Thursday, September 28, 2006

ದೇವಿ ಭುವನ ಮನಮೋಹಿನಿ


ನನಗೆ ಹೂಗಳೆಂದರೆ ಬಹಳ ಇಷ್ಟ.ಹಾಗಾಗಿ ನನ್ನ ಅಂಗಳದ ತುಂಬಾ ಹೂ ಗಿಡಗಳು ಮತ್ತು ಕ್ಯಾಮರಾ ತುಂಬಾ ಹೂವಿನ ಫೋಟೊಗಳು! ಹೂಗಳು ದಿನವನ್ನೂ,ಮನವನ್ನೂ ಬೆಳಗಿಸುತ್ತವೆ ಅಂತ ನನಗನ್ನಿಸುತ್ತೆ
ಬೇರಾವುದೇ ಬಣ್ಣದ ಹೂವಿನ ಅಂದವೂ, ಸುವಾಸನೆಯೂ ಮನವ ತುಂಬುವ ರೀತಿಯೇ ಬೇರೆ.ಕೇಸರಿ ಬಣ್ಣದ ಹೂ ನನ್ನ ಮನಸ್ಸಿನಲ್ಲಿ ತುಂಬುವ ಭಾವವೇ ಬೇರೆ.ಯಾವುದೇ ಕೇಸರಿ ಬಣ್ಣದ ಹೂ ನೋಡಿದರೂ ನನಗೆ ನಮ್ಮ ರಾಷ್ಟ್ರಧ್ವಜವೇ ನೆನಪಾಗುತ್ತದೆ.ತ್ರಿವರ್ಣ ಮನದ ಅಂಗಳದ ಎತ್ತರದಲ್ಲಿ ಪಟಪಟಿಸುತ್ತದೆಅದೇ ಬಿಳಿ ಮೋಡಗಳನ್ನೋ,ಹಸಿರು ಪ್ರಕೃತಿಯನ್ನೋ ನೋಡಿದಾಗ ಬಾವುಟ ನೆನಪಾಗುತ್ತಾ?ಉಹುಂ...

ಧ್ವಜದೊಂದಿಗೆ ನೆನಪಾಗುವುದು ಚಿಕ್ಕಂದಿನಲ್ಲಿ ಹಾಡುತ್ತಿದ್ದ ದೇಶಭಕ್ತಿಗೀತೆಗಳು ಎಷ್ಟೊಂದು ದೇಶಪ್ರೇಮದ ಹಾಡು ಹಾಡುತ್ತಿದ್ದೆವು ಆಗ...ಬಾಲ್ಯದ ಮುಗ್ಧ ಮನಸ್ಸಿಗೆ ಈ ಹಾಡುಗಳನ್ನು ಹಾಡುತ್ತಾ ಎಂಥಾ ಹೆಮ್ಮೆ ಇತ್ತು ದೇಶದ ಬಗ್ಗೆ...
ಅಂಥದ್ದೊಂದು ಗೀತೆ "ದೇವಿ ಭುವನ ಮನ ಮೋಹಿನಿ"

ನಾನು ಹೈಸ್ಕೂಲ್ ನಲ್ಲಿ ಎರಡು ತಿಂಗಳು ಹಾಡಿದ ಪ್ರಾರ್ಥನಾ ಪದ್ಯ.ಅಷ್ಟರಲ್ಲಿ ತಂದೆಯವರಿಗೆ ಬೇರೆ ಊರಿಗೆ ವರ್ಗವಾಗಿದ್ದರಿಂದ ನಾನು ಹೊಸ ಶಾಲೆಯಲ್ಲಿ ಹೊಸಪ್ರಾರ್ಥನಾ ಪದ್ಯ ಕಲಿಯಬೇಕಾಯಿತು.ಹೀಗೆ`ಭುವನ ಮನ ಮೋಹಿನಿ' ಮರೆತು ಹೋದಳು

ಈಗ ಕೆಲವು ದಿನಗಳಿಂದ ಕೇಸರಿ ಹೂಗಳನ್ನು ನೋಡಿದಾಗಲೆಲ್ಲಾ "ದೇವಿ ಭುವನ ಮನ ಮೋಹಿನಿ"ಯದೇ ನೆನಪಾಗುತ್ತಿದೆ.ಎಷ್ಟೆಷ್ಟು ಪ್ರಯತ್ನಿಸಿದರೂ ಹಾಡಿನ ಕೆಲವು ವಾಕ್ಯಗಳು,ಪದಗಳು ನೆನಪಾಗುತ್ತವೇ ಹೊರತು ಪೂರ್ತಿ ಪದ್ಯ ನೆನಪಾಗುತ್ತಿಲ್ಲ.

ನಿಮ್ಮಲ್ಲಿ ಯಾರಿಗಾದರೂ ಈ ದೇಶಭಕ್ತಿ ಗೀತೆ ಬರುತ್ತಾ?ನಿಮಗೆ ಬಂದರೆ ನನಗೆ ದಯವಿಟ್ತು ಕಳಿಸುತ್ತೀರಾ?
ಕಳೆದು ಹೋಗಿರುವ ನನ್ನ ಈ ಹಾಡನ್ನು ಹುಡುಕಿ ಕೊಡುವಿರಾ?

5 Comments:

Blogger Anveshi said...

ಹೂ ಚೆನ್ನಾಗಿದೆ
ತಕ್ಷಣವೇ ಕಳುಹಿಸಿಕೊಡುವುದು.
ಇಲ್ಲವಾದಲ್ಲಿ, ಅದನ್ನು ಚಟ್ನಿ ಮಾಡಿ ತಿನ್ನಲಾಗುವುದು.

4:07 AM  
Anonymous Anonymous said...

ಭುವನ ಮನಮೋಹಿನಿ ಹಾಡು ಯಾವುದೋ ನಾನು ಕೇಳೇ ಇಲ್ಲ. ಭುವನ ಮನಮೋಹಿನಿ ಸಿಗುವ ತನಕ - "ತ್ರಿಭುವನ ಜನನಿ ಜಗನ್ಮೋಹಿನಿ " ಕೇಳಿ ಅಡ್ಜಸ್ಟ್ ಮಾಡಿಕೊಳ್ಳಿ . ಹೇಗೂ ನವರಾತ್ರಿ ಟೈಮು :)

http://ww.smashits.com/music/kannada/songs/385/smashits-collection-iii.html#

1:10 PM  
Blogger mala rao said...

ಬೋರಣ್ಣಾ
ದಯವಿಟ್ಟು ದುರ್ಗವನ್ನು ಚಟ್ನಿ ಮಾಡಬೇಡಾ
ಬ್ಯೂರೊದ ಅಡ್ರೆಸ್ಸಿಗೆ ಒಂದು ಗೊನೆ ಬಾಳೇಹಣ್ಣು ಪಾರ್ಸಲ್ ಮಾಡುವೆ ಸರೀನಾ...

7:31 PM  
Blogger mala rao said...

ಶ್ರೀತ್ರಿ ಅವರೇ
ನಿಮ್ಮ ಪ್ರೀತಿಗೆ ತುಂಬಾ ಥ್ಯಾಂಕ್ಸ್
ನೀವು ಕಳಿಸಿರುವ ಹಾಡು ನನ್ನ ಫೇವರೆಟ್ ಗಳಲ್ಲಿ ಒಂದು
ರೇಡಿಯೋ ಪ್ರೋಗ್ರಾಂ ನಲ್ಲಿ ನಿಮ್ಮ ದನಿ ಕೇಳಲು ಸಿಕ್ಕಿತು
ಅಷ್ಟು ದೂರದಿಂದ ಕರೆಮಾಡಿದ್ದಕ್ಕೋ ಏನೋ ಅಷ್ಟು ಸ್ಪಷ್ಟವಾಗಿ ಕೇಳಿಸಲಿಲ್ಲಾ

7:35 PM  
Blogger ಸುನಿಲ್ ಜಯಪ್ರಕಾಶ್ said...

ಈ ಪೋಸ್ಟ್ ಹಾಕಿ ಸುಮಾರು ಒಂದು ವರ್ಷ ಆಗಿದೆ. ಆದರೂ ನಿಮಗೆ ಬೇಕಿದ್ದ ಹಾಡು ಇನ್ನೂ ಸಿಕ್ಕಿಲ್ಲವಾದರೆ, ಅದರ ಸಾಹಿತ್ಯ ಇಲ್ಲಿ ಹಾಕಲು ಪ್ರಯತ್ನಿಸುತ್ತಿದ್ದೇನೆ. ಇದರಲ್ಲಿ ಮೂರು ಚರಣಗಳಿವೆ, ಮೂರನೆಯದು ಏನು ಎಂಬುದು ನನಗೆ ಮರೆತುಹೋಗಿದೆ. ನೆನಪಾದ ತಕ್ಷಣ ಮತ್ತೆ ಹಾಕುವೆ.

ದೇವಿ ಭುವನ ಮನಮೋಹಿನಿ
ನಿರ್ಮಲ ಸೂರ್ಯಕರೋಜ್ವಲ ಧರಣಿ
ಜನಕ ಜನನಿ ಜನನಿ [ಪಲ್ಲವಿ]

ನೀಲ ಸಿಂಧುಜಲ ದೌತಚರಣಚಲ
ಅನಿಲವಿಕಂಪಿತ ಶ್ಯಾಮಲಾಂಚನ
ಅಂಬರಚುಂಬಿತ ಪಾಲಹಿಮಾಚಲ
ಶುಭ್ರತುಷಾರ ಕಿರೀಟಿಣಿ [೧]

ಪ್ರಥಮಪ್ರಭಾತ ಉದಯತವಗಗನೆ
ಪ್ರಥಮ ಸಾಮರವ ತವತಪೋವನೆ
ಪ್ರಥಮಪ್ರಸಾರಿತ ತವವನಭವನೆ
ಜ್ಞಾನಧರ್ಮಹಿತ ಕಾರ್ಯಕಾರಿಣಿ [೨]

6:47 AM  

Post a Comment

Subscribe to Post Comments [Atom]

<< Home