Sunday, December 31, 2006

ನೆಮ್ಮದಿ ತರಲಿ



ನೀಡು ಬಾ ನೀಡು ಬಾ
ಹೊಸ ವರ್ಷಕೆ ಹೊಸ ಕೊಡುಗೆಯ
ಈ ನಾಡಿಗೆ ನೀಡು ಬಾ
ನೀಡು ಬಾ ನೀಡು ಬಾ

ಚದುರಿ ಬಿದ್ದ ಚೂರುಗಳಿಗೆ ಅಯಸ್ಕಾಂತ ಶಕ್ತಿಯ
ಮುರಿದು ಬಿದ್ದ ಬಯಕೆಗಳಿಗೆ ಹಾರುವಂಥ ರೆಕ್ಕೆಯ
ಕಣ್ಣ ತೆರೆವ ಬೀಜಗಳಿಗೆ ಮೇಲೇಳುವ ತ್ರಾಣವಾ
ನೀಡು ಬಾ ನೀಡು ಬಾ

ಗಡಿ ಕಾಯುವ ಎಚ್ಚರಕ್ಕೆ ಬೆಂಬಲಗಳ ರಕ್ಷೆಯಾ
ದುರಾಕ್ರಮಣದಾತುರಕ್ಕೆ ಸಿಡಿ ಗುಂಡಿನ ಶಿಕ್ಷೆಯಾ
ಸ್ನೇಹ ,ಪ್ರೀತಿ,ವಿಶ್ವಾಸಕೆ ಮುಗುಳುನಗೆಯ ಮಾಲೆಯಾ
ನೀಡು ಬಾ ನೀಡು ಬಾ

ದುಡಿದು ದಣಿದು ಮಲಗಿದೆದೆಗೆ ಕೃತಜ್ಞತೆಯ ನಮನವಾ
ಸುಪ್ತ ಉರಿವ ದೀಪಗಳಿಗೆ ಹೊಸ ಬತ್ತಿಯ ತೈಲವಾ
ಹೊಸನಾಡಿಗೆ,ಹೊಸ ಗಾಡಿಯ,ಹೊಸ ಕುದುರೆಯ ಜೋಡಿಯಾ
ನೀಡು ಬಾ ನೀಡು ಬಾ


"ಹೊಸ ವರ್ಷ ನಮ್ಮೆಲ್ಲರಿಗೂ ನೆಮ್ಮದಿ ತರಲಿ"

***************************


ಟಿಪ್ಪಣಿ- ಈಗ್ಗೆ ಹಲವು ವರುಷಗಳ ಹಿಂದೆ ಬೆಂಗಳೂರು ಆಕಾಶವಾಣಿಯಲ್ಲಿ
ನಾನು ಕೇಳಿದ ಈ ಹಾಡನ್ನು ನನಗೆ ನೆನಪಿದ್ದಂತೆ ಇಲ್ಲಿ ಬರೆದಿದ್ದೇನೆ
ಕವನದ ಬರೆದವರ ಹೆಸರು ನೆನಪಿಟ್ಟು ಕೊಳ್ಳದ್ದಕ್ಕೆ ನನ್ನಮೇಲೆ ನನಗೆ ಕೋಪ ಬರುತ್ತಿದೆ
ನಿಮಗೆ ಗೊತ್ತಿದ್ದರೆ ತಿಳಿಸಿ ಹಾಗೇ ಸಾಹಿತ್ಯದಲ್ಲಿ ಏನಾದರೂ ತಪ್ಪಿದ್ದರೆ ತಿದ್ದಿ

3 Comments:

Anonymous Anonymous said...

hosa varash tarali nimage harusha..

aparupa enilla re!!!! heege swalp kelsa :(...adakke...

10:52 PM  
Anonymous Anonymous said...

ಈ ಹಾಡು ನನಗೂ ಚೆನ್ನಾಗಿ ನೆನಪಿದೆ.ಹಾಡಿನ ಶೈಲಿ ನೋಡಿದರೆ ಬಿ.ಆರ್.ಲಕ್ಷ್ಮಣರಾವ್ ಇರಬಹುದು ಅನ್ನಿಸುತ್ತಿದೆ.

ಹೊಸ ವರ್ಷದಲ್ಲಿ ಚಿತ್ರದುರ್ಗದಲ್ಲಿ ಹೊಸ ಹೂವುಗಳು ಅರಳಿ ನಗಲಿ.

8:49 AM  
Blogger mala rao said...

ಶುಭಾಶಯ ಕೋರಿದ ಮಹಂತೇಶರಿಗೂ, ಶ್ರೀತ್ರಿ ಅವರಿಗೂ
ಧನ್ಯವಾದಗಳು

4:13 PM  

Post a Comment

Subscribe to Post Comments [Atom]

<< Home