ಗಾಳಿ ಬೀಸಿ ಕಂಪು ತಂದು...
ಏಕ್ ಹವಾ ಕಾ ಜೋಂಖಾ.....ಮೆಲ್ಲನೆ ತಟ್ಟಿ ಮುಂದೆ ಸರಿಯಿತು...
*********
ನನ್ನ ಸ್ನೇಹಿತೆಯ ಬಾಲ್ಕನಿಯ ಮೂಲೆಯಲ್ಲಿ ಚರ್ಚೆಯಲ್ಲಿ ಮುಳುಗಿ ಹೋಗಿದ್ದೆವು ಇಬ್ಬರೂ....
ಅವಳು ಸ್ಪಾನಿಷ್ ಸಾಹಿತ್ಯವನ್ನು ಆಳವಾಗಿ ಓದಿ ಕೊಂಡವಳು.ನನ್ನದು ಕನ್ನಡ ಸಾಹಿತ್ಯದಲ್ಲಿ ಆಸಕ್ತಿ
ಇಬ್ಬರಿಗೂ ಅಷ್ಟಿಷ್ಟು ಇಂಗ್ಲಿಷ್ ಸಾಹಿತ್ಯ ಗೊತ್ತು....ಚರ್ಚೆಗೆ ಕಾವೇರಲು ಸಾಕಲ್ಲಾ...
ಆಗ....
ಏಕ್ ಹವಾ ಕಾ ಜೋಂಖಾ.....ಮೆಲ್ಲನೆ ತಟ್ಟಿ ಮುಂದೆ ಸರಿಯಿತು...
ಮತ್ತು ನಮ್ಮ ಮಾತಿನ ಹಾದಿಯನ್ನೇ ಬದಲಿಸಿತು!
ಇದ್ಯಾವ ಸುಮಧುರ ಗಂಧ...? ನನಗರಿವಿಲ್ಲದಂತೇ ಮಾತು ಜಾರಿತು....
ಅವಳು ಒಮ್ಮೆ ಅತ್ತ ನೋಡಿ ಮೆಲ್ಲನೆ ಉಸುರಿದಳು....`ನಾನೂ ಅವನೂ ಒಮ್ಮೊಮ್ಮೆ ಇಲ್ಲಿ ನಿಂತು ಮಾತಾಡುವಾಗ ಹೀಗೇ....ಒಮ್ಮೆ ಗಾಳಿ ಬೀಸಿದ ಘಳಿಗೆ... ಮೌನವಾಗಿ ಬಿಡುತ್ತೇವೆ ಒಬ್ಬರನ್ನೊಬ್ಬರು ನೋಡುತ್ತಾ...'ಅವಳು ಯಾವುದೋ ಸ್ವಪ್ನ ಲೋಕದಲ್ಲಿ ಇರುವವಳಂತೆ ಮಾತಾಡುತಿದ್ದಳು ಕಣ್ಣುಗಳಲ್ಲಿ ಈ ತನಕ ಕಾಣದ ಕಾಂತಿ....
***************
ಕೆಲ ಸಮಯದ ನಂತರ ಅವಳನ್ನು ಕೇಳಿದೆ `ಇದ್ಯಾವ ಹೂವು..?'
ಅಷ್ಟೊತ್ತಿಗೆ ಅವಳು ಭೂಮಿ ಮೇಲೆ ವಾಪಸ್ಸು ಬಂದಿದ್ದಳು `ಓ...ಅದಾ ಬಾ ಇಲ್ಲಿ ತೋರಿಸ್ತೇನೆ...' ಅಂತ ಸಡಗರದಿಂದ ಕರೆದೊಯ್ದಳು ಅಚ್ಚಬಿಳಿ,ತಿಳಿಗುಲಾಬಿ,ದಟ್ಟಪಿಂಕ್ ಮತ್ತು ನೇರಳೆ ಬಣ್ಣದ ಪುಟಾಣಿ ಗೊಂಚಲುಗಳಲ್ಲಿ ನಗುತ್ತಿದ್ದ ಹೂಗಳನ್ನು ತೋರಿಸಿ `ಇದೇ Stock' ಅಂದಳು
ನನಗೆ ಭಯಂಕರ ಸಿಟ್ಟು ಬಂತು! ಇಂಥಾ ಸುಮಧುರ ಪರಿಮಳದ ಸುಂದರಿಗೆ `ಪ್ಪೆಪ್ಪೆಪ್ಪೆ' ಎನ್ನುವಂಥಾ ಹೆಸರು! ಈ unromantic ಹೆಸರಿಟ್ಟ ವ್ಯಕ್ತಿನ ಚೂರು ಚೂರು ಮಾಡಿ ಉಪ್ಪಿನ ಕಾಯಿ ಹಾಕಿದರೂ ಪಾಪ ಬರುವುದಿಲ್ಲ ಅನ್ನಿಸಿತು!
***************
ನನ್ನ ಸ್ನೇಹಿತೆ ನಮ್ಮೂರು ಬಿಟ್ಟು ಹೊರಡುವಾಗ ಅವಳ ಕೆಲವು ಗಿಡಗಳೊಂದಿಗೆ Stockಅನ್ನು ನನ್ನಲ್ಲಿ ಕೊಟ್ಟು ಹೋದಳು
ಈಗ ನನ್ನ ಅಂಗಳದಲ್ಲಿ ಸುಗಂಧದ ಹೊಳೆ ಹರಿಯುತ್ತಿದೆ.
ಗಾಳಿ ಬೀಸಿ ಕಂಪು ತಂದು ಮನಕ್ಕೆ ಮುದ ನೀಡಿದಾಗಲೆಲ್ಲಾ ನನ್ನ ಗೆಳತಿಯ ನೆನಪಾಗುತ್ತದೆ...
ಇಹದ ಪರಿಮಳದ ಹಾದಿ-2
7 Comments:
ಮಾಲಾ,
Stock ಬದಲು ನೀವು ಹೂವಿಗೆ ಎನು ಹೆಸರೀಡಬೇಕೆಂದು ಇದೀರಾ?
ಮಾಲಾ, Ziva ಎಂಬ Divaಳನ್ನು ನಮ್ಮ ನಡುಮನೆಗೂ ನೀನೇ ಕೊಟ್ಟು, ಈಗ ಈ ಪುಟ್ಟ ಅಪ್ಸರೆಯರನ್ನು ಪರಿಚಯಿಸುತ್ತಿದ್ದೀಯ. ಧನ್ಯವಾದಗಳು.
ಮಾಲಾ,Stock ಎನ್ನುವ ಹೆಸರು ನಿಮಗೆ ಇಷ್ಟವಾಗದಿದ್ದರೆ ಈ ಸುಂದರಿಗೆ ನೀವೇ ನಿಮಗೆ ಬೇಕಾದ ಹೆಸರಿಡಬಹುದಲ್ಲವೇ?
ಶಿವು ಮತ್ತು ಶ್ರೀತ್ರೀ
ನಿಮ್ಮ ಸಲಹೆ ಚೆನ್ನಾಗಿದೆ
ನಾನೂ ಹೊಸ ಹೆಸರು ಯೋಚಿಸುತ್ತಿದ್ದೇನೆ
ನಿಮ್ಮಲ್ಲಿ ಯಾವುದಾದರು ಒಪ್ಪುವ ಹೆಸರಿದ್ದರೆ ಹೇಳಿ...
ಜ್ಯೋತಿ,
ನಿಮ್ಮನೇಲಿ ಇನ್ನೂ ಅರಳುತ್ತಿದೆಯೇ?ನಮ್ಮನೇಲಿ ಮೊದಲ
ಬ್ಯಾಚ್ ದು ಹೂ ಮುಗಿಯಿತು ಎರಡನೇದು ಮೂರ್ನಾಲ್ಕು ದಿನದಲ್ಲಿ ಅರಳಬಹುದು
ಮಾಲಾ,
ಇದಕ್ಕೆ ನನಗೆ ತೋಚಿದ ಹೆಸರು..
ಸುಗಂಧಧಾರೆ !
ಶಿವು ಅವರೇ,
ಸುಂದರ ಹೆಸರು ಸೂಚಿಸಿದ್ದಕ್ಕೆ ಇಗೊಳ್ಳಿ `ಥ್ಯಾಂಕ್ಸ್'
ಇನ್ ಮೇಲೆ ನಾನು ಸುಗಂಧ ಧಾರಾ ಎಂದೇ ಕರೆಯುವೆ
ಮತ್ತು ಸ್ನೇಹಿತರಿಗೂ ಹಾಗೇ ಪರಿಚಯಿಸುತ್ತೇನೆ
Post a Comment
Subscribe to Post Comments [Atom]
<< Home