಸ್ ಮ್ಯಾನೇಜ್ ಮಾಡೋಣವೆಂದು ನಿರ್ಧರಿಸಿ ಗಹನವಾಗಿ ಯೋಚಿಸತೊಡಗಿದೆ ನನ್ ತಲೆ ಅಂದ್ರೆ ಅಷ್ಟೇನು ಕಳಪೆ ಅಲ್ಲಾ ಅಂತ ಮನದಟ್ಟಾಗಿದ್ದು ಐಡಿಯಾ!ಅಂತ(ಯುರೇಕಾ ಅಂತಲ್ಲಾ!) ಒಂದು ಐಡಿಯಾ ಹೊಳೆದಾಗ! ನಮ್ಮ "ಡಿಶ್ಶಮ್ಮ"ನಿಗೆ ಕೂಗಾಡುವ ತಟ್ಟೆಗಳಿಗೆಲ್ಲಾ ಬಿಸಿ ಬಿಸಿ ಕಜ್ಜಾಯ ರುಚಿ ರುಚಿ ಕಜ್ಜಾಯ ಮಾಡಿ ಕೊಡಲೆ ನಾನು...ತಗೋ ತಿನ್ನು! ಅಂತ "ನಾಲ್ಕು ನಾಲ್ಕು ಸರಿಯಾಗಿ ಇಕ್ಕು" ಅಂತ ಸುಪಾರಿ ಕೊಟ್ಟು ಬಿಡುವುದು!ವಾವ್ ಗ್ರೇಟ್ ಐಡಿಯಾ ಅನ್ನಿಸಿತು.
ಸರಿ ಡಿಶ್ಷಮ್ಮನೊಂದಿಗೆ ಡೀಲ್ ಕುದುರಿಸಿ ಉಶ್ಶಮ್ಮಾ...ಅಂತ ಟಿ.ವಿ.ನೋಡುತ್ತಾ ಸೋಫಾಕ್ಕೊರಗಿದೆ.ಅರವಿಂದ ಉಸ್ಲಿ,ಚಪಾತಿ ತಿಂದು ಮುಗಿಸಿ ಅಡುಗೆ ಮನೆ ಕಡೆ ಹೋದ.ಕೆಲ ಕ್ಷಣಗಳಲ್ಲೇ "ಲೋಟಾ ಹೋರಾಡಲೀ..." ಎಂಬ ರಾಗ ಕೇಳಿ ಬಂತು...ನಾನು ಜಾಣ ಕಿವುಡಿಯಾಗಿ ನಿರಾತಂಕವಾಗಿ ಟಿ.ವಿ ನೋಡುವುದನ್ನು ಮುಂದುವರೆಸಿದೆ...
ಟಿಪ್ಪಣಿ-
1)ಇವತ್ತು sanfrancisco ಪ್ರದೇಶ ದಲ್ಲಿರುವ stanford KZSU 90.1 ರೇಡಿಯೋ ಚಾನಲ್ ನಲ್ಲಿ ರಾಜ್ ಕುಮಾರ್ ಅವರ ಹಾಡುಗಳಿಂದ ಕೂಡಿದ "ರಾಜ್ ಸ್ಮರಣೆ" ಕಾರ್ಯಕ್ರಮವಿದೆ ಅದು ಯಶಸ್ವಿ ಯಾಗಲೀ ಅಂತ ಹಾರೈಸುತ್ತಾ ಇವತ್ತಿನ ಪೋಸ್ಟ್ ಅನ್ನು ನಾನು ಚಿಕ್ಕಂದಿನಲ್ಲಿ ನೋಡಿ ನಲಿದ ರಾಜ್ ಚಿತ್ರಗಳ ನೆನಪಿಗೆ,ಅಂಥಾದ್ದೊಂದು ಸವಿ ನೆನಪು ಬಿಟ್ಟು ಹೋದ "ರಾಜ್ ಗೆ" ಅರ್ಪಿಸುತ್ತಿದ್ದೇನೆ.
2)ಡಿಶ್ಶಮ್ಮ ಎಂದರೆ ಡಿಶ್ ವಾಶರ್ ಮಿಶಿನ್ನು.ಇಲ್ಲಿನ ಪಾತ್ರೆ ತೊಳೆಯುವಾಕೆ! ಲಕ್ಷಮ್ಮ,ಸಾಕಮ್ಮ ಥರ ನಾವುನಮ್ಮನೇಲಿ ಇವಳನ್ನು "ಗೌರವದಿಂದ" ಡಿಶ್ಶಮ್ಮಾ ಅಂತ ಕರೀತೀವಿ.

4 Comments:

Blogger Mahantesh said...

chennagide re !!!! illi (Nashua NH) bore aagi officenalli kuLitAga, nimma bloggaLe odata kAla kaLitA idini...
raaj nenapu tumba different agi nenapu madikoTTIddira..:)

11:01 AM  
Blogger bhadra said...

DiSh-amma na kathe bahaLa tamASheyAgide. idEnu bo-ra NNanavarige paipOTiyA? hAsya lEKanagaLigE oMdu blAgu, citragaLigE oMdu blAgu mattu vividha vicAragaLige oMdu blAgu mADi ellavannU oMdu sUtradalli hiDidiDuvaMte mADi. bahaLa cennAgiratte.

caMdada caMdanagaLu SrIgaMdhavannu elleDeyU eMdeMdigU sUsuttirali

5:56 PM  
Blogger mala rao said...

ಮಹಂತೇಷರೇ,
ನೀವು ಇಲ್ಲಿನ ಆಫೀಸಿನಲ್ಲಿ ಕೂತು ದುರ್ಗದಲ್ಲಿ ಕಾಲ ಕಳೆಯುತ್ತಿರುವುದು ನಿಮ್ಮ ಬಾಸಿನ ಗಮನಕ್ಕೆ ಬಂದರೇ.... ಅಂತ ನನಗೆ ಭಯವಾಗುತ್ತಿದೆ! ನನ್ನನ್ನು `ಸ್ಯೂ' ಮಾಡಿಬಿಡುತ್ತಾರಷ್ಟೇ...ನಿಮ್ಮ ಅಮೆರಿಕನ್ ಬಾಸು!

7:16 PM  
Blogger mala rao said...

ಮಾವಿನರಸರೇ,
ಬೋರಣ್ಣನಿಗೆ ದುರ್ಗದ ಪೈಪೋಟಿಯಾ? ಎಂದಿಗೂ ಇಲ್ಲಾ ಶಿವಾ...
ಸೂರ್ಯನ ಮುಂದೆ ಎಣ್ಣೆ ದೀಪದ ಹಾಗಿದೆ!
ಆಗಾಗ್ಗೆ ಜೆಸ್ಟ್ ಫಾರ್ ವೆರೈಟಿಗೆ ಅಷ್ಟೇ ಸ್ವಲ್ಪ ಹಾಸ್ಯ

ಅಂದ ಹಾಗೆ ನಿಮ್ಮ ಸಲಹೆ ಓದಿ ನನಗೆ ಖುಷಿ ಆಯಿತು
ನಾನು ಮೂರು ಮೂರು ಬ್ಲಾಗಲ್ಲಿ ಬೋರು ಹೊಡೆಸಿದರೆ
ಕನ್ನಡಿಗರ ಗತಿ ಏನು ಅಂತ ....
ನಿಮ್ಮ ಸಲಹೆಯನ್ನೂ ನಾನು ಪಟ್ಟ ಖುಷಿಯನ್ನೂ ನೋಡಿ ಅರವಿಂದನಿಗೆ ಭಯವಾಗ ಹತ್ತಿದೆ "ನೀನು ದಿನಕ್ಕೆ ಮೂರು ಬ್ಲಾಗ್
ಬರೆಯಲು ಕೂತರೆ ಮಾವಿನ ತೋಟದ ಮನೆಯಿಂದ
ನನಗೆ ಊಟ ಬರುತ್ತಾ" ಅಂತಾ ಆತಂಕದಿಂದ ವಿಚಾರಿಸುತ್ತಿದಾನೆ!

7:27 PM  

Post a Comment

Subscribe to Post Comments [Atom]

<< Home