Tuesday, December 05, 2006

ಮಾರ್ನಿಂಗ್ ಗ್ಲೋರಿ ಪೂಲ್


ಪೂಲ್ ನ ನಡುವಲ್ಲಿ ಕೊತಕೊತ ಕುದಿ ಕುದಿಯುತ್ತಿರುವ ನೀರು....

ಚಿತ್ರಗಾರನೊಬ್ಬನ ಬೃಹತ್ ಪೆಲೆಟ್ ನಂತೆ ಕಾಣುವ ಪೂಲ್....

ನೀಲಿ,ಹಸಿರು,ಬಂಗಾರ,ಕಂದು,ಕೆಂಪುಗಳ ವರ್ಣ ವೈಭವ...

ಕುರುಡನೊಬ್ಬ ಆನೆ ವರ್ಣಿಸಿದಂತೆ ನಾನು ಮಾರ್ನಿಂಗ್ ಗ್ಲೋರಿ ಪೂಲ್ ನ ಸೊಬಗನ್ನು ವರ್ಣಿಸುತ್ತಿದ್ದೇನೆ!

ವಿಶ್ವದ ಮೊದಲ ನ್ಯಾಶಿನಲ್ ಪಾರ್ಕ್ ಅಮೇರಿಕಾದ ವಯೋಮಿಂಗ್ ರಾಜ್ಯದಲ್ಲಿರುವ `ಯೆಲ್ಲೋ ಸ್ಟೋನ್ ನ್ಯಾಶಿನಲ್ ಪಾರ್ಕ್ನನಲ್ಲಿ ಈ ಮಾರ್ನಿಂಗ್ ಗ್ಲೋರಿ ಪೂಲ್ ಇದೆ.ಈ ಪೂಲ್ ಒಂದು ನೈಸರ್ಗಿಕ ಗೀಸರ್.ನೆಲದೊಳಗಿನ ಶಾಖೋತ್ಪನ್ನ ಕ್ರಿಯೆಯ ಪರಿಣಾಮವಾಗಿ ಅಂತರ್ಜಲ ಬಿಸಿಯಾಗಿ ಚಿಮ್ಮುವ ಕ್ರಿಯೆ ಈ ಸುಂದರ ಪೂಲ್ ಅನ್ನು ಸೃಷ್ಟಿಸಿದೆ ಬೇರೆ ಬೇರೆ ತಾಪಮಾನದಲ್ಲಿ(ಶಾಖದಲ್ಲಿ) ಬೆಳೆಯುವ ವಿವಿಧ ಜಾತಿಯ ಆಲ್ಗೆಗಳು(Alge) ಪೂಲ್ ಗೆ ಬಣ್ಣ ಬಣ್ಣದ ಉಡುಗೆ ತೊಡಿಸಿವೆ ಉದಾ-ಪೂಲ್ ನ ನಡುವಿನ ತಾಪಮಾನ ಸುಮಾರು167 F ರಿಂದ 180F ಮತ್ತು ಇದು ನೀಲಿ ಆಲ್ಗೆ ಬೆಳೆಯಲು ಪ್ರಶಸ್ತ ತಾಪಮಾನ.ಹೊರ ಅಂಚು ಅಷ್ಟು ತಾಪ ಹೊಂದಿಲ್ಲವಾಗಿ ಕಂದು ಆಲ್ಗೆ ಗೆ ಸರಿಯಾದ ತಾಪಮಾನ...ಹೀಗೆ...

ಒಂದೊಮ್ಮೆ ಮಾರ್ನಿಂಗ್ ಗ್ಲೋರಿ ಹೂವಿನಷ್ಟೇ ಸುಂದರ ಕಡು ನೀಲಿ ಬಣ್ಣ ಹೊಂದಿ ಕಂಗೊಳಿಸುತ್ತಿದ್ದ ಈ ಪೂಲ್ ಪ್ರವಾಸಿಗರ ಬೇಜವಾಬ್ದಾರಿ ವರ್ತನೆಯಿಂದಾಗಿ (ನಾಣ್ಯ ,ಕಲ್ಲು ಎಸೆಯುವುದರಿಂದಾಗಿ) ಸೊಬಗು ಕಳೆದು ಕೊಂಡು Fading glory ಅಂತ ಕರೆಸಿ ಕೊಳ್ಳುತ್ತಿದೆ

0 Comments:

Post a Comment

Subscribe to Post Comments [Atom]

<< Home